ಮುಳ್ಳೂರು, ಜ. ೨೪: ಇತ್ತೀಚೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆ ವತಿಯಿಂದ ಸಮೀಪದ ಶನಿವಾರಸಂತೆ ಯಶಸ್ವಿನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ೭ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಯೋಗ ಸಂಸ್ಥೆಯ ಹಿರಿಯ ತರಬೇತುದಾರ ಎನ್.ಎಸ್. ಅರುಣ್ ತಂಡವು ವಿನ್ನರ್ ಆಗಿ ಚಾಂಪಿಯನ್ ಶಿಪ್ ತನ್ನದಾಗಿಸಿಕೊಂಡಿತು. ಹಿರಿಯ ತರಬೇತುದಾರ ಸಂಕೇತ್ ತಂಡವು ರನ್ನರ್ಗೆ ತೃಪ್ತಿಪಟ್ಟುಕೊಂಡಿತು.
ಕರಾಟೆ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಶನಿವಾರಸಂತೆ ಕರಾಟೆ ಮತ್ತು ಯೋಗ ಸಂಸ್ಥೆಯ ಹಳೆ ವಿದ್ಯಾರ್ಥಿ ನಿಡ್ತ ವೃತ್ತ ಗ್ರಾಮ ಆಡಳಿತ ಅಧಿಕಾರಿ ಎಸ್.ಎ. ಅಬ್ದುಲ್ ರಜಾಕ್, ಕುಶಾಲನಗರ ಉಪನೋಂದಾವಣಿ ಇಲಾಖೆಯ ಅಧಿಕಾರಿ ಎಸ್.ವಿ. ಸಚಿನ್, ನಂಜನಗೂಡು ಪೊಲೀಸ್ ಸಿಬ್ಬಂದಿ ಎಸ್.ಜೆ. ಶರಿಂತಾಜು, ಮಡಿಕೇರಿ ಪೊಲೀಸ್ ಸಿಬ್ಬಂದಿ ಸಲಾವುದ್ದೀನ್, ಕೊಣನೂರಿನ ಅಂಚೆ ಇಲಾಖೆಯ ಅಶ್ವಿತ ಇವರುಗಳು ಪಾಲ್ಗೊಂಡು ಸಭೆಯಲ್ಲಿ ಕರಾಟೆ ಮತ್ತು ಯೋಗ ಅಭ್ಯಾಸದಿಂದ ಆಗುವ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶನಿವಾರಸಂತೆಯ ಉದ್ಯಮಿ ಎಂ.ಡಿ. ಯೋಗಾನಂದ್, ತರಬೇತುದಾರರು ಹಾಜರಿದ್ದರು.