.
ಕಣಿವೆ, ಜ. ೨೪: ಕಳೆದ ಐದು ವರ್ಷಗಳ ಹಿಂದೆ ಶಂಕು ಸ್ಥಾಪನೆ ಗೊಂಡು ನಿರ್ಮಾಣಕ್ಕೆ ಒಳಪಟ್ಟ ಕುಶಾಲನಗರದ ಪುರಸಭೆ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದೆ.
ರೂ. ೨.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಕಾಮಗಾರಿ ಆಡಳಿತಾರೂಢರ ನಿರ್ಲಕ್ಷö್ಯ ಧೋರಣೆಯಿಂದ ಅವೈಜ್ಞಾನಿಕವಾಗಿ ರೂಪುಗೊಂಡಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟು ರೂ. ೨.೫೦ ಕೋಟಿ ಕಣಿವೆ, ಜ. ೨೪: ಕಳೆದ ಐದು ವರ್ಷಗಳ ಹಿಂದೆ ಶಂಕು ಸ್ಥಾಪನೆ ಗೊಂಡು ನಿರ್ಮಾಣಕ್ಕೆ ಒಳಪಟ್ಟ ಕುಶಾಲನಗರದ ಪುರಸಭೆ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿದೆ.
ರೂ. ೨.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಕಾಮಗಾರಿ ಆಡಳಿತಾರೂಢರ ನಿರ್ಲಕ್ಷö್ಯ ಧೋರಣೆಯಿಂದ ಅವೈಜ್ಞಾನಿಕವಾಗಿ ರೂಪುಗೊಂಡಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟು ರೂ. ೨.೫೦ ಕೋಟಿ ಗೊಂಡಿರುವ ಈ ಕಟ್ಟಡದಲ್ಲಿ ೧೬ ಸಂಖ್ಯೆಯ ವಾಣಿಜ್ಯ ಮಳಿಗೆಗಳು ಇದ್ದು ಬಾಡಿಗೆಗೆ ಕೊಡದೇ ಹಾಗೆಯೇ ಬೀಗ ಹಾಕಿಡಲಾಗಿದೆ.
ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟಡದಲ್ಲಿ ಕಚೇರಿ
ಹೊಸ ಕಟ್ಟಡ ಕಟ್ಟಲು ಹಳೆಯ ಕಟ್ಟಡ ತೆರವು ಮಾಡಿದ ಬಳಿಕ ವಾರ್ಷಿಕ ೪.೫೦ ಲಕ್ಷ ರೂ.ಗಳ ಪಾವತಿಸಿ ಖಾಸಗಿ ಕಟ್ಟಡದಲ್ಲಿರುವ ಪುರಸಭೆ ಕಚೇರಿಯನ್ನು ಅಪೂರ್ಣ ಗೊಂಡಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಬಾಡಿಗೆ ಹಣವೂ ಉಳಿಯುತ್ತದೆ. ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಿದರೆ ಪುರಸಭೆಗೆ ಆದಾಯವೂ ಹರಿದು ಬರುತ್ತದೆ. ಆದರೆ ಏತಕ್ಕಾಗಿ ಮೀನಾ ಮೇಷ ಎಣಿಸಲಾಗುತ್ತಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಒಟ್ಟಾರೆ, ಹಿಂದಿನ ಆಡಳಿತವಿದ್ದಾಗ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿ ಜಾರಿಯಾಗಿರುವ ಅಪೂರ್ಣ ಕಾಮಗಾರಿಗಳ ಸಾಲಿಗೆ ಸೇರಿರುವ ಪುರಸಭೆ ಕಟ್ಟಡ ಕಾಮಗಾರಿ ಇದೀಗ ಪೂರ್ಣಗೊಳ್ಳುವುದು ಅತ್ಯಗತ್ಯವಾಗಿದೆ. ಇದಕ್ಕೆ ಬೇಕಾದ ಅನುದಾನವನ್ನು ತರುವ ಮೂಲಕ ಸಾರ್ವಜನಿಕರ ಬಳಕೆಗೆ ಸುಸಜ್ಜಿತ ವಾದ ಪುರಸಭೆ ಆಡಳಿತ ಸೌಧವನ್ನು ನಿರ್ಮಿಸಬೇಕಾದ ಜವಾಬ್ದಾರಿ ಈಗಿನ ಶಾಸಕ ಡಾ. ಮಂಥರ್ ಗೌಡ ಅವರ ಮುಂದಿರುವ ಸವಾಲಾಗಿದೆ.
ಈಗಾಗಲೇ ಐದು ವಸಂತ ಗಳಿಂದ ನೆನೆಗುದಿಗೆ ಬಿದ್ದಿರುವ ನೂತನ ಪುರಸಭಾ ಕಟ್ಟಡ ಶಿಥಿಲಾ ವಸ್ಥೆ ತಲುಪುವ
ಮುನ್ನಾ ಬಳಕೆಗೆ ಒಳಪಟ್ಟರೆ ಎಲ್ಲರಿಗೂ ಬಹು ಪ್ರಯೋಜನಕಾರಿ.
ವಿಶೇಷ ವರದಿ: ಕೆ.ಎಸ್.ಮೂರ್ತಿ