ಮಡಿಕೇರಿ, ಜ. ೨೯: ಮೈಸೂರು ಭವಿಷ್ಯ ನಿಧಿ ಪ್ರಾದೇಶಿಕ ಕೇಂದ್ರದಿAದ ‘ನಿಧಿ ಆಪ್ಕೆ ನಿಕಟ್' (ಭವಿಷ್ಯ ನಿಧಿ ನಿಮ್ಮ ಹತ್ತಿರ) ೨.೦ ರ ಅಡಿಯಲ್ಲಿ ಭವಿಷ್ಯ ನಿಧಿಯ ಬಗ್ಗೆ ಜಿಲ್ಲಾ ವ್ಯಾಪ್ತಿಯ ಮಾಹಿತಿ ಕಾರ್ಯಕ್ರಮವು ಸೋಮವಾರಪೇಟೆಯ ಸಂತ ಜೋಸೆಫರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತ ವಿನೀತ್ ಕುಮಾರ್, ಸಹಾಯಕ ಭವಿಷ್ಯ ನಿಧಿ ಆಯುಕ್ತ ಮುರಳೀಧರನ್ ಪಿ, ಸೋಮವಾರಪೇಟೆ ಒ.ಎಲ್.ವಿ ಚರ್ಚ್ನ ಸಹಾಯಕ ಪ್ಯಾರಿಷ್ ಪ್ರೀಸ್ಟ್ ರೆ. ಫಾ. ಜಾನ್ ಫರ್ನಾಂಡಿಸ್ ಹಾಜರಿದ್ದರು. ಪ್ರವರ್ತನ ಅಧಿಕಾರಿ ಸೌರಭ್, ಎಸ್.ಎಸ್.ಎ ಪಿ.ಎಂ ಸ್ವಸ್ತಿಕ್ ಹಾಗೂ ತೇಜಸ್ ಕೃಷ್ಣನ್ ಎ, ಇ.ಎಸ್.ಐ.ಸಿ ವಿಭಾಗದ ವ್ಯವಸ್ಥಾಪಕ ರವಿನಂದನ್ ಹೆಚ್. ಎಸ್ ಅವರುಗಳು ಮಾಹಿತಿ ನೀಡಿದರು.
ಉದ್ಯೋಗದಾತರು, ಉದ್ಯೋಗಿಗಳು ಮತ್ತು ಪಿಂಚಣಿದಾರರು ಕುಂದುಕೊರತೆಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು. ಪಿಂಚಣಿದಾರರ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ಪರಿಹರಿಸಲಾಯಿತು.