ಗೋಣಿಕೊಪ್ಪಲು, ಜ. ೨೯ : ಅಚ್ಚರಿಯ ಬೆಳವಣಿಗೆಯಲ್ಲಿ ಪ್ರತಿಷ್ಠಿತ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಸಂಖ್ಯಾಬಲವಿದ್ದರೂ ಬಿಜೆಪಿ ಅಧಿಕಾರ ಕಳೆದುಕೊಂಡಿರು ವುದರಿಂದ ಅಡ್ಡ ಮತದಾನ ವಾಗಿರುವುದು ಬಹಿರಂಗಗೊAಡಿದೆ.
ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿಗೆ ೨ನೇ ಅವಧಿಯ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಹಿರಿಯ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ ಸಾಮಾನ್ಯ ಮೀಸಲಾತಿ ಅಡಿಯಲ್ಲಿ ಸ್ಪರ್ಧಿಸಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಸಿಎಂ(ಎ) ಮಹಿಳಾ ಮೀಸಲಾತಿಯಿಂದ ಸ್ಪರ್ಧಿಸಿ ಎಂ.ಮAಜುಳ ತಲಾ ೧೧ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತ ಸದಸ್ಯರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ರಾಜೇಶ್ ೧೦ ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಕೆ.ಗೀತಾ ೯ ಮತಗಳನ್ನು ಪಡೆದು ಸೋಲು ಅನುಭವಿಸಿದರು. ೧ ಮತವು ತಿರಸ್ಕೃತಗೊಂಡಿದ್ದು, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೨೧ ಸದಸ್ಯರ ಪೈಕಿ
(ಮೊದಲ ಪುಟದಿಂದ) ಬಿಜೆಪಿ ಬೆಂಬಲಿತರು ೧೨ ಹಾಗೂ ಕಾಂಗ್ರೆಸ್ ಬೆಂಬಲಿತ ೯ ಸದಸ್ಯರಿದ್ದಾರೆ. ಕಳೆದ ೧೦ ವರ್ಷಗಳಿಂದ ಬಿಜೆಪಿ ಅಧಿಕಾರ ಪಡೆದುಕೊಂಡಿತ್ತು. ಇದೀಗ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಧಿಕಾರ ಪಡೆಯುತ್ತಿದ್ದಂತೆಯೇ ಪ್ರತಿಷ್ಠಿತ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ - ಉಪಾಧ್ಯಕ್ಷರು ಆಯ್ಕೆಗೊಂಡಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಅಕ್ಷರದಾಸೋಹ ಅಧಿಕಾರಿ ಕೆ.ಆರ್.ರಾಜೇಶ್ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸಹಾಯಕ ಸುಭಾಶ್ ಕಾರ್ಯನಿರ್ವಹಿಸಿದರು. ಚುನಾವಣಾ ಹಿನ್ನೆಲೆಯಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು. ಕೆಎಸ್ಆರ್ಪಿ ತುಕಡಿಯು ನಿಯೋಜನೆಗೊಂಡಿತ್ತು.
ಬಿಜೆಪಿ ಪಕ್ಷದ ಪ್ರಮುಖ ನಾಯಕರುಗಳಾದ ನೆಲ್ಲಿರ ಚಲನ್, ಗುಮ್ಮಟ್ಟಿರ ಕಿಲನ್ ಗಣಪತಿ, ಚೆಪ್ಪುಡೀರ ಮಾಚು, ಕುಪ್ಪಂಡ ಗಿರಿಪೂವಣ್ಣ, ಕಾಡ್ಯಮಾಡ ಗಿರೀಶ್ ಗಣಪತಿ, ಮಲ್ಚೀರಗಾಂಧಿ ದೇವಯ್ಯ, ಗುಮ್ಮಟ್ಟಿರ ದರ್ಶನ್ ಸೇರಿದಂತೆ ಅನೇಕ ಪ್ರಮುಖರು ಪಂಚಾಯಿತಿ ಆವರಣದಲ್ಲಿ ಜಮಾಯಿಸಿದ್ದರು. ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಮೀದೇರಿರ ನವೀನ್, ಎ.ಜೆ.ಬಾಬು, ಅಜಿತ್ ಅಯ್ಯಪ್ಪ, ವಿ.ಟಿ.ವಾಸು, ಕಡೆಮಾಡ ಕುಸುಮ ಜೋಯಪ್ಪ, ರೋಶನ್,ರಮಾವತಿ, ಪಿ.ಕೆ.ಪ್ರವೀಣ್, ಖಾಲಿದ್, ಡಾಡೂ ಜೋಸೆಫ್, ಜೀವಿತ್, ಮುನೀರ್, ಧನಲಕ್ಷಿö್ಮ, ಶಿವಾಜಿ, ರಾಜಶೇಖರ್, ಕರ್ಣರಾಜ್ ತಂಬಿ, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾದ ನಂತರ ನಾಯಕರುಗಳು ಪಂಚಾಯಿತಿಯಿAದ ಮೆರವಣಿಗೆಯ ಮೂಲಕ ಬಸ್ ನಿಲ್ದಾಣಕ್ಕೆ ಆಗಮಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಯಘೋಷ ಕೂಗಿ ಸಂಭ್ರಮಿಸಿದರು.
ಚುನಾವಣೆ ಪ್ರಕ್ರಿಯೆಗೂ ೨ ವರ್ಷಗಳ ಬೆಂಬಲಿತ ಸದಸ್ಯರು ರೆಸಾರ್ಟ್ವೊಂದರಿAದ ಆಗಮಿಸಿದ್ದರು. ಬೇರೆ ಪಕ್ಷಗಳು ಸೆಳೆಯದಂತೆ ಮಾಡಲು ಈ ಕಾರ್ಯತಂತ್ರ ರೂಪಿಸಲಾಗಿತ್ತು. ಆದರೆ, ತೆರೆಮರೆಯಲ್ಲಿ ನಡೆದ ರಾಜಕೀಯ ತಂತ್ರಗಾರಿಕೆ ಕಾಂಗ್ರೆಸ್ಗೆ ವರದಾನವಾಗಿದೆ.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಕುಲ್ಲಚಂಡ ಪ್ರಮೋದ್ ಗಣಪತಿ ಪ್ರತಿಕ್ರಿಯಿಸಿ ಹಲವು ವರ್ಷಗಳ ನಂತರ ಅಧಿಕಾರ ಲಭಿಸಿದೆ. ಎಲ್ಲಾ ಸದಸ್ಯರನ್ನು ಒಟ್ಟಾಗಿ ಕರೆದೊಯ್ಯುವ ಮೂಲಕ ಪಂಚಾಯಿತಿ ಅಭಿವೃದ್ಧಿಗೆ ಒತ್ತು ನೀಡುತ್ತೇವೆ. ನೆನೆಗುದಿಗೆ ಬಿದ್ದಿರುವ ಹಲವು ಯೋಜನೆಗಳಿಗೆ ಕಾಯಕಲ್ಪ ನೀಡಲಾಗುವುದು ಎಂದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಮAಜುಳ ಪ್ರತಿಕ್ರಿಯಿಸಿ ಪಂಚಾಯಿತಿ ಅಭಿವೃದ್ಧಿಯೇ ಮೂಲ ಉದ್ದೇಶವಾಗಿದೆ. ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಕೆಲಸ ನಿರ್ವಹಿಸಲಾಗುವುದು ಎಂದರು.
ಪ್ರಸ್ತುತ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಬಿ.ಎನ್.ಪ್ರಕಾಶ್, ಮನ್ನಕ್ಕಮನೆ ಸೌಮ್ಯಬಾಲು, ರಾಮಕೃಷ್ಣ, ಕೊಣಿಯಂಡ ಬೋಜಮ್ಮ, ಜಿ.ಕೆ.ಗೀತಾ, ಹಕೀಮ್, ನೂರೇರ ರತಿ ಅಚ್ಚಪ್ಪ, ಕೆ.ರಾಜೇಶ್, ಪುಷ್ಪ, ವಿವೇಕ್ ರಾಯ್ಕರ್, ಚೈತ್ರ ಬಿ,ಚೇತನ್ ಹಾಗೂ ರಾಮದಾಸ್, ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಶರತ್ಕಾಂತ್, ಎಂ.ಮAಜುಳ, ಸವಿತ, ಸುಲೇಖ, ಧನಲಕ್ಷಿö್ಮ, ಅಬ್ಜಲ್ ಹಾಗೂ ಸಪೂರಬಾನು ಇದ್ದರು. ಬಹುನಿರೀಕ್ಷೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಅಧಿಕಾರ ಕಳೆದುಕೊಳ್ಳುವ ಮೂಲಕ ನಿರಾಶೆಯಿಂದ ಹೊರ ನಡೆದರು.
-ವರದಿ : ಹೆಚ್.ಕೆ. ಜಗದೀಶ್