ಬೆಂಗಳೂರು, ಜ. ೨೬ : ಅಪ್ಪ ಹಾರಿಸಿದ ಗುಂಡಿಗೆ ಪಕ್ಕದ ಕೊಠಡಿಯಲ್ಲಿದ್ದ ಮಗ ಬಲಿಯಾದ ಘಟನೆ ಗುರುವಾರ ಮಧ್ಯಾಹ್ನ ಇಲ್ಲಿನ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಕಾಮಾಕ್ಷಿ ಪಾಳ್ಯದ ಕರೇಕಲ್ ಎಂಬಲ್ಲಿನ ಮನೆಯಲ್ಲಿ ಕೆಲ ವರ್ಷಗಳಿಂದ ಕುಟುಂಬದೊAದಿಗೆ ನೆಲೆಸಿರುವ ಸುರೇಶ್ ಎಂಬವರ ಮಗ ನರ್ತನ್ ಬೋಪಣ್ಣ (೩೨) ಮೃತ ದುರ್ಧೈವಿ ಯಾಗಿದ್ದಾನೆ. ನರ್ತನ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಮನೆಯಲ್ಲಿ ತಾಯಿ ಅನಾರೋಗ್ಯ ದಿಂದ ಹಾಸಿಗೆ ಹಿಡಿದಿದ್ದಾರೆ. ಆದರೆ ತಂದೆ ಸುರೇಶ್‌ಗೆ ಕುಡಿತದ ಚಟ ವಿಪರೀತವಾಗಿತ್ತು.

ಕೊಡಗಿನ ವೀರಾಜಪೇಟೆ ಮೂಲದ ನರ್ತನ್ ಬೋಪಣ್ಣ ಕರೇಕಲ್‌ನ ಮನೆಯಲ್ಲಿ ತಂದೆ ಸುರೇಶ್ ಮತ್ತು ತಾಯಿ ಜತೆ ವಾಸವಾಗಿದ್ದರು.

(ಮೊದಲ ಪುಟದಿಂದ) ಗುರುವಾರ ಮಧ್ಯಾಹ್ನ ತಂದೆ ಸುರೇಶ್ ಮಗನ ಬಳಿ ಕುಡಿಯಲು ಹಣ ಕೇಳಿದ್ದಾರೆ. ಕುಡಿದು ಹಣ ಹಾಳು ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನರ್ತನ್ ಹಣ ನೀಡಲಿಲ್ಲ. ತಂದೆಯ ಹಿಂಸೆ ಜೋರಾದಾಗ ರೂಮಿಗೆ ತಳ್ಳಿ ಚಿಲಕ ಹಾಕಿದ್ದಾನೆ. ಇದರಿಂದ ಆಕ್ರೋಶಿತನಾದ ಸುರೇಶ್ ಅಲ್ಲಿಯೇ ಇದ್ದ ಬಂದೂಕಿನಿAದ ಬಾಗಿಲ ಚಿಲಕಕ್ಕೆ ಗುಂಡು ಹಾರಿಸಿದ್ದಾನೆ. ಫ್ಲೆöÊವುಡ್ ಬಾಗಿಲಿನಿಂದ ಗುಂಡು ಹೊರ ಬಂದು ಪಕ್ಕದ ಕೋಣೆಯಲ್ಲಿ ಕುಳಿತಿದ್ದ ನರ್ತನ್ ತೊಡೆ ಮೇಲ್ಭಾಗಕ್ಕೆ ತಗುಲಿದೆ. ಈ ಘಟನೆ ಮಧ್ಯಾಹ್ನ ೩.೨೦ ರ ಸುಮಾರಿಗೆ ನಡೆದಿದ್ದು, ಕೂಡಲೇ ನೆರೆಕರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಇದಕ್ಕೂ ಮೊದಲೇ ಗುಂಡು ತಗುಲಿರುವುದಾಗಿ ನರ್ತನ್ ತನ್ನ ಸಹೋದರಿಗೆ ಕರೆ ಮಾಡಿದ್ದಾನೆ. ಸಹೋದರಿ ಸಂಬAಧಿಯೊಬ್ಬರಿಗೆ ಕೂಡಲೇ ಮನೆ ಬಳಿ ತೆರಳಲು ಹೇಳಿದ್ದಾರೆ. ಈ ನಡುವೆ ಹಾಸಿಗೆ ಹಿಡಿದಿರುವ ತಾಯಿ ನರ್ತನ್ ರಕ್ತ ಸುರಿಸುತ್ತಾ ನರಳುತ್ತಿರುವುದನ್ನು ಅಸಹಾಯಕರಾಗಿ ನೋಡುತ್ತಿದ್ದರು.

ಪೊಲೀಸರು ಆಗಮಿಸಿ ನರ್ತನ್‌ನನ್ನು ಆ್ಯಂಬ್ಯುಲೆನ್ಸ್ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಹೆಚ್ಚಿನ ರಕ್ತ ಸ್ರಾವ ಆಗಿದ್ದರಿಂದ ಆಸ್ಪತ್ರೆಯಲ್ಲಿ ನರ್ತನ್ ೬.೨೦ಕ್ಕೆ ಕೊನೆ ಉಸಿರು ಎಳೆದಿದ್ದಾನೆ. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಸ್ಥರಿಗೆ ಶವ ಒಪ್ಪಿಸಲಾಗಿದೆ. ಪೊಲೀಸರು ಬರುವ ಮುನ್ನ ಸುರೇಶ್ ನೆಲದಲ್ಲಿ ಚೆಲ್ಲಿದ್ದ ರಕ್ತವನ್ನು ಒರೆಸಿ ಶುಚಿ ಮಾಡಿದ್ದ.

ಆರೋಪಿ ಸುರೇಶ್‌ನನ್ನು ಬಂಧಿಸಿರುವ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

(ಕೋವರ್ ಕೊಲ್ಲಿ ಇಂದ್ರೇಶ್)