ಕುಶಾಲನಗರ, ಜ. ೨೭: ಹೊರ ಜಿಲ್ಲೆಗಳಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರದ ಮಹಿಳೆಯೊಬ್ಬರನ್ನು ಹಾಸನ ಜಿಲ್ಲೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಕಳವು ಮಾಡಿ ಮಾರಾಟ ಮಾಡಿರುವ ಚಿನ್ನಾಭರಣಗಳನ್ನು ಕುಶಾಲನಗರದ ಚಿನ್ನದ ಅಂಗಡಿಗಳಿAದ ವಶಪಡಿಸಿಕೊಂಡ ಘಟನೆ ನಡೆದಿದೆ.
ಹಾಸನ ಜಿಲ್ಲೆ, ಮೈಸೂರು ಜಿಲ್ಲೆಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಕುಶಾಲನಗರದ ಮಹಿಳೆ ಪದ್ಮ ಎಂಬಾಕೆಯ ಮೂಲಕ ಮಾರಾಟ ಮತ್ತು ಗಿರವಿ ಇಟ್ಟಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದೀಗ ಕುಶಾಲನಗರ ಚಿನ್ನದ ಅಂಗಡಿಗಳಿAದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ ಎಂದು ಬೇಲೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಯರಾಮ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. -ಸಿಂಚು