ವೀರಾಜಪೇಟೆ, ಜ. ೨೮: ರಾಷ್ಟಿçÃಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ತಾಲೂಕು ಆಡಳಿತದ ಇಂತಹ ವರ್ತನೆಯನ್ನು ಖಂಡಿಸುವುದಾಗಿ ಪುರಸಭೆ ಸದಸ್ಯ ಸುಭಾಷ್ ಮಹಾದೇವ್ ಹೇಳಿದರು.
ವೀರಾಜಪೇಟೆ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರದ ಶಿಷ್ಟಾಚಾರ ಪ್ರಕಾರ ವೇದಿಕೆಯಲ್ಲಿ ತಹಶೀಲ್ದಾರರು, ಶಾಸಕರುಗಳು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸರ್ಕಾರಿ ಅಧಿಕಾರಿಗಳು, ಸನ್ಮಾನಿತರಿಗೆ ಅವಕಾಶ ಇದೆ. ಆದರೆ, ರಾಷ್ಟಿçÃಯ ಕಾರ್ಯಕ್ರಮವಾಗಬೇಕಿದ್ದ ವೇದಿಕೆ ಕಾಂಗ್ರೆಸ್ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ವೇದಿಕೆಯಲ್ಲಿ ಬಹುತೇಕ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು. ಸೌಜನ್ಯಕ್ಕಾದರೂ ಬಿಜೆಪಿ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿಲ್ಲ. ಕ್ಷೇತ್ರದ ಶಾಸಕರ ಮೇಲೆ ಅಪಾರ ಗೌರವ ಇದೆ. ಆದರೆ ಶಾಸಕರು ಕೂಡ ಆಯೋಜಕರಿಗೆ ಒಂದು ಮಾತು ಹೇಳಿಲ್ಲ. ಸರ್ಕಾರಿ ಶಾಲಾ ಶಿಕ್ಷಕರು ಒಬ್ಬರು ವೇದಿಕೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರ ಹೆಸರನ್ನು ಬರೆದು ಕೊಟ್ಟು ವೈಯಕ್ತಿಕವಾಗಿ ಸ್ವಾಗತ ಮಾಡಿಸುತ್ತಿದ್ದುದು ಕಂಡು ಬಂದಿತು. ಇಂತಹ ಘಟನೆಗಳು ಇಲ್ಲಿಯವರೆಗೆ ನಡೆದಿಲ್ಲ. ಚುನಾವಣೆಯಲ್ಲಿ ಮಾತ್ರ ಪಕ್ಷಗಳು. ಶಾಸಕರು ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಕೂಡ ರಾಜ್ಯ ಸರ್ಕಾರದ ಎರಡು ಸಾವಿರ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಶಾಸಕರ ಹೇಳಿಕೆಗೆ ತಿರುಗೇಟು ನೀಡಿದ ಅವರು ನಮ್ಮ ತೆರಿಗೆ ಹಣವನ್ನು ನಮಗೆ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಅಡುಗೆ ಅನಿಲ ಪಡೆದುಕೊಳ್ಳುತ್ತಿರುವುದು ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಎಂಬುದನ್ನು ಮನಗಾಣಬೇಕು. ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಗ್ರಾಮಗಳಿಗೆ ನೀರು ನೀಡುತ್ತಿದ್ದಾರೆ. ನೀರಿನ ಬಳಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲವೇ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಸದಸ್ಯರಾದ ಜೂನಾ ಸುನೀತಾ, ಅನಿತಾ, ಆಶಾ ಸುಬ್ಬಯ್ಯ ಉಪಸ್ಥಿತರಿದ್ದರು.