ಭಾಗಮಂಡಲ, ಜ. ೨೭: ಯಾವುದೇ ಖಾಸಗಿ ಅಥವಾ ರಾಷ್ಟಿçÃಕೃತ ಬ್ಯಾಂಕ್ ಗಳಲ್ಲಿರುವ ಸೌಲಭ್ಯಗಳಿಗೆ ಕಡಿಮೆ ಇಲ್ಲದಂತೆ ಸಹಕಾರ ಕೇಂದ್ರ ಬ್ಯಾಂಕಿನ ಶಾಖೆಗಳಲ್ಲಿ ಸೌಲಭ್ಯಗಳನ್ನು ಅನುಷ್ಠಾ ನಕ್ಕೆ ತಂದಿದ್ದೇವೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಹೇಳಿದರು.

ಭಾಗಮಂಡಲದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೪ನೇ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ೭೦ಕ್ಕೂ ಹೆಚ್ಚಿನ ಕೃಷಿ ಪತ್ತಿನ ಸಹಕಾರ ಸಂಘಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಮಟ್ಟದಲ್ಲಿನ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಜನರಿಗೆ ಬ್ಯಾಂಕಿAಗ್ ಸೌಲಭ್ಯ ಸಿಗು ವಂತಾಗಬೇಕು ಎಂಬ ಉದ್ದೇಶದಿಂದ ಈಗಾಗಲೇ ೨೪ ಶಾಖೆಗಳನ್ನು ತೆರೆಯಲಾಗಿದೆ. ಭಾಗಮಂಡಲದಲ್ಲಿ ೨೪ನೇ ಶಾಖೆ ತೆರೆದಿದ್ದು, ಭಾಗ ಮಂಡಲ, ಕರಿಕೆಯ ಜನತೆಗೆ ಉಪ ಯೋಗವಾಗಲಿದೆ ಎಂದರು

ಸಹಕಾರಿ ಬ್ಯಾಂಕುಗಳಲ್ಲಿ ಹಿಂದೆ ಹಿರಿಯರು ಮಾತ್ರ ಖಾತೆದಾರರಾ ಗಿದ್ದರು. ನಿರಂತರ ಪ್ರಯತ್ನದಿಂದ ಅತ್ಯಾಧುನಿಕ ಸೌಲಭ್ಯಗಳನ್ನು ಸಹಕಾರ ಬ್ಯಾಂಕುಗಳಲ್ಲಿ ಸೌಲಭ್ಯಗಳನ್ನು ನೀಡ ಲಾಗುತ್ತಿದ್ದು ಯುವಜನರು ಕೂಡ ಸಹ ಕಾರ ಬ್ಯಾಂಕುಗಳಿAದ ಸೌಲಭ್ಯಗಳನ್ನು ಹೊಂದಿಕೊಳ್ಳುತ್ತಿದ್ದಾರೆ ಎಂದರು.

ಶಾಖೆಯನ್ನು ಉದ್ಘಾಟಿಸಿದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ; ಸಹಕಾರಿ ಬ್ಯಾಂಕುಗಳು ಇಂದು ಶಕ್ತಿ ಶಾಲಿಯಾಗಿ ಹೊರಹೊಮ್ಮುತ್ತಿವೆ. ಬಹುಪಾಲು ರೈತರಿಂದಲೇ ಯಶಸ್ಸಿನತ್ತ ಸಾಗುತ್ತಿರುವ ಬ್ಯಾಂಕುಗಳು ಜನರ ಕಷ್ಟಗಳಿಗೆ ಸ್ಪಂದಿಸುವAತಾಗಬೇಕು. ರೈತರು ತೆಗೆದುಕೊಂಡ ಸಾಲವನ್ನು ಮರುಪಾವತಿಸಿದರೆ ಬಡ್ಡಿಮನ್ನಾ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದರು. ಜನರು ಇತಿಹಾಸವನ್ನು ಮರೆಯಬಾರದು. ಹಿರಿಯರು ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಹಾಗಾ ದರೆ ಮಾತ್ರ ಏಳಿಗೆ ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂ ಡಿದ್ದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಹೊಸ ಹೊಸ ಯೋಜನೆ ಗಳು ಬಂದಾಗ ನ್ಯೂನತೆಗಳು ಇರು ವುದು ಸಹಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಭಾಗಮಂಡಲ ಶಾಖೆಯ ಭದ್ರತಾ ಕೊಠ ಡಿಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಗದು ಕೌಂಟರ್ ಅನ್ನು ಕೊಡಂದೇರ ಪಿ. ಗಣಪತಿ ಉದ್ಘಾಟಿಸಿದರು.

ಸಭಾಂಗಣ ಉದ್ಘಾಟನೆ : ಭಾಗ ಮಂಡಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ನಿರ್ಮಿಸಿದ ಹೊಸೂರು ಡಿ. ಜೋಯಪ್ಪ ಸಭಾಂಗಣದ ಉದ್ಘಾ ಟನಾ ಸಮಾರಂಭ ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರ ಕ್ಷೇತ್ರ ಸೇರಿದಂತೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ದುಡಿದು ಹೆಸರು ಮಾಡಿದ ಜೋಯಪ್ಪ ಅವರ ಹೆಸರಿನಲ್ಲಿ ಸಭಾಂ ಗಣವನ್ನು ನಿರ್ಮಿಸಿರುವುದು ಶ್ಲಾಘ ನೀಯ. ಹಿಂದೆ ಮುಚ್ಚುವ ಹಂತದ ಲ್ಲಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷತೆ ವಹಿಸಿ ಸಂಸ್ಥೆಯನ್ನು ಮೇಲ ಕ್ಕೆತ್ತಿದ ಕೀರ್ತಿ ಜೋಯಪ್ಪ ಅವರದು. ಸಂಸ್ಥೆ ಶತಮಾನೋತ್ಸವ ಕಳೆದು ಇದೀಗ ೧೨೦ ವರ್ಷ ಪೂರೈಸಿದೆ. ಹಿರಿ ಯರ ಮಾರ್ಗದರ್ಶನ ಇಲ್ಲಿನ ಜನತೆಗೆ ಉಪಯೋಗವಾಗಲಿದೆ ಎಂದರು.

ಸಭಾAಗಣದ ಉದ್ಘಾಟನೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ನೆರವೇರಿಸಿ ದರು. ಸಭಾಂಗಣದ ಪ್ರವೇಶ ದ್ವಾರ ವನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಉದ್ಘಾ ಟಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ನೆರವೇರಿ ಸಿದರು. ಮುಖ್ಯ ಅತಿಥಿಗಳಾಗಿ ಭಾಗ ಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಹೆಚ್.ಜಿ., ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡನೋಳನ ಬಿ. ದಿನೇಶ್ ಕುಮಾರ್ ಪಾಲ್ಗೊಂಡಿದ್ದರು

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಉಮಾ ಕಾಂತ್, ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಇ. ಮೋಹನ್, ಪ್ರಧಾನ ವ್ಯವಸ್ಥಾಪಕಿ ಪಾರ್ವತಿ, ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಕಾರ್ಯನಿರ್ವಹ ಣಾಧಿಕಾರಿ ಜಗನ್ನಾಥ್, ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರು ಹಾಗೂ ಬಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನಂಜುAಡಪ್ಪ ಕಾರ್ಯ ಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ವಂದಿಸಿದರು.

- ಸುನಿಲ್ ಕುಯ್ಯಮುಡಿ