*ಗೋಣಿಕೊಪ್ಪ, ಜ. ೩೦: ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕಕ್ಕೆ ಶಾಸಕ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಭೆ ನಡೆಯಿತು.
ಜಿಲ್ಲಾ ಉಸ್ತುವರಿ ಸಚಿವ ಬೋಸರಾಜು ಉಪಸ್ಥಿತಿಯಲ್ಲಿ ಶಾಸಕ ಪೊನ್ನಣ್ಣ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಎಂ. ಮಂಜುಳಾ, ಉಪಾಧ್ಯಕ್ಷರಾಗಿ ಕುಮಾರ್ ಮಹದೇವ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎನ್. ಪ್ರಕಾಶ್, ಸಹಕಾರ್ಯದರ್ಶಿಯಾಗಿ ಪಿ.ಜೆ. ಸುಬ್ರಮಣಿ ಮತ್ತು ನಿರ್ದೇಶಕರುಗಳಾಗಿ ಮುನೀರ್, ಬಿ.ಆರ್. ಪುಷ್ಪ, ವಿಶ್ವನಾಥ್, ಸುನಿಲ್, ನೇತ್ರಾವತಿ ಹೆಚ್.ಆರ್, ಶಾರದಾ, ಪ್ರವೀಣ್, ಪಾಂಡು, ಧರ್ಮರಾಜ್, ಕೃಷ್ಣ, ಸುಬ್ರಮಣಿ, ಬೋಜಪ್ಪ, ಶೀಲಾ ಹಾಗೂ ರತಿ ವೈ.ಎಂ. ಅಧಿಕಾರ ವಹಿಸಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಗಣಪತಿ, ಹಿರಿಯ ಮುಖಂಡ ಕೊಳ್ಳಿಮಡ ಅಜಿತ್ ಅಯ್ಯಪ್ಪ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ಪೊನ್ನಂಪೇಟೆ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷೆ ಎಂ. ಮಂಜುಳಾ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಾನಂಡ ಪೃಥ್ವಿ, ಪೊನ್ನಂಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ, ರಾಜ್ಯ ಸೇವಾದಳ ಪ್ರಧಾನ ಕಾರ್ಯದರ್ಶಿ ತೆರೆಸ್, ಪ್ರಮುಖರಾದ ಟಾಟು ಮೊಣ್ಣಪ್ಪ ಇದ್ದರು.