ಮಡಿಕೇರಿ, ಜ. ೨೯: ಮಡಿ ಕೇರಿಯ ರಾಜಾಸೀಟ್‌ನಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಸುಮಾರು ೭೦ ಸಾವಿರ ಮಂದಿಯನ್ನು ಸೆಳೆದಿದ್ದು, ೩ ದಿನಗಳಲ್ಲಿ ಸುಮಾರು ರೂ. ೯ ರಿಂದ ೧೦ ಲಕ್ಷ ಹಣ ಪ್ರವೇಶಾತಿ ಶುಲ್ಕದಿಂದ ಸಂಗ್ರಹಗೊAಡಿದೆ. ಇದರೊಂದಿಗೆ ಪ್ರದ ರ್ಶನ ಹಾಗೂ ಮಾರಾಟಕ್ಕಿಟ್ಟಿದ್ದ ಗಿಡ ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ವತಿಯಿಂದ ತಾ. ೨೬ ರಿಂದ ೩ ದಿನಗಳ ಕಾಲ ಮಡಿಕೇರಿಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ ನಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ಥಳೀ ಯರು, ಜಿಲ್ಲೆಯ ಜನತೆ ಸೇರಿದಂತೆ ಪ್ರವಾಸಿಗರು ರಾಜಾಸೀಟ್‌ನಲ್ಲಿ ಸೃಷ್ಟಿ ಯಾಗಿರುವ ಹೂವಿನ ಲೋಕವನ್ನು ಕಂಡು ಪುಳಕಿತರಾಗಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಟಿ ಬಂದAತಾಗಿದೆ. ಗಣರಾಜ್ಯೋತ್ಸವ, ನಾಲ್ಕನೇ ಶನಿವಾರ, ಭಾನುವಾರದ ಸಾಲು ಸಾಲು ರಜೆಯಿಂದ ಪ್ರವಾಸಿ ಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಪೂರಕವಾಗಿತ್ತು.

೩ ದಿನಗಳಲ್ಲಿ ೭೦ ಸಾವಿರದಷ್ಟು ಜನರು ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದಾರೆ. ಶಾಲೆಯಿಂದ ನೇರ ವಾಗಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ಕಲ್ಪಿಸಲಾಗಿತ್ತು. ಪಾಸ್ ಹೊಂದಿದವರು, ಅಧಿಕಾರಿಗಳು ಹೊರ ತುಪಡಿಸಿ ಬಂದವರಿAದ ಸಂಗ್ರಹವಾದ ರೂ. ೯ ರಿಂದ ೧೦ ಲಕ್ಷದಷ್ಟು ಹಣ ಹಾಗೂ ೬೦ ಮಳಿಗೆಗಳು ನೀಡಿದ್ದ ರೂ. ೫ ಸಾವಿರ ಹಣ ಸೇರಿ ಒಟ್ಟು ರೂ. ೧೩ ರಿಂದ ೧೪ ಲಕ್ಷ ಹಣ ಆದಾಯವಾಗಿ ಬಂದಿದೆ ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮಕ್ಕೆ ರೂ. ೩೦ ಲಕ್ಷ ವ್ಯಯವಾಗಿದೆ.

ರಾಜಾಸೀಟ್‌ನಲ್ಲಿ ಸುಮಾರು ೫ ಲಕ್ಷ ಹೂಗಳಿಂದ ಮಾಡಿರುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಪ್ರಮುಖ ಆಕರ್ಷಣೆಯಾಗಿದ್ದು, ಇದರೊಂದಿಗೆ ಹೂವಿನಲ್ಲಿ ತಯಾರಾದ ಚಿಟ್ಟೆ, ತ್ರಿವರ್ಣ ಧ್ವಜ, ಫಿರಂಗಿ, ಕಾರ್ಟೂನ್ ಪಾತ್ರಗಳು ಫಲಪುಷ್ಪ ಪ್ರದರ್ಶನದ ಸೆಳೆತವನ್ನು ಹೆಚ್ಚಿಸಿತ್ತು.

ಗಿಡಗಳಿಗೆ ಭಾರಿ ಬೇಡಿಕೆ

ಕೊಡಗು ಜಿಲ್ಲೆಯ ಮನೆಗಳಲ್ಲಿ ವೈವಿಧ್ಯಮಯ ಗಿಡಗಳನ್ನು ನೆಡುವುದು ಹವ್ಯಾಸವಾಗಿದೆ. ಹೆಚ್ಚಾಗಿ ಗೃಹಿಣಿ ಯರು ಗಿಡ ನೆಡುವುದನ್ನು ದಿನನಿತ್ಯದ ಚಟುವಟಿಕೆಯಾಗಿ ಬೆಳೆಸಿ ಕೊಂಡಿದ್ದಾರೆ. ಇದರಿಂದ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ನರ್ಸರಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದ ಗಿಡಗಳು ಭರ್ಜರಿಯಾಗಿ ಮಾರಾಟ ವಾಗಿವೆ.

ಆಸ್ಟೆçÃಲಿಯಾ ಮೂಲದ ಮೆಕೊಡಾಮಿಯ ಜಾತಿಯ ರೂ. ೨೫೦ ಬೆಲೆಯ ಗಿಡ ಸೇರಿದಂತೆ ಅಲಂಕಾರಿಕ ಗಿಡಗಳು, ಸಾಂಬಾರ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಹವ್ಯಾಸವಾಗಿದೆ. ಹೆಚ್ಚಾಗಿ ಗೃಹಿಣಿ ಯರು ಗಿಡ ನೆಡುವುದನ್ನು ದಿನನಿತ್ಯದ ಚಟುವಟಿಕೆಯಾಗಿ ಬೆಳೆಸಿ ಕೊಂಡಿದ್ದಾರೆ. ಇದರಿಂದ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿವಿಧ ನರ್ಸರಿಗಳು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದ ಗಿಡಗಳು ಭರ್ಜರಿಯಾಗಿ ಮಾರಾಟ ವಾಗಿವೆ.

ಆಸ್ಟೆçÃಲಿಯಾ ಮೂಲದ ಮೆಕೊಡಾಮಿಯ ಜಾತಿಯ ರೂ. ೨೫೦ ಬೆಲೆಯ ಗಿಡ ಸೇರಿದಂತೆ ಅಲಂಕಾರಿಕ ಗಿಡಗಳು, ಸಾಂಬಾರ ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿದೆ. ಮಳಿಗೆಗಳಲ್ಲಿಯೂ ಉತ್ತಮ ವಹಿವಾಟು ನಡೆದಿದೆ.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೇಶ್ ಈ ಕುರಿತು ಪ್ರತಿಕ್ರಿಯಿಸಿ, ೩ ದಿನಗಳಲ್ಲಿ ಸುಮಾರು ೭೦ ಸಾವಿರ ಜನರು ಫಲಪುಷ್ಪ ಪ್ರದರ್ಶನ ಕಣ್ತುಂಬಿ ಕೊಂಡಿದ್ದಾರೆ. ಅಲ್ಲದೆ, ಪ್ರದರ್ಶನ ಹಾಗೂ ಮಾರಾಟದಿಂದ ಉತ್ತಮ ವಹಿವಾಟಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೂ ಬಾಡುವ ತನಕ ಕಲಾಕೃತಿಗಳು ಹಾಗೇ ಇರಲಿವೆ. ಜನರು ಆಗಮಿಸಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.