ಮಡಿಕೇರಿ, ಜ. ೨೯: ತಮಿಳು ನಾಡುವಿನ ದೇಗುಲವೊಂದರ ಜೀರ್ಣೋದ್ಧಾರ ಬಳಿಕ ಬ್ರಹ್ಮಕಲ ಶಾಭಿಷೇಕಕ್ಕೆ ನಿನ್ನೆ ದಿನ ತಲಕಾವೇರಿ ಯಿಂದ ೩೫೦ ಮಂದಿ ಮಹಿಳಾ ಭಕ್ತರು ಬಿಂದಿಗೆಗಳಲ್ಲಿ ಕಾವೇರಿ ತೀರ್ಥವನ್ನು ಒಯ್ದಿದ್ದರು.

ತಿರುಪುರ ಜಿಲ್ಲೆಯ ೧೬ನೇ ಶತಮಾನದ ಅವಿನಾಶಿ ಶಿವ ಲಿಂಗೇ ಶ್ವರ ದೇವಾಲಯವನ್ನು ತಮಿಳುನಾಡು ಸರಕಾರದ ಧಾರ್ಮಿಕ ದತ್ತಿ ಇಲಾಖೆ ಭಕ್ತಾದಿಗಳ ನೆರವಿನಿಂದ ರೂ. ೨೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದೆ. ಈ ಸಂಬAಧ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಪವಿತ್ರ ಕಾವೇರಿ ತೀರ್ಥವನ್ನು ಅಭಿಷೇಕಗೊಳಿಸಲು ಒಯ್ಯಲಾಗಿದೆ. ತಿರುಪುರಕ್ಕೆ ಕಾವೇರಿ ತೀರ್ಥವನ್ನು ಒಯ್ದ ಸಂದರ್ಭ ದೇವಾಲಯ ಆಡಳಿತ ಮಂಡಳಿ ಮೂಲಕ ಮಹಿಳಾ ಭಕ್ತಾದಿಗಳು ತಲೆಯಲ್ಲಿ ತೀರ್ಥದ ಬಿಂದಿಗೆ ಇರಿಸಿಕೊಂಡು ಧಾರ್ಮಿಕ ಮೆರವಣಿಗೆ ಯಲ್ಲಿ ತೆರಳಿದರು. ಮಂಗಳ ವಾದ್ಯಗಳೊಂದಿಗೆ ಅಲ್ಲಿನ ನಿವಾಸಿಗಳು ತೀರ್ಥರೂಪಿಣಿ ಕಾವೇರಿ ಮಾತೆ ಯನ್ನು ಭವ್ಯ ಸ್ವಾಗತದೊಂದಿಗೆ ಇಂದು ಬರಮಾಡಿಕೊಂಡರು.