ಕರ್ತವ್ಯ ಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟçಪತಿ
ನವದೆಹಲಿ, ಜ. ೨೬: ರಾಷ್ಟç ರಾಜಧಾನಿ ನವದೆಹಲಿಯಲ್ಲಿ ೭೫ನೇ ಗಣರಾಜ್ಯೋತ್ಸವ ಪ್ರಯುಕ್ತ ಕರ್ತವ್ಯ ಪಥದಲ್ಲಿ ರಾಷ್ಟçಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಷ್ಟçಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟçಪತಿ ಜಗದೀಪ್ ಧನಕರ್ ಸಾಥ್ ನೀಡಿದರು. ನಂತರ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಸಮಾರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಧ್ವಜಾರೋಹಣದ ಬೆನ್ನಲ್ಲೇ ರಾಷ್ಟçಪತಿಗಳಿಗೆ ೨೧ ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪೆರೇಡ್ ಆರಂಭವಾಯಿತು. ರಾಜಪಥ್ ಕರ್ತವ್ಯ ಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ ೨ನೇ ಗಣರಾಜ್ಯೋತ್ಸವ ಇದಾಗಿದ್ದು, ಪೆರೇಡ್ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯ ಪಥದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತಿದೆ. ಫ್ರಾನ್ಸ್ ಸೇನಾ ತುಕಡಿ, ಯುದ್ಧ ವಿಮಾನಗಳು ಪಥಸಂಚನದಲ್ಲಿ ಭಾಗಿಯಾಗಿದ್ದವು. ಯೂರೋಪ್, ಆಫ್ರಿಕಾ, ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡ ‘ಫ್ರೆಂಚ್ ವಿದೇಶಿ ಪಡೆ’ ೭೫ನೇ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭಾಗಿಯಾಗಿತ್ತು. ೨೦೨೩ರಲ್ಲಿ ಪ್ಯಾರಿಸ್ ಬ್ಯಾಸ್ಟಿಲ್ ಡೇನಲ್ಲಿ ಭಾರತ ಸೇನೆ ಪಾಲ್ಗೊಂಡಿತ್ತು, ಹೀಗಾಗಿ ಇಂದು ಫ್ರೆಂಚ್ ವಿದೇಶಿ ಪಡೆ ಪಥಸಂಚಲನದಲ್ಲಿ ಭಾಗಿಯಾಗಿತ್ತು. ೩೦ ಮಂದಿ ಸಂಗೀತಗಾರರಿAದ ತಮ್ಮ ರೆಜಿಮೆಂಟ್ ಗೀತೆ ಗಾಯನ ನುಡಿಸಲಾಯಿತು. ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಯೋಜಕತ್ವದಲ್ಲಿ ದೇಶದ ಸುಮಾರು ೧,೯೦೦ ಪ್ರಕಾರಗಳ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನಕ್ಕೆ ‘ಅನಂತ’ ಸೂತ್ರ ಎಂದು ಹೆಸರಿಡಲಾಗಿದೆ. ಕಸೂತಿ ಕಲೆಗೆ ಉತ್ತೇಜನ ನೀಡುವ ಸಲುವಾಗಿ ಸೀರೆ ಪ್ರದರ್ಶನ ಮಾಡಲಾಯಿತು. ಸೀರೆ ಪ್ರದರ್ಶನದಲ್ಲಿ ಮೈಸೂರು ರೇಷ್ಮೆ ಸೀರೆ, ಕಾಂಚೀಪುರA ಸೀರೆ, ಕಾಶ್ಮೀರದ ಕಾಶಿದಾ ಸೀರೆ ಸೇರಿ ಮುಂತಾದ ಸೇರಿಗಳ ಪ್ರದರ್ಶನ ಮಾಡಲಾಯಿತು.
ಕೊನೆಗೂ ನಿಗಮ ಮಂಡಳಿ ಪಟ್ಟಿ ಬಿಡುಗಡೆ
ಬೆಂಗಳೂರು, ಜ. ೨೬: ರಾಜ್ಯ ಸರ್ಕಾರ ಅಳೆದು ತೂಗಿ ಕೊನೆಗೂ ನಿಗಮ ಮಂಡಳಿ ನೇಮಕಾತಿಯ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ೩೪ ಶಾಸಕರನ್ನು ವಿವಿಧ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಸಿ. ಪುಟ್ಟರಂಗಶೆಟ್ಟಿ ಹಾಗೂ ಎಸ್.ಎನ್. ಸುಬ್ಬಾರೆಡ್ಡಿ, ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು ೩೪ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಇಂಡಿಯಾ ಮೈತಿಕೂಟದೊಂದಿಗೆ ದೃಢವಾಗಿದ್ದೇವೆ : ಜೆಡಿಯು
ಪಾಟ್ನಾ, ಜ. ೨೬: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಇಂಡಿಯಾ ಮೈತ್ರಿಕೂಟದೊಂದಿಗೆ ದೃಢವಾಗಿದೆ. ಆದರೆ ಕಾಂಗ್ರೆಸ್ ಮಿತ್ರ ಪಕ್ಷಗಳ ಬಗ್ಗೆ ಮತ್ತು ಸೀಟು ಹಂಚಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶುಕ್ರವಾರ ಜೆಡಿಯು ಹೇಳಿದೆ. ರಾಜ್ಯ ಜೆಡಿಯು ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ಅವರು ಈ ಹೇಳಿಕೆ ನೀಡಿದ್ದು, ನಿತೀಶ್ ಕುಮಾರ್ ನೇತೃತ್ವದ ತಮ್ಮ ಪಕ್ಷವು ಬಿಜೆಪಿ ನೇತೃತ್ವದ ಎನ್ಡಿಎಗೆ ಮರಳಲಿದೆ ಎಂಬುದು ಕೇವಲ ವದಂತಿ ಎಂದಿದ್ದಾರೆ. ಬಿಹಾರದ ಆಡಳಿತರೂಢ ಮಹಾಘಟಬಂಧನ್ನಲ್ಲಿ ಎಲ್ಲವೂ ಚೆನ್ನಾಗಿದೆ, ಮಾಧ್ಯಮಗಳ ವರದಿ ಕೇವಲ ಊಹಾಪೋಹ ಎಂದು ಕುಶ್ವಾಹ ಸುದ್ದಿಗಾರರಿಗೆ ತಿಳಿಸಿದ್ದಾರೆ. ನಿನ್ನೆ ಹಾಗೂ ಇಂದು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ. ಇದು ಮಾಮೂಲಿ ವಿಷಯ. ಹರಿದಾಡುತ್ತಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಪಕ್ಷದ ಶಾಸಕರನ್ನು ಪಾಟ್ನಾಗೆ ಬರುವಂತೆ ಸೂಚಿಸಲಾಗಿದೆ ಎಂಬುದು ಸಹ ಕೇವಲ ವದಂತಿ ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಗಣರಾಜ್ಯೋತ್ಸವ ಪರೇಡ್ನಲ್ಲಿ ಪರಸ್ಪರ ದೂರ ಸ್ವಲ್ಪ ದೂರ ಕುಳಿತಿದ್ದರೂ ನಾವು ಭಾರತ ಒಕ್ಕೂಟದೊಂದಿಗೆ ದೃಢವಾಗಿದ್ದೇವೆ ಎಂದು ಕುಶ್ವಾಹ ಪ್ರತಿಪಾದಿಸಿದರು. ಆದಾಗ್ಯೂ, ನಮ್ಮ ಮೈತ್ರಿಕೂಟದ ಪಾಲುದಾರ ಪಕ್ಷ ಕಾಂಗ್ರೆಸ್, ಇತರ ಪಕ್ಷಗಳ ಕುರಿತ ತನ್ನ ನಿಲುವು ಮತ್ತು ಸ್ಥಾನಗಳ ಹಂಚಿಕೆಗೆ ಸಂಬAಧಿಸಿದAತೆ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ನಮ್ಮ ನಾಯಕ ನಿತೀಶ್ ಕುಮಾರ್ ಬಹಳ ಹಿಂದಿನಿAದಲೂ ಸೀಟು ಹಂಚಿಕೆ ಅಂತಿಮಗೊಳಿಸುವಿಕೆಯ ಅಗತ್ಯವನ್ನು ಒತ್ತಿಹೇಳುತ್ತಿದ್ದಾರೆ. ಸೀಟು ಹಂಚಿಕೆ ಒಪ್ಪಂದದ ಮೂಲಕ ನಾವು ಲೋಕಸಭೆ ಚುನಾವಣೆಯ ಮೇಲೆ ಗಮನಹರಿಸಬಹುದು ಎಂದಿದ್ದಾರೆ.