ಮಡಿಕೇರ, ಜ. ೨೬: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆಯೋಜಿತ ೨ನೆ ವರ್ಷದ ವಿಪ್ರ ಕ್ರೀಡಾಕೂಟದ ಅಂಗವಾಗಿ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಇಂದು ಚಾಲನೆ ದೊರಕಿತು. ಮಡಿಕೇರಿ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಮಡಿಕೇರಿ ತಾಲೂಕು ಮಟ್ಟದ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್, ಚೆನ್ನೆಮಣೆ, ಬುಕ್ ಬ್ಯಾಲೆನ್ಸ್, ಪಾಸಿಂಗ್ ದಿ ಬಾಲ್, ಸಣ್ಣ ಮಕ್ಕಳಿಗೆ ಕಾಳು ಹೆಕ್ಕುವ ಆಟಗಳಲ್ಲಿ ಸಮಾಜದ ಭಾಂದವರು ಪಾಲ್ಗೊಂಡರು. ಕ್ರೀಡಾಕೂಟದ ಉದ್ಘಾಟನೆ ಸಂದರ್ಭ ಸಮಾಜದ ಪ್ರಮುಖರಾದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷೆ ಗೀತಾ ಗಿರೀಶ್, ಉಪಾಧ್ಯಕ್ಷ ಮೂಗೂರು ರಾಮಚಂದ್ರ, ಕಾರ್ಯದರ್ಶಿ ಬಿ. ಕೆ ಜಗದೀಶ್, ಖಜಾಂಚಿ ಜಿ. ಆರ್ ರವಿಶಂಕರ್, ನಿರ್ದೇಶಕರಾದ ಸವಿತಾ ಭಟ್, ಪ್ರಭಾಕರ ನೆಲ್ಲಿತ್ತಾಯ, ಭರತೇಶ್ ಖಂಡಿಗೆ, ವೀಣಾ ಹೊಳ್ಳ, ಕ್ರೀಡಾಕೂಟದ ಮಹಾಪೋಷಕರಾದ ಸಂಪತ್ ಕುಮಾರ್, ಕ್ರೀಡಾ ಸಂಚಾಲಕ ಬಿ. ಕೆ ಅರುಣ್ ಕುಮಾರ್ ಹಾಜರಿದ್ದರು.
ಒಳಾಂಗಣ ಕ್ರೀಡೆಗಳಾದ ಬ್ಯಾಡ್ಮಿಂಟನ್ ಹಾಗೂ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಫೆ.೪ ರಂದು ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆ.೧೧ ರಂದು ಜನರಲ್ ತಿಮ್ಮಯ್ಯ ಮೇಲಿನ ಕ್ರೀಡಾಂಗಣದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಫೆ.೨೫ ರಂದು ವಿಪ್ರ ಕ್ರೀಡಾಕೂಟದ ಸಮಾರೋಪ ಸಮಾರಂಭ, ತಾಲೂಕು ಮಟ್ಟದಲ್ಲಿ ಕೇರಂ, ಚೆಸ್ ಇತ್ಯಾದಿ ಕ್ರೀಡೆಗಳಲ್ಲಿ ವಿಜೇತರಾದವರ ಜಿಲ್ಲಾ ಮಟ್ಟದ ಕ್ರೀಡೆಗಳು, ಹಗ್ಗ ಜಗ್ಗಾಟ, ಜಿಲ್ಲಾ ಮಟ್ಟದ ಕ್ರೀಡಾಕೂಟದ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಡಿಕೇರಿಯ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.