ಸೋಮವಾರಪೇಟೆ, ಜ. ೩೦: ಚೌಡ್ಲು ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗೌಡಳ್ಳಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಚೌಡ್ಲು ಸಮುದಾಯ ಭವನದಲ್ಲಿ ನಡೆಯಿತು.
ಮಡಿಕೇರಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಕರುಂಬಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದಾರೆ. ಆದರೂ ಜಿಲ್ಲೆಗೆ ಹೆಚ್ಚಿನ ರಕ್ತದ ಬೇಡಿಕೆಯಿದೆ ಎಂದರು.
ರಕ್ತದಾನದಿAದ ದಾನಿಗಳ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲದ ಕಾರಣ, ಹೆಚ್ಚಿನ ಜನರು ರಕ್ತದಾನ ಮಾಡಿ, ಇನ್ನೊಂದು ಜೀವವನ್ನು ಉಳಿಸುವ ಮಹಾನ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು. ನೆಗೆಟಿವ್ ಬ್ಲಡ್ ಗ್ರೂಪ್ನ ರಕ್ತದ ಕೊರತೆ ಹೆಚ್ಚಾಗಿದೆ. ಅಪರೂಪದ ಬ್ಲಡ್ಗ್ರೂಪ್ ಇರುವವರು ಅವಶ್ಯಕವಾಗಿ ರಕ್ತದಾನ ಮಾಡಿದರೆ ಉಪಯೋಗವಾಗುತ್ತದೆ. ಇಂತಹ ಅಪರೂಪದ ರಕ್ತದ ಗುಂಪು ಹೊಂದಿರುವವರಿಗೆ ಬೇರಾವುದೇ ರಕ್ತ ಹೊಂದಿಕೆಯಾಗುವುದಿಲ್ಲ. ಅವರ ಜೀವ ಉಳಿಸಲು ಅಪರೂಪದ ರಕ್ತದ ಗುಂಪು ಹೊಂದಿರುವವರು ರಕ್ತದಾನ ಮಾಡಬೇಕು ಎಂದು ಹೇಳಿದರು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ ಮತ್ತು ಸದಸ್ಯರು, ಪಿ.ಡಿ.ಓ., ಸಮುದಾಯ ಆರೋಗ್ಯ ಅಧಿಕಾರಿಗಳಾದ ಭೂಮಿಕ ಇದ್ದರು.