ಮಡಿಕೇರಿ, ಜ. ೨೯: ದಕ್ಷಿಣ ಭಾರತದಲ್ಲಿಯೇ ಅತ್ಯಂತ ಕಷ್ಟಕರ ಚಾರಣ ಎಂದೆನಿಸಿರುವ ಪುಷ್ಪಗಿರಿ ವನ್ಯಜೀವಿ ತಾಣದಲ್ಲಿ ನೆಲೆಸಿರುವ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ತಪ್ಪಲಿನಿಂದ ಕೊಡಗಿನ ಸೋಮವಾರಪೇಟೆ ತಾಲೂಕಿನ ಬೀದಳ್ಳಿ ಗ್ರಾಮದವರೆಗೆ ವಿಸ್ತಾರವಾಗಿ ಹಬ್ಬಿರುವ ಕುಮಾರ ಪರ್ವತವು ಸಮುದ್ರದಿಂದ ೧೭೧೨ ಮೀಟರ್ ಎತ್ತರದಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ.
ಇದರ ಪರಿಣಾಮ ಕಳೆದ ಶುಕ್ರವಾರ ಸುಮಾರು ೮೦೦ ರಿಂದ ೧,೦೦೦ ಮಂದಿ ಚಾರಣಿಗರಿಗೆ ಆತಿಥ್ಯ ನೀಡಿತ್ತು. ವಾಯು - ವಿಹಾರ, ಪ್ರಕೃತಿ ರಮಣೀಯ ನೋಟಕ್ಕೆಂದು ಇಲ್ಲಿಗೆ ಆಗಮಿಸುವ ಚಾರಣಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಶುಕ್ರವಾರದಂದು ಪ್ರವಾಸಿಗರ ಸಂಖ್ಯೆಯು ಮಿತಿಮೀರಿದ್ದು, ಸಹಸ್ರ ಸಂಖ್ಯೆಯಲ್ಲಿ ಸುಬ್ರಹ್ಮಣ್ಯ ಪ್ರವೇಶ ದ್ವಾರದಲ್ಲಿ ಜಮಾಯಿಸಿದ್ದ ಚಾರಣಿಗರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಸ್ಥಳ ಪರಿಶೀಲಿಸಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಇತ್ಯಾದಿಗಳಿಂದ ಆಗಿರಬಹುದಾದ ಹಾನಿಯ ವರದಿಯನ್ನು ನೀಡುವಂತೆ ಮಡಿಕೇರಿ ಡಿ.ಸಿ.ಎಫ್.ಗೆ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಬೇಸಿಗೆಯ ಅವಧಿಯಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಮಾರ್ಚ್ ತಿಂಗಳಿನಿAದ ಸೆಪ್ಟೆಂಬರ್ವರೆಗೆ ಚಾರಣ ನಿಷೇಧಿಸಲಾಗಿದ್ದು, ಚಾರಣಕ್ಕೆ ಸೂಕ್ತವಾಗಿರುವ ಚಳಿಗಾಲದಲ್ಲಿ ಸಹಸ್ರ ಸಂಖ್ಯೆಯಲ್ಲಿ ಆಗಮಿಸುವ ಚಾರಣಿಗರಿಂದ ಪರ್ವತದಲ್ಲಿನ ವಿವಿಧ ವನ್ಯಜೀವಿಗಳ ದಿನಚರಿ, ಸಂಚಾರ, ಸಂತಾನಾಭಿವೃದ್ಧಿಗೂ ಕುತ್ತಾಗಬಹುದಾಗಿದ್ದು, ಚಾರಣಿಗರ ಸಂಖ್ಯೆಯಲ್ಲಿ ನಿಯಂತ್ರಣ ತರುವ ಅನಿವಾರ್ಯತೆ ಬಂದೊದಗಿದೆ.
ಆನ್ಲೈನ್ ಬುಕ್ಕಿಂಗ್ ಮಾಡಿ ಚಾರಣಿಗರ ಸಂಖ್ಯೆ ನಿಯಂತ್ರಿಸಲು ಚಿಂತನೆ
ಸುಬ್ರಹ್ಮಣ್ಯ ಪ್ರವೇಶ ದ್ವಾರವು ದಕ್ಷಿಣ ಕನ್ನಡ ವನ್ಯಜೀವಿ ವಿಭಾಗಕ್ಕೆ ಒಳಪಟ್ಟರೂ, ಚಾರಣದ ಬಹುತೇಕ ಮಾರ್ಗವು ಮಡಿಕೇರಿ ವನ್ಯಜೀವಿ

ಚರ್ಚೆ ನಡೆದು ಮುಂದಿನ ದಿನಗಳಲ್ಲಿ ಆನ್ಲೈನ್ ಬುಕ್ಕಿಂಗ್ ಮುಖಾಂತರ ಚಾರಣಕ್ಕೆ ತೆರಳಲಿಚ್ಚಿಸುವವರಿಗೆ ಪೂರ್ವ ಯೋಜಿತವಾಗಿ ಬುಕ್ಕಿಂಗ್ ಮಾಡುವ ಸೌಲಭ್ಯ ಕಲ್ಪಿಸುವ ಸೌಲಭ್ಯ ಜಾರಿಗೆ ತರುವಂತೆ ಚರ್ಚಿಸಲಾಯಿತು.
ಸ್ಥಳೀಯರಿಗೆ ಹಾಗೂ ಕೆಲವೊಮ್ಮೆ ದೂರದ ಊರುಗಳಿಂದ ಆನ್ಲೈನ್ ವ್ಯವಸ್ಥೆ ಬಗ್ಗೆ ಅರಿವಿಲ್ಲದೆ ಆಗಮಿಸುವ ಚಾರಣಿಗರಿಗೆ ಅನುಕೂಲವಾಗುವಂತೆ ಮೊದಲಿಗೆ ಶೇ.೭೫ ರಷ್ಟು ಚಾರಣಿಗರಿಗೆ ಆನ್ಲೈನ್ ಹಾಗೂ ಶೇ.೨೫ರಷ್ಟು ಆಫ್ಲೈನ್ ಮೂಲಕ ಚಾರಣಕ್ಕೆ ಪ್ರವೇಶ ಕಲ್ಪಿಸುವ ಯೋಜನೆ ರೂಪಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಹಂತಹAತವಾಗಿ ಆನ್ಲೈನ್ ಬುಕ್ಕಿಂಗ್ ಪ್ರಮಾಣವನ್ನು ಹೆಚ್ಚಿಸಿದಲ್ಲಿ ವಾರಾಂತ್ಯಗಳಲ್ಲಿ ಚಾರಣಿಗರ ಸಂಖ್ಯೆಯನ್ನು ನಿಯಂತ್ರಿಸಲು ಸುಲಭವಾಗಲಿದೆ. ಪ್ರತಿನಿತ್ಯ ಗರಿಷ್ಠ ೩೦೦ ಚಾರಣಿಗರಿಗೆ ಮಾತ್ರ ಅವಕಾಶ ಕಲ್ಪಿಸುವುದಾಗಿಯೂ ಸಭೆಯಲ್ಲಿ ಚರ್ಚೆಯಾಗಿದೆ. ಈ ಸಂಖ್ಯೆ ಇನ್ನೂ ಅಂತಿಮವಾಗಿಲ್ಲ. ಕೆಲವೇ ದಿನಗಳಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ಚಾರಣಿಗರಿಗೆ ರಾತ್ರಿ ಪರ್ವತದಲ್ಲಿ ಕ್ಯಾಂಪ್ ಮಾಡಿ ತಂಗಲು ಯಾವುದೇ ಅವಕಾಶವಿರುವುದಿಲ್ಲ ಎಂಬುದಾಗಿಯೂ ಅವರು ಈ ಸಂದರ್ಭ ಹೇಳಿದರು.