ಗೋಣಿಕೊಪ್ಪಲು, ಜ. ೨೭: ಗೋಣಿಕೊಪ್ಪಲು ಗ್ರಾಮ ಪಂಚಾ ಯಿತಿಗೆ ೨ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಾ. ೨೯ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಸಲು ಪೂರ್ವಾಹ್ನ ೧೧ ಗಂಟೆ ಯಿಂದ ೧೨ ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ.

ಪ್ರಸ್ತುತ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ೧೨ ಸಂಖ್ಯಾ ಬಲದೊಂದಿಗೆ ಅಧಿಕಾರ ನಡೆಸುತ್ತಿದ್ದಾರೆ. ವಿರೋಧ ಪಕ್ಷವಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ೯ ಸಂಖ್ಯಾ ಬಲದೊಂದಿಗೆ ಮುನ್ನಡೆಯು ತ್ತಿದ್ದಾರೆ. ಈ ಬಾರಿ ಅಧ್ಯಕ್ಷಗಾದಿಗೆ ಸಾಮಾನ್ಯ ಮೀಸಲಾತಿ ಘೋಷಣೆ ಆಗಿರುವುದರಿಂದ ಅಧ್ಯಕ್ಷ ಸ್ಥಾನ ಪಡೆಯಲು ಬಿಜೆಪಿ ಬೆಂಬಲಿತ ಸದಸ್ಯರು ಈಗಾಗಲೇ ಪೈಪೋಟಿಗಿಳಿ ದಿದ್ದಾರೆ. ಅಧ್ಯಕ್ಷ ಗಿರಿ ನೀಡಲು ಬಿಜೆಪಿ ಪಕ್ಷದ ಮುಖಂಡರುಗಳ ಮನೆ ಬಾಗಿಲಿಗೆ ತೆರಳಿ ಕದ ತಟ್ಟಲು ಆರಂಭಿಸಿದ್ದಾರೆ.

ಕೆಲವು ಮಹಿಳಾ ಸದಸ್ಯರು ಅಧ್ಯಕ್ಷ ಗಿರಿ ತಮಗೂ ಬೇಕೆಂಬ ಬೇಡಿಕೆ ಯನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿರುವ ಸದಸ್ಯರು ಕೂಡ ಅವಕಾಶ ತಮಗೆ ಬೇಕೆಂದು ತಮ್ಮದೆ ಆದ ರೀತಿಯಲ್ಲಿ ಲಾಭಿ ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿ ಳೆಗೆ ಮೀಸಲಾಗಿದ್ದು, ಜಿ.ಕೆ. ಗೀತ ಮತ್ತು ಪುಷ್ಪಾವತಿ ಆಕಾಂಕ್ಷಿಗಳಾಗಿದ್ದಾರೆ.

ಗೋಣಿಕೊಪ್ಪ ನಗರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಬಸ್ ನಿಲ್ದಾಣ ಹಾಗೂ ಕಸದ ಸಮಸ್ಯೆ, ನಿರಂತರವಾಗಿ ಕಾಡುತ್ತಿದೆ. ಸಾಕಷ್ಟು ಆದಾಯ ಹೊಂದಿದ್ದರೂ ಇಲ್ಲಿಯ ಅಭಿವೃದ್ದಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ ಎಂಬ ಬಗ್ಗೆ ಜನರಲ್ಲಿ ವ್ಯಾಪಕವಾದ ಚರ್ಚೆ ನಡುವೆ ಈ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದು ಭಾರಿ ಬದಲಾವಣೆ ಆಗುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಅಧ್ಯಕ್ಷ ಸ್ಥಾನವು ಹಲವು ವರ್ಷ ಗಳ ನಂತರ ಸಾಮಾನ್ಯ ಮೀಸಲಾತಿಗೆ ಲಭಿಸಿರುವುದರಿಂದ ಸಹಜವಾಗಿಯೇ ಅಧ್ಯಕ್ಷಗಾದಿಗೆ ೨ ಪಕ್ಷದಲ್ಲೂ ಆಕಾಂಕ್ಷಿ ಗಳ ದೊಡ್ಡ ಪಟ್ಟಿಯೇ ಪಕ್ಷದ ವರಿಷ್ಠರ ಮುಂದಿದೆ. ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಾಗಿ ಆರಿಸಿ ಬಂದಿದ್ದಾರೆ. ಬಿಜೆಪಿ ಪಕ್ಷದಿಂದ ಅಧ್ಯಕ್ಷಗಾದಿಗೆ ಅವಕಾಶಕ್ಕಾಗಿ ಮೂರು ಬಾರಿ ಪಂಚಾ ಯಿತಿ ಸದಸ್ಯರಾಗಿ ಅನುಭವವಿರುವ ಬಿ.ಎನ್.ಪ್ರಕಾಶ್ ಬೇಡಿಕೆ ಇಟ್ಟಿದ್ದಾರೆ. ಉಳಿದಂತೆ ೧ನೇ ವಿಭಾಗದ ರಾಮಕೃಷ್ಣ, ೩ನೇ ವಿಭಾಗದ ಕೆ. ರಾಜೇಶ್ ೬ನೇ ವಿಭಾಗದ ಹಕೀಮ್ ಸೇರಿದಂತೆ ಮಹಿಳಾ ಸದಸ್ಯರಾಗಿರುವ ಕೊಣಿಯಂಡ ಬೋಜಮ್ಮ ಹಾಗೂ ೬ನೇ ವಿಭಾಗದ ರತಿ ಅಚ್ಚಪ್ಪ ಅಧ್ಯಕ್ಷಗಾದಿಗೆ ಒಲವು ತೋರಿದ್ದಾರೆ.

ಕಳೆದ ೮ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎ.ಎಸ್.ಪೊನ್ನಣ್ಣ ಗೆಲುವು ಸಾಧಿಸಿ ಶಾಸಕರಾದ ನಂತರÀ ೯ ಸದಸ್ಯರ ಸಂಖ್ಯಾಬಲ ಹೊಂದಿ ದ್ದರೂ ಗೋಣಿಕೊಪ್ಪ ಪಂಚಾಯಿತಿ ಅಧಿಕಾರವನ್ನು ಹಿಡಿಯಲು ತೆರೆಮರೆಯಲ್ಲಿ ಎಲ್ಲಾ ಪ್ರಯತ್ನಗಳನ್ನು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದಿಂದ ೫ನೇ ವಿಭಾಗದಿಂದ ೩ ಬಾರಿ ಜಯ ಗಳಿಸಿ ಗ್ರಾಮ ಪಂಚಾಯಿತಿ ಸದಸ್ಯ ರಾಗಿರುವ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಾಗಿದೆ.

ಆಡಳಿತರೂಢ ಬಿಜೆಪಿಯಲ್ಲಿರುವ ಸಕ್ರಿಯ ಕಾರ್ಯಕರ್ತರು, ಮುಖಂ ಡರು ಈಗಾಗಲೇ ಅಧ್ಯಕ್ಷ ಗಿರಿಯ ಆಕಾಂಕ್ಷ್ಷಿಗಳೊAದಿಗೆ ಸುದೀರ್ಘ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಪಕ್ಷವು ನೀಡುವ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸಲು ಸೂಚನೆ ನೀಡಿ ದ್ದಾರೆ. ಗೋಣಿಕೊಪ್ಪ ಗ್ರಾಮ ಪಂಚಾ ಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ರಾಗಿ ಬಿ.ಎನ್. ಪ್ರಕಾಶ್, ಮನ್ನಕ್ಕಮನೆ ಸೌಮ್ಯಬಾಲು, ರಾಮಕೃಷ್ಣ, ಕೊಣಿ ಯಂಡ ಬೋಜಮ್ಮ, ಜಿ.ಕೆ. ಗೀತಾ, ಹಕೀಮ್, ನೂರೇರ ರತಿ ಅಚ್ಚಪ್ಪ, ಕೆ .ರಾಜೇಶ್, ಪುಷ್ಪ, ವಿವೇಕ್ ರಾಯ್ಕರ್, ಚೈತ್ರ ಬಿ., ಚೇತನ್ ಹಾಗೂ ರಾಮದಾಸ್ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಮನ್ನಕ್ಕಮನೆ ಸೌಮ್ಯಬಾಲು ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಕುಲ್ಲಚಂಡ ಪ್ರಮೋದ್ ಗಣಪತಿ, ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ, ಶರತ್‌ಕಾಂತ್, ಎಂ.ಮAಜುಳ, ಸವಿತ, ಸುಲೇಖ, ಅಬ್ಜಲ್ ಹಾಗೂ ಸಪೂರಬಾನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಉಪಾಧ್ಯಕ್ಷರಾಗಿ ಸವಿತ ಕಾರ್ಯನಿರ್ವಹಿಸುತ್ತಿದ್ದಾರೆ.

- ಹೆಚ್.ಕೆ. ಜಗದೀಶ್