ಸೋಮವಾರಪೇಟೆ, ಜ. ೨೯: ಇಲ್ಲಿನ ಟೀಮ್ ಎ.ಬಿ.ಡಿ. ವತಿಯಿಂದ ಐ.ಪಿ.ಎಲ್. ಮಾದರಿಯಲ್ಲಿ ಹೊನಲು ಬೆಳಕಿನ ಸೀಸನ್-೩ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫೆ. ೨೪ ಮತ್ತು ೨೫ ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎಲ್. ಅರ್ಜುನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಡಾ. ಮಂಥÀರ್ ಗೌಡ ಚಾಲನೆ ನೀಡಲಿದ್ದಾರೆ. ವಿಜೇತ ತಂಡಗಳಿಗೆ ಪ್ರಥಮ ರೂ. ೫೦ ಸಾವಿರ ನಗದು, ದ್ವಿತೀಯ ಸ್ಥಾನಕ್ಕೆ ರೂ. ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು ಎಂದರು. ಇದರೊಂದಿಗೆ ಉತ್ತಮ ಆಟಗಾರ, ಬೌಲರ್, ಫೀಲ್ಡರ್, ಉತ್ತಮ ದಾಂಡಿಗ ಸೇರಿದಂತೆ ಇನ್ನಿತರ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು. ಟೂರ್ನಿಯಲ್ಲಿ ಒಟ್ಟು ೧೩ ಜನರನ್ನೊಳಗೊಂಡ ೮ ತಂಡಗಳು ಭಾಗವಹಿಸಲಿದ್ದು, ಬಿಡ್ ಮೂಲಕ ತಂಡವನ್ನು ಪ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ. ಲೀಗ್ ಮಾದರಿಯಲ್ಲಿ ೬ ಓವರ್‌ಗಳ ಪಂದ್ಯಾಟ ನಡೆಯಲಿದ್ದು, ಶಿಸ್ತುಬದ್ಧ ಆಟಗಾರನಿಗೆ ಪ್ರಶಸ್ತಿ ನೀಡಲಾಗುವುದು. ಸೋಮವಾರಪೇಟೆ ವ್ಯಾಪ್ತಿ ಆಟಗಾರರಿಗೆ ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಎಲ್ಲ ತಂಡದ ಆಟಗಾರರು ಸಮವಸ್ತç ಧರಿಸಿ ಆಡಬೇಕಿದೆ ಎಂದರು.

ಪAದ್ಯಾಟದ ಆಕರ್ಷಣೆಯಾಗಿ ಮಾರುತಿ ೮೦೦ ಕಾರುಗಳು ಹಾಗೂ ಆರ್‌ಎಕ್ಸ್. ೧೦೦ ಸಿ.ಸಿ. ಯಮಹಾ ಬೈಕ್‌ಗಳ ಉತ್ತಮ ನಿರ್ವಹಣೆಗೆ ಬಹುಮಾನ ನೀಡಲಾಗುವುದು. ಮಾರುತಿ ೮೦೦ ಕಾರುಗಳ ರಿವರ್ಸ್ ಸ್ಕಿಲ್ ಡ್ರೆöÊವಿಂಗ್ ಸ್ಪರ್ಧೆಯಿದ್ದು, ಮೂರು ವಿಭಾಗದಲ್ಲಿ ಬಹುಮಾನಗಳನ್ನು ನೀಡಲಾಗುತ್ತದೆ. ಫೆ. ೨೪ ರಂದು ಬೆಳಿಗ್ಗೆ ೧೦ ಗಂಟೆಗೆ ಈ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು. ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ತಾ. ೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. ೯೦೧೯೦೯೪೯೪೧ ಅಥವಾ ೭೭೬೦೮೦೨೫೯೦ ಸಂಪರ್ಕಿಸಲು ಮನವಿ ಮಾಡಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಆರ್. ಪೃಥ್ವಿ, ಕಾರ್ಯದರ್ಶಿ ಡಿ.ಪಿ. ಗಗನ್, ಗೌರವ ಅಧ್ಯಕ್ಷ ಚೇತನ್, ಸದಸ್ಯ ಎಸ್.ಎ. ಸಂದೇಶ್ ಉಪಸ್ಥಿತರಿದ್ದರು.