ಸೋಮವಾರಪೇಟೆ, ಜ. ೨೫: ತಾಲೂಕಿನ ಬಾಣಾ ವರ-ಸೋಮವಾರಪೇಟೆ ರಾಜ್ಯ ಹೆದ್ದಾರಿ ಬದಿಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು ವಾಹನ ಸವಾರರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.

ಬಾಣಾವರ, ಸಿದ್ದಲಿಂಗ ಪುರ, ಸಂಗಯ್ಯನಪುರ, ಬಸಿರುಕುಪ್ಪೆ ವ್ಯಾಪ್ತಿಯಲ್ಲಿ ಕಾಡಾನೆಗಳು ಸಂಚರಿ ಸುತ್ತಿದ್ದು, ಕೆಲವೊಮ್ಮೆ ರಸ್ತೆ ದಾಟುವ ಸಂದರ್ಭ ವಾಹನಗಳಿಗೆ ಎದುರಾಗುತ್ತಿವೆ.

ಸಾಮಾನ್ಯವಾಗಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಕಾಡಾನೆಗಳು ರಸ್ತೆ ದಾಟುತ್ತಿರುತ್ತವೆ. ನಿನ್ನೆ ಸಂಜೆ ವೇಳೆಗೆ ಬಾಣಾವರ ಗ್ರಾಮದ ರಸ್ತೆ ಬದಿಯಲ್ಲಿ ಕೆಲಕಾಲ ನಿಂತಿದ್ದ ಕಾಡಾನೆಯೊಂದು ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ತಂದೊಡ್ಡದೇ ಅರಣ್ಯದೊಳಗೆ ತೆರಳಿತು.