ಮಡಿಕೇರಿ, ಜ. ೨೬: ರಾಷ್ಟçಧ್ವಜ ಭಾರತೀಯತೆಯ ಹೆಮ್ಮೆಯ ಪ್ರತೀಕ. ಧ್ವಜವನ್ನು ಬೆಳಿಗ್ಗೆ ಆರೋಹಣ ಮಾಡಿದರೆ, ಸಂಜೆ ಸೂರ್ಯಸ್ತವಾಗುವ ಮುನ್ನ ಅವರೋಹಣ ಮಾಡಬೇಕೆಂದು ಧ್ವಜ ನೀತಿಯಲ್ಲಿ ಉಲ್ಲೇಖವಿದೆ. ಆದರೆ, ಗಣರಾಜ್ಯವಾದ ಇಂದು ಹಾರಿಸಿದ ಧ್ವಜವನ್ನು ಕತ್ತಲಾದ ಮೇಲೆ ಇಳಿಸಿದ ಪ್ರಸಂಗ ನಡೆದಿದೆ.!

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಿದರು. ಕಾರ್ಯಕ್ರಮ ಎಲ್ಲಾ ಮುಗಿದ ಬಳಿಕ ಎಲ್ಲರೂ ಅಲ್ಲಿಂದ ತೆರಳಿದರು. ಇತ್ತ ಸಂಜೆಯಾದರೂ ಧ್ವಜ ಇಳಿಸುವದನ್ನು ಸಂಬAಧಿಸಿದವರು ಮರೆತರು. ಸೂರ್ಯಾಸ್ತವಾಗಿ ಸಮಯ ೬.೨೦ ದಾಟಿದರೂ ಯಾರೂ ಬರಲಿಲ್ಲ. ನಂತರ ಕತ್ತಲಾಗುತ್ತಿದ್ದಂತೆ ಸಂಬAಧಿಸಿದವರು ಆಗಮಿಸಿ, ಧ್ವಜ ಇಳಿಸಿದರು. ಜಿಲ್ಲಾಡಳಿತದ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲೇ ಹೀಗಾದರೆ ಹೇಗೆ...?

- ರವಿ ಪಿ.ಎಂ.