ಮಡಿಕೇರಿ, ಜ. ೨೯: ಇದೇ ಮೊದಲ ಬಾರಿಗೆ ಲೀಗ್ ಮಾದರಿಯಲ್ಲಿ ಮರಗೋಡುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ನಲ್ಲಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರನ್ನರ್ಸ್ ಪ್ರಶಸ್ತಿಯನ್ನು ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡ ಪಡೆದುಕೊಂಡಿದೆ. ಎರಡು ಬಲಿಷ್ಠ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಅವರ ಏಕೈಕ ಗೋಲಿನಿಂದ ಹಿಂದೂ ಮಲಯಾಳಿ ಸಮಾಜ ಮರಗೋಡು ಮಲಯಾಳಿ ಫುಟ್ಬಾಲ್ ಕಪ್ ಪ್ರಶಸ್ತಿ ಜಯಿಸಿತು.
ಇದಕ್ಕೂ ಮೊದಲು ಮೊದಲ ಸೆಮಿಫೈನಲ್ ಪಂದ್ಯವು ಶ್ರೀನಿಥಿ ಎಫ್.ಸಿ ಒಂಟಿಯAಗಡಿ ಹಾಗೂ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡಗಳ ನಡುವೆ ನಡೆಯಿತು. ಅತ್ಯಂತ ಕುತೂಹಲಕಾರಿ ಪಂದ್ಯದಲ್ಲಿ ಎರಡು ತಂಡವು ೧-೧ ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿದ್ದು, ಶ್ರೀನಿಥಿ ಎಫ್.ಸಿ ತಂಡದ ಪರವಾಗಿ ಸತ್ಯ ಹಾಗೂ ಚಾಲೆಂಜರ್ಸ್ ಎಫ್.ಸಿ ತಂಡದ ಪರವಾಗಿ ವಿಷ್ಣು ಗೋಲು ಗಳಿಸಿದರು. ಪೆನಾಲ್ಟಿ ಶೂಟೌಟ್ನ ಐದು ಕಿಕ್ಕ್ಗಳಲ್ಲಿ ಎರಡು ತಂಡವು ಸಮಬಲ ಸಾಧಿಸಿತು. ಸಡನ್ ಡೆತ್ನಲ್ಲಿ ೧೦-೦೯ ಪೆನಾಲ್ಟಿ ಶೂಟೌಟ್ ಗೋಲುಗಳಿಂದ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡವು ಗೆದ್ದು ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಹಿಂದೂ ಮಲಯಾಳಿ ಸಮಾಜ ಮರಗೋಡು ಹಾಗೂ ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡಗಳ ನಡುವೆ ನಡೆಯಿತು. ಚಾಲೆಂಜರ್ಸ್ ಎಫ್.ಸಿ ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಹಾಗೂ ಉಮೇಶ್ ಮರಗೋಡು ಅವರ ತಲಾ ಒಂದು ಗೋಲುಗಳ ನೆರವಿನಿಂದ ಚಾಮುಂಡೇಶ್ವರಿ ಅರೆಕಾಡು ತಂಡವನ್ನು ಮಣಿಸಿ ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡವು ೨-೦ ಗೋಲುಗಳ ಅಂತರದಿAದ ಗೆಲುವು ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು.
ತಾ.೨೬ ರಿಂದ ೨೮ ವರೆಗೆ ನಡೆದ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ನಲ್ಲಿ ೦೮ ತಂಡಗಳು ಹಾಗೂ ೭೨ ಆಟಗಾರರು ಭಾಗವಹಿಸಿದ್ದರು. ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಹಿಂದೂ ಮಲಯಾಳಿ ಸಮಾಜ ಮರಗೋಡು ತಂಡದ ನಾಯಕ ಅಜಿತ್ ಚೆಟ್ಟಳ್ಳಿ ಪಡೆದುಕೊಂಡರು. ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡದ ನಾಯಕ ಶರತ್(ಕಣ್ಣ) ಭಾಜನರಾದರು. ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಚಾಲೆಂಜರ್ಸ್ ಎಫ್.ಸಿ ಚೆನ್ನಯ್ಯನಕೋಟೆ ತಂಡದ ಅಭಿಷೇಕ್ ಕುಶಾಲನಗರ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಶ್ರೀನಿಥಿ ಎಫ್.ಸಿ ಒಂಟಿಯAಗಡಿ ತಂಡದ ಸತ್ಯ ಪಡೆದುಕೊಂಡರು. ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಚಾಮುಂಡೇಶ್ವರಿ ಫ್ರೆಂಡ್ಸ್ ಅರೆಕಾಡು ತಂಡದ ನೀಕ್ಷಿತ್ ಪಡೆದುಕೊಂಡರು. -ಇಸ್ಮಾಯಿಲ್