ವೀರಾಜಪೇಟೆ, ಜ. ೨೪: ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಜನವರಿ ೨೬ ರಂದು ನಡೆಯುವ ಐತಿಹಾಸಿಕ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಜಿಲ್ಲೆಯ ಚೆಂಬೆಬೆಳ್ಳೂರು ಗ್ರಾಮದ, ಮೈಸೂರಿನಲ್ಲಿ ಹುಟ್ಟಿ ಬೆಳೆದ ಕೊಳುವಂಡ ಪುಣ್ಯ ನಂಜಪ್ಪ ಮಿಗ್-೨೯ ವಿಮಾನದಲ್ಲಿ ಸಾಹಸ ಪ್ರದರ್ಶನ ನಡೆಸಲಿದ್ದಾರೆ. ವಾಯು ಸೇನಾ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಪುಣ್ಯ ನಂಜಪ್ಪ ಭಾರತೀಯ ವಾಯುಪಡೆಯಲ್ಲಿ ಪೈಲೆಟ್ ಆಗಿದ್ದು ಈಗ ಗಣರಾಜ್ಯೋತ್ಸವ ದಿನದಂದು ವಿಮಾನದ ಹಾರಾಟ ನಡೆಸಲಿದ್ದು ಗಣರಾಜ್ಯೋತ್ಸವ ದಿನದಂದು ಯುದ್ಧ ವಿಮಾನ ಹಾರಾಟ ಮಾಡಲಿರುವ ಏಕೈಕ ಮಹಿಳಾ ಪೈಲೆಟ್ ಪುಣ್ಯ ಆಗಲಿದ್ದಾರೆ.
ಇದು ಕರ್ನಾಟಕ ಹಾಗೂ ನಮ್ಮ ಕೊಡಗಿಗೂ ಹೆಮ್ಮೆ ತರುವಂತಹ ಸಂಗತಿಯಾಗಿದ್ದು ನವದೆಹಲಿಯ ವಿಜಯ್ ಚೌಕ್ನಿಂದ ಕರ್ತವ್ಯ ಪಥದವರೆಗೆ ನಡೆಯುವ ಗಣರಾಜ್ಯೋತ್ಸವದ ಪೆರೇಡ್ ಸಂದರ್ಭ ಪುಣ್ಯ ನಂಜಪ್ಪ ಯುದ್ಧ ವಿಮಾನ ಹಾರಾಟ ನಡೆಸುವ ಮೂಲಕ ದೆಹಲಿಯಲ್ಲಿ ಕೊಡಗಿನ ಕೀರ್ತಿ ಪತಾಕೆ ಹಾರಿಸಲಿದ್ದಾರೆ.
ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ನಾರಿ ಶಕ್ತಿ ಮೇಳೈಸಲಿದ್ದು ಇದರಲ್ಲಿ ಪುಣ್ಯ ನಂಜಪ್ಪ ಯುದ್ಧ ವಿಮಾನದ ಹಾರಾಟ
(ಮೊದಲ ಪುಟದಿಂದ) ಸಾಹಸಕ್ಕಿಳಿದಿರುವುದು ಕರುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಕೊಡಗಿನ ಕುವರಿ ಪುಣ್ಯ ನಂಜಪ್ಪ ದಿವಂಗತ ಕೊಳುವಂಡ ಪಿ. ನಂಜಪ್ಪ ಹಾಗೂ ಮೈಸೂರಿನ ವಿಜಯನಗರದ ಸೇಂಟ್ ಜೋಸೆಫ್ ಸೆಂಟ್ರಲ್ ಶಾಲೆಯ ಶಿಕ್ಷಕಿ ಅನುರಾಧ ಅವರ ಪುತ್ರಿ.
ಛಲ ಬಿಡದ ಪುಣ್ಯ ನಂಜಪ್ಪ : ಪುಣ್ಯ ನಂಜಪ್ಪ ಅವರಿಗೆ ಮೊದಲಿನಿಂದಲೂ ಭಾರತೀಯ ವಾಯು ಸೇನೆಗೆ ಸೇರುವ ಉತ್ಸುಕತೆ ಹೊಂದಿದ್ದರು. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವೇಳೆ ನಡೆಯುವ ಏರ್ ಶೋ ವೀಕ್ಷಿಸುವ ವೇಳೆ ಈ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡಿದ್ದರು. ಪಿಯುಸಿ ವ್ಯಾಸಂಗ ಮಾಡಿದ ನಂತರ ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಬಿಇ ಪದವಿ ಪಡೆದರು. ತರುವಾಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಎನ್.ಡಿ.ಎ. ಸೇರಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಅಲ್ಲಿ ಮಹಿಳೆಯರಿಗೆ ಅವಕಾಶ ಇಲ್ಲದಿದ್ದ ಕಾರಣ ಅವರ ಆಸೆ ಈಡೇರಲಿಲ್ಲ. ಛಲ ಬಿಡದ ಪುಣ್ಯ ನಂಜಪ್ಪ ಭಾರತೀಯ ವಾಯು ಸೇನೆಗೆ ಸೇರಬೇಕೆಂಬ ಗುರಿ ಹೊಂದಿದ್ದು ಆ ನಿಟ್ಟಿನಲ್ಲಿ ಶ್ರಮವಹಿಸಿದರು. ತರುವಾಯ ಭಾರತೀಯ ವಾಯುಸೇನೆ ನಡೆಸುವ ಸಿ.ಇ.ಟಿ. ಮಾದರಿಯ ಎಫ್.ಸಿ.ಎ.ಟಿ ಪರೀಕ್ಷೆಯಲ್ಲಿ ಪುಣ್ಯ ನಂಜಪ್ಪ ಭಾಗಿಯಾದರು.
ಭಾರತದಾದ್ಯಂತ ನಡೆಯುವ ಈ ಪರೀಕ್ಷೆಯಲ್ಲಿ ೩.೫ ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ಒಂದು ಸಾವಿರ ಮಂದಿಯನ್ನು ಶಾರ್ಟ್ಲಿಸ್ಟ್ ಮಾಡಿ ೧೩೫ ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ. ಈ ೧೩೫ ಅಭ್ಯರ್ಥಿಗಳಲ್ಲಿ ಪುಣ್ಯ ನಂಜಪ್ಪ ಒಬ್ಬರಾಗಿದ್ದರು. ಇದಾದ ನಂತರ ಮೈಸೂರಿನ ಇಂಡಿಯನ್ ಏರ್ ಫೋರ್ಸ್ನ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಇವರು ಭಾಗಿಯಾಗಿದ್ದರು. ಭಾರತದ ವಿವಿಧ ರಾಜ್ಯಗಳಿಂದ ೧೬೦ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದÀರಲ್ಲಿ ವಿಮಾನ ಹಾರಾಟ ಮಾಡುವ ಒಬ್ಬರೇ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, ಪುಣ್ಯ ನಂಜಪ್ಪ ಇದರ ಪಾತ್ರವಾದರು. ಇದರ ಫಲವಾಗಿ ೨೦೧೮ರ ಆಗಸ್ಟ್ನಲ್ಲಿ ಏರ್ಫೋರ್ಸ್ ಕಮಿಷನ್ ಅಡ್ಮಿಶನ್ ಟೆಸ್ಟ್ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದರು. ನಂತರ ನಡೆದ ಸಂದರ್ಶನ ಹಾಗೂ ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ‘ಟ್ರೆöÊನಿ ಪೈಲೆಟ್’ ಆಗಿ ಪುಣ್ಯ ನಂಜಪ್ಪ ಆಯ್ಕೆಗೊಂಡರು. ಹೈದರಾಬಾದಿನ ದುಂಡಿಗಲ್ ವಾಯುಸೇನಾ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಪುಣ್ಯ ನಂಜಪ್ಪ ಭಾರತೀಯ ವಾಯುಪಡೆಯಲ್ಲಿ ಪೈಲೆಟ್ ಆಗಿದ್ದು ಗಣರಾಜ್ಯೋತ್ಸವ ದಿನದಂದು ಮಿಗ್-೨೯ ಯುದ್ಧ ವಿಮಾನದ ಹಾರಾಟ ನಡೆಸಲಿದ್ದಾರೆ. ಈ ಮೂಲಕ ಭಾರತದ ನಾರಿ ಶಕ್ತಿ ಪ್ರದರ್ಶನವಾಗಲಿದೆ.
- ವರದಿ : ಈಶಾನ್ವಿ ಕಿರಣ್