ಮಡಿಕೇರಿ, ಜ. ೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಶಂಕುಸ್ಥಾಪನೆ: ಕೃಷಿ ಇಲಾಖೆಯ ೧೦೦ ಲಕ್ಷ ರೂ. ವೆಚ್ಚದ ಕಾಮಗಾರಿ, ಹಿಂದುಳಿದ ವರ್ಗಗಳ ಇಲಾಖೆಯ ೫೦೦ ಲಕ್ಷ ರೂ. ಕಾಮಗಾರಿ, ನಗರ ನೀರು ಮತ್ತು ಒಳಚರಂಡಿ ಮಂಡಳಿ ನಗರಾಭಿವೃದ್ಧಿ ಇಲಾಖೆಯ ೧೬೧೦೮ ಲಕ್ಷ ರೂ.ನ ೫ ಕಾಮಗಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ೬೦ ಲಕ್ಷ ರೂ. ವೆಚ್ಚದ ೩ ಕಾಮಗಾರಿ, ಸಮಾಜ ಕಲ್ಯಾಣ ಇಲಾಖೆಯ ೩೭೫ ಲಕ್ಷ ರೂ. ವೆಚ್ಚದ ಕಾಮಗಾರಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ-ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ೧೨೨೬ ಲಕ್ಷ ರೂ. ಕಾಮಗಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕುಶಾಲನಗರ ತಾಲೂಕು ಬಸವನಹಳ್ಳಿಯಲ್ಲಿ ಬಸ್ ಡಿಪೋ ಕಾಮಗಾರಿ) ಸಾರಿಗೆ ಇಲಾಖೆಯ ೬೭೦.೫೮ ಲಕ್ಷ ರೂ. ವೆಚ್ಚದ ಕಾಮಗಾರಿ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ೧೫೮೯.೫೦ ಲಕ್ಷ ರೂ. ವೆಚ್ಚದ ಕಾಮಗಾರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೧,೧೦೦ ಲಕ್ಷ ರೂ. ೨ ಕಾಮಗಾರಿಗಳು, ಪೊನ್ನಂಪೇಟೆ ತಾ. ಗೋಣಿಕೊಪ್ಪದ ನೂತನ ಬಸ್ ನಿಲ್ದಾಣ(ಜಿಲ್ಲಾ ಪಂಚಾಯತ್) ೨೦೦ ಲಕ್ಷ ರೂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ೪೯೯.೭೯ ಲಕ್ಷ ರೂ. ಕಾಮಗಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ-ಸಮಾಜ ಕಲ್ಯಾಣ ಇಲಾಖೆಯ ೧೯೯.೫೦ ಲಕ್ಷ ರೂ. ಕಾಮಗಾರಿ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ೬೬/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ-ಇAಧನ ಇಲಾಖೆಯ ೨೪೧೭.೯೨ ಲಕ್ಷ ರೂ.ನ ಕಾಮಗಾರಿ ಒಟ್ಟು ೨೫೦೪೬.೭೯ ಲಕ್ಷ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಉದ್ಘಾಟನೆ

ಪೊಲೀಸ್ ಇಲಾಖೆ-ಗೃಹ ಇಲಾಖೆಯ ೧೨೦೦ ಲಕ್ಷ ರೂ. ವೆಚ್ಚದ ಕಟ್ಟಡ ಉದ್ಘಾಟನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ೬೩ ಲಕ್ಷ ರೂ. ವೆಚ್ಚದ ೫ ಅಂಗನವಾಡಿ ಕಟ್ಟಡ ಉದ್ಘಾಟನೆ, ಶಾಲಾ ಶಿಕ್ಷಣ ಇಲಾಖೆಯ ೪೦೪.೨೦ ಲಕ್ಷ ರೂ.ಗಳ ೧೯ ಕಾಮಗಾರಿಗಳ ಉದ್ಘಾಟನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ೮೬೫.೮೦ ಲಕ್ಷ ರೂ. ವೆಚ್ಚದ ೧೧ ಕಾಮಗಾರಿಗಳ ಉದ್ಘಾಟನೆ, ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ-ಸಮಾಜ ಕಲ್ಯಾಣ ಇಲಾಖೆಯ ೨೫೦೦ ಲಕ್ಷ ರೂ. ವೆಚ್ಚದ ೧ ಕಾಮಗಾರಿ ಉದ್ಘಾಟನೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ೧೬೯೫ ಲಕ್ಷ ರೂ. ವೆಚ್ಚದ ೨ ಕಾಮಗಾರಿ ಉದ್ಘಾಟನೆ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ-ಮಡಿಕೇರಿಯಿಂದ - ವೀರಾಜಪೇಟೆವರೆಗೆ ೩೭.೩೮ ಕಿ.ಮೀ. ಉದ್ದದ ೬೬ ಕೆ.ವಿ. ವಿದ್ಯುತ್ ಮಾರ್ಗ-ಇಂಧನ ಇಲಾಖೆಯ ೩೨೪೮.೪೨ ಲಕ್ಷ ರೂ. ವೆಚ್ಚದ ಕಾಮಗಾರಿ ಒಟ್ಟು ೯,೯೭೬.೪೨ ಲಕ್ಷ ರೂ. ವೆಚ್ಚದ ೪೦ ಕಾಮಗಾರಿಗಳನ್ನು ಉದ್ಘಾಟಿಸಿದರು.

ಕೊಡಗು ವಿಶ್ವವಿದ್ಯಾಲಯವು ಅನುದೀಪ್ ಫೌಂಡೇಶ್, ಐಬಿಎಮ್ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಹೊಸ ಕೋರ್ಸುಗಳ ಲೋಕಾರ್ಪಣೆ ಮಾಡಿದರು.