ಸುಂಟಿಕೊಪ್ಪ, ಜ. ೨೯ : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಲೋಹಿತ್ ಕುಮಾರ್ ‘ಕಬ್’ ಸೇವಾದಳ ವಿಭಾಗದಲ್ಲಿ ರಾಜ್ಯ ಪುರಸ್ಕಾರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದ್ದಾರೆ.

ಕಬ್ ಸೇವಾದಳದ ವಿಭಾಗದ ಸಮಾರಂಭವು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಕಬ್ ಸೇವಾದಳದ ವಿದ್ಯಾರ್ಥಿ ಲೋಹಿತ್ ಕುಮಾರ್ ಅವರಿಗೆ ರಾಜ್ಯ ಪ್ರಶಸ್ತಿಯನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ನೀಡಿ ಗೌರವಿಸಿದರು. ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿಗೆ ಮಾರ್ಗದರ್ಶಕರಾಗಿ ಕಬ್ ಮಾಸ್ಟರ್ ಈವಾ ಜೀತಾ ಬೆನ್ನಿಸ್ ತರಬೇತಿ ನೀಡಿದ್ದಾರೆ.