ಸಿದ್ದಾಪುರ, ಜ. ೨೯: ಸಿದ್ದಾಪುರ ಸೌಹಾರ್ದ ವೇದಿಕೆ ವತಿಯಿಂದ ಗಾಂಧಿ ಹುತಾತ್ಮ ದಿನಾಚರಣೆ ಅಂಗವಾಗಿ ಸೌಹಾರ್ದ ಪರಂಪರೆ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೌಹಾರ್ದ ವೇದಿಕೆಯ ಪ್ರಮುಖ ಪಿ.ಆರ್. ಭರತ್ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆಯ ಅಂಗವಾಗಿ ತಾ.೩೦ ರಂದು (ಇಂದು) ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸಂಜೆ ೫ ಗಂಟೆಗೆ ಮಾನವ ಸರಪಳಿ ರಚಿಸಿ, ಸೌಹಾರ್ದ ಸಭೆ ನಡೆಸಲಾಗುವುದು.

ಸೌಹಾರ್ದ ಸಭೆಯಲ್ಲಿ ಹಾಸನ ಜಿಲ್ಲೆಯ ಮಾನವ ಬಂಧುತ್ವ ವೇದಿಕೆ ಮಂಗಳೂರು ಸಂಚಾಲಕರಾದ ಸತೀಶ್ ಕುಮಾರ್, ಚಿಂತಕರಾದ ಐ.ಅರ್. ದುರ್ಗಾಪ್ರಸಾದ್, ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಶಾಫಿ ಸಹದಿ, ಪೆರುಂಬಾಡಿ ವಿದ್ಯಾ ಟ್ರಸ್ಟ್ ಕಾರ್ಯದರ್ಶಿ ಬಶೀರ್, ಸಾಮಾಜಿಕ ಕಾರ್ಯಕರ್ತ ಜೋಕಿಮ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸೌಹಾರ್ದ ವೇದಿಕೆ ಅಧ್ಯಕ್ಷ ಎನ್.ಡಿ. ಕುಟ್ಟಪ್ಪ, ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಪಳನಿ ಸ್ವಾಮಿ, ಹೆಚ್.ಬಿ. ರಮೇಶ್, ಹೆಚ್.ಎಸ್. ರವಿ, ಗ್ರಾ.ಪಂ. ಸದಸ್ಯೆ ಪ್ರೇಮ ಹಾಜರಿದ್ದರು.