\ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್; ಬಿಜೆಪಿಯ ವಿಜಯ್ ಕುಮಾರ್, ಸಾಮ್ರಾಟ್ ಚೌಧರಿ ಡಿಸಿಎಂ
ಪಾಟ್ನಾ(ಬಿಹಾರ), ಜ. ೨೮: ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಅವರು ೯ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಬಿಹಾರದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಆರ್ಜೆಡಿ ಜೊತೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಇದೀಗ ಮಹಾಘಟಬಂಧನ್ನಿAದ ಹೊರಬಂದಿದ್ದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ. ನಿತೀಶ್ ಕುಮಾರ್ ಪ್ರಮಾಣ ವಚನದ ವೇಳೆ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ನಂತರ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಸಾಮ್ರಾಟ್ ಚೌಧರಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳಿಗ್ಗೆ ೧೧ ಗಂಟೆಗೆ ರಾಜಭವನಕ್ಕೆ ಆಗಮಿಸಿದ ಸಿಎಂ ನಿತೀಶ್ ಕುಮಾರ್ ಮಹಾಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದರು. ಇದಾದ ಬಳಿಕ ಮತ್ತೆ ಮಧ್ಯಾಹ್ನ ೧ ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಬಿಜೆಪಿ ಬೆಂಬಲದೊAದಿಗೆ ಸರ್ಕಾರ ರಚಿಸುವುದಾಗಿ ನಿತೀಶ್ ಕುಮಾರ್ ಹೇಳಿದರು. ಸಂಜೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಮಹಾಘಟಬಂಧನ ಮೈತ್ರಿ ಮುರಿದು ಜೆಡಿಯುಗೆ ರಾಜೀನಾಮೆ ನೀಡಿದ ನಂತರ ಬಿಜೆಪಿಯು ತನ್ನ ಶಾಸಕರು ಮತ್ತು ಎಂಎಲ್ಸಿಗಳೊAದಿಗೆ ನಿತೀಶ್ ಕುಮಾರ್ಗೆ ತನ್ನ ಬೆಂಬಲ ಪತ್ರವನ್ನು ನೀಡಿತ್ತು. ಸಿಎಂ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟವನ್ನು ವಿಸರ್ಜಿಸುವಂತೆ ರಾಜ್ಯಪಾಲರನ್ನು ಕೋರಿದ್ದೇನೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟಿçÃಯ ಜನತಾ ದಳ, ಕಾಂಗ್ರೆಸ್ ಮತ್ತು ಮೂರು ಎಡಪಕ್ಷಗಳನ್ನು ಒಳಗೊಂಡಿರುವ ಮಹಾಘಟಬಂಧನ್ ಮೈತ್ರಿಯಲ್ಲಿನ ಪರಿಸ್ಥಿತಿ ಸರಿಯಾಗಿರಲಿಲ್ಲ. ಇದರಿಂದಾಗಿ ಮೈತ್ರಿ ತೊರೆಯಬೇಕಾದ ಪರಿಸ್ಥಿತಿ ಬಂತು ಎಂದು ಹೇಳಿದ್ದರು. ನನ್ನ ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಪಡೆದು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
೬೪ ಕೆ.ಜಿ. ಗಾಂಜಾದೊAದಿಗೆ ಮೂವರ ಬಂಧನ
ಹೈದರಾಬಾದ್, ಜ. ೨೮: ಆಂಧ್ರಪ್ರದೇಶದಿAದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಚೌಟುಪ್ಪಲ್ ಪೊಲೀಸರೊಂದಿಗೆ ಮಲ್ಕಾಜ್ಗಿರಿ ವಿಶೇಷ ಕಾರ್ಯಾಚರಣೆ ತಂಡ ಭೇದಿಸಿದ್ದು, ಮೂವರನ್ನು ಬಂಧಿಸಿದೆ. ಅವರಿಂದ ೬೪ ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದೆ. ಫಯಾಸ್ (೨೯) ಅನಂತ ಮೋಹನ್ (೨೫) ಸೈಯದ್ (೩೯) ಬಂಧಿತ ಆರೋಪಿಗಳು. ಇವರೆಲ್ಲರೂ ಕೇರಳದ ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಅವರಲ್ಲಿ ಒಬ್ಬ ಬೆಂಗಳೂರು ಮೂಲದ ಪೆಡ್ಲರ್ನ ಸಂಪರ್ಕಕ್ಕೆ ಬಂದು ಉಳಿದವರನ್ನು ಪರಿಚಯಿಸಿದ್ದ ಎನ್ನಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅರಕುವಿನಿಂದ ಬೆಂಗಳೂರಿಗೆ ಗಾಂಜಾ ಸಾಗಿಸುವ ವೇಳೆ ಬೆಂಗಳೂರಿನ ಪೆಡ್ಲರ್ ಮೂವರು ಸಾಗಣೆದಾರರಿಗೆ ಭಾರಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ ಯೋಜನೆ ರೂಪಿಸಿ, ಡ್ರಗ್ಸ್ ಇರುವ ಕಾರನ್ನು ಸೈಯದ್ ಚಾಲನೆ ಮಾಡಲು ಮತ್ತು ಫಯಾಸ್, ಮೋಹನ್ ಎರಡನೇ ಕಾರಿನಲ್ಲಿ ತೆರಳಲು ಸೂಚನೆ ನೀಡಲಾಗಿತ್ತು. ಅದರಂತೆ ಮೂವರು ಆರೋಪಿಗಳು ಜನವರಿ ೨೪ರಂದು ಅರಕುವಿಗೆ ತೆರಳಿ ಗಾಂಜಾ ತುಂಬಿಕೊAಡು, ಹೈದರಾಬಾದ್ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದಾಗ ಮಲ್ಕಾಜ್ಗಿರಿ ಎಸ್ಒಟಿ ಮತ್ತು ಚೌಟುಪ್ಪಲ್ ಪೊಲೀಸರು ಅವರ ವಾಹನಗಳನ್ನು ತಡೆದು ತಪಾಸಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆAಕಿ ನಂದಿಸಲು ಯತ್ನಿಸಿದ ವೃದ್ಧ ದಂಪತಿ ಸಜೀವ ದಹನ
ಮಂಗಳೂರು, ಜ. ೨೮: ತಾವು ಹಾಕಿದ ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ತಿಳಿದ ವೃದ್ಧ ದಂಪತಿ ಬೆಂಕಿ ನಂದಿಸಲು ಹೋಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ ಬಳಿಯ ತುಂಡು ಪದವು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ದಂಪತಿಯನ್ನು ಗಿಲ್ಬರ್ಟ್ ಕಾರ್ಲೋ (೭೮) ಪತ್ನಿ ಕ್ರಿಸ್ಟಿನಾ ಕಾರ್ಲೋ(೭೦) ಎಂದು ಗುರುತಿಸಲಾಗಿದೆ. ಮನೆ ಪಕ್ಕದ ಕಸಕ್ಕೆ ಹಾಕಿದ್ದ ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ತಿಳಿದು ಬೆಂಕಿಯನ್ನು ನಂದಿಸಲು ಯತ್ನಿಸಿದ್ದ ವೃದ್ಧ ದಂಪತಿ ಸಜೀವ ದಹನವಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿ ಅವಘಡ: ಸುಟ್ಟ ಸ್ಥಿತಿಯಲ್ಲಿ ದಂಪತಿ, ಮಕ್ಕಳ ಮೃತದೇಹ ಪತ್ತೆ!
ಬರೇಲಿ, ಜ. ೨೮: ಉತ್ತರ ಪ್ರದೇಶದ ಫರೀದ್ಪುರದಲ್ಲಿ ತಮ್ಮ ಬಾಡಿಗೆ ಮನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಘಟನೆ ಶನಿವಾರ ರಾತ್ರಿ ನಡೆದಿದ್ದು, ಭಾನುವಾರ ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆ ಬಾಗಿಲು ಹೊಡೆದು ನೋಡಿದಾಗ ಐವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸುಶೀಲ್ ಚಂದ್ರ ಧುಲೆ ತಿಳಿಸಿದ್ದಾರೆ. ಮೃತರನ್ನು ಅಜಯ್ ಗುಪ್ತಾ (೩೮), ಅವರ ಪತ್ನಿ ಅನಿತಾ (೩೬), ಅವರ ಮಕ್ಕಳಾದ ದಿವ್ಯಾಂಶ್ (೯) ಮತ್ತು ದಕ್ಷ್ (೩) ಮತ್ತು ಮಗಳು ದಿವ್ಯಾಂಕ (೬) ಎಂದು ಗುರುತಿಸಲಾಗಿದೆ.
ಸಿಮೆಂಟ್ ಲಾರಿ, ಕಾರು ನಡುವೆ ಡಿಕ್ಕಿ, ಆರು ಮಂದಿ ದುರ್ಮರಣ
ಚೆನ್ನೆöÊ, ಜ. ೨೮: ಸಿಮೆಂಟ್ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತೆಂಕಶಿ ಜಿಲ್ಲೆಯ ಪುಲಿಯಂಗುಡಿ ಬಳಿ ಭಾನುವಾರ ನಡೆದಿದೆ. ಅಪಘಾತದಿಂದಾಗಿ ಪುಲಿಯಂಗುಡಿದ ಐವರು ನಿವಾಸಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಈ ಸಂಬAಧ ಚೊಕ್ಕಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರೆಲ್ಲರೂ ಪುಲಿಯಂಗುಡಿಯ ಭಗವತಿ ಅಮ್ಮನ್ ದೇವಾಲಯ ಪ್ರದೇಶದವರಾಗಿದ್ದು, ಜನವರಿ ೨೭ ರಂದು ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳಿದ್ದರು ಎನ್ನಲಾಗಿದೆ. ಉತ್ಸವದಲ್ಲಿ ಪಾಲ್ಗೊಂಡ ನಂತರ ಕುಟ್ರಾಲಂ ಜಲಪಾತ ವೀಕ್ಷಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ. ನಿದ್ರೆಯ ಮಂಪರಿನಲ್ಲಿದ್ದ ಕಾರು ಚಾಲಕ ಟ್ರಕ್ಗೆ ಡಿಕ್ಕಿ ಹೊಡೆದಿದ್ದು, ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.