ಕುಶಾಲನಗರ, ಜ. ೨೪: ತ್ಯಾಜ್ಯ ನೀರು ಶುದ್ಧೀಕರಿಸುವ ಮೂಲಕ ಕೆರೆಗಳಿಗೆ ಹರಿಸಿ ಅಂತರ್ಜಲ ಹೆಚ್ಚಿ ಸುವ ಕೆಲಸವಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ ನೀರೆತ್ತಿ ಪಿರಿಯಾಪಟ್ಟಣ ತಾಲೂಕಿನ ಸುಮಾರು ೧೫೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಅವರು ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಸಾರ್ವ ಜನಿಕ ಸಭೆಯಲ್ಲಿ ಮಾತನಾಡಿದರು.

ಗ್ರಾಮ, ಪಟ್ಟಣಗಳಲ್ಲಿ ನೀರಿನ ಸೆಲೆ ಕೊರತೆ ನೀಗಿಸಲು ಈ ರೀತಿಯ ಯೋಜನೆಗಳನ್ನು ಕೋಲಾರ ಮತ್ತಿತರ ಕಡೆ ಪ್ರಾರಂಭಿಸಲಾಗಿದೆ. ಇದೀಗ ಕಾವೇರಿ ನದಿಯಿಂದ ನೀರು ಪಂಪ್ ಮಾಡುವ ಮೂಲಕ ಪಿರಿಯಾಪಟ್ಟಣ ತಾಲೂಕಿನ ಸುಮಾರು ೭೫ ಗ್ರಾಮಗಳ ಕೆರೆ, ಕಟ್ಟೆಗಳನ್ನು ತುಂಬಿಸುವ ಯೋಜನೆ ಪ್ರಾರಂಭವಾಗಿದೆ ಎಂದರು. ಅಂತರ್ಜಲ ಹೆಚ್ಚಿಸುವ ಮೂಲಕ ಕುಡಿ ಯುವ ನೀರಿನ ಕೊರತೆಯನ್ನು ನೀಗಿಸಬ ಹುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಾರ್ಷಿಕ ೧೦,೦೦೦ ಕೋಟಿ ರೂ.ಗಳನ್ನು ನೀರಾವರಿ ಯೋಜ ನೆಗೆ ಮೀಸಲಿಡಲಾಗಿದ್ದು ಐದು ವರ್ಷಗಳ ಅವಧಿಯಲ್ಲಿ ೫೦,೦೦೦ ಕೋಟಿ ರೂಗಳ ಯೋಜನೆಯ ಗುರಿ ಸರ್ಕಾರದ್ದಾಗಿದೆ ಎಂದರು.

೨೩೬ ತಾಲೂಕುಗಳಲ್ಲಿ ೨೨೩ ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ಮಳೆಯ ಕೊರತೆಯ ನಡುವೆ ಜನರ ಸಂಕಷ್ಟಕ್ಕೆ ಸರಕಾರ ಯೋಜನೆಗಳನ್ನು ರೂಪಿಸಿದ್ದು, ಬರಗಾಲ ನೀಗಿಸುವ ನಿಟ್ಟಿ ನಲ್ಲಿ ಸರಕಾರ ಕಾರ್ಯತತ್ಪರವಾಗಿದೆ ಎಂದರು. ಪ್ರಧಾನ ಮಂತ್ರಿಗಳ ಬಳಿ ತೆರಳಿ ವಿಶೇಷ ಅನುದಾನಕ್ಕೆ ಕೋರಿ ದರೂ ಇದುವರೆಗೆ ಯಾವುದೇ ರೀತಿಯ ಸ್ಪಂದನ ದೊರಕಿಲ್ಲ ಎಂದು ಅವರು ಆರೋಪಿಸಿದರು.

ಶ್ರೀ ರಾಮನ ಹೆಸರಿನಲ್ಲಿ ಬಿಜೆಪಿ ಜನರನ್ನು ಮರಳು ಮಾಡುತ್ತಿದೆ. ಹಿಂದುತ್ವದ ಆಧಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ ಅವರು; ತಾವು ಕೂಡ ಶ್ರೀ ರಾಮನ ಭಕ್ತರೇ ಎಂದು ಒತ್ತಿ ಹೇಳಿದರು. ತಮ್ಮ ಅಸ್ತಿತ್ವಕ್ಕೆ ವೋಟ್ ಬ್ಯಾಂಕಿಗೆ ಸೀಮಿತವಾಗಿ ಬಿಜೆಪಿಯೊಂದಿಗೆ ಜೆಡಿಎಸ್ ಸೇರಿ ಕೊಂಡಿದೆ ಎಂದು ಹೇಳಿದ ಸಿದ್ದರಾ ಮಯ್ಯ ಜೆಡಿಎಸ್ ಜಾತ್ಯತೀತ ಧರ್ಮ ದಿಂದ ಕೋಮುವಾದಿಗಳ ಜೊತೆ ಸಂಪರ್ಕ ಬೆಳೆಸಿದೆ ಎಂದರು.

ಉಪಮುಖ್ಯಮAತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಬದುಕಿನೊಂದಿಗೆ ಕೆಲಸ ಮಾಡುತ್ತಿದೆ; ಆದರೆ ಬಿಜೆಪಿ ಭಾವನೆ ಗಳ ಜೊತೆ ಪೈಪೋಟಿ ನಡೆಸುತ್ತಿದೆ ಎಂದು ಆರೋಪಿಸಿದರು.

ರೈತರ ಭವಣೆ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ಸರಕಾರ ಸಿದ್ಧವಾಗಿದೆ. ಪಾರ್ಲಿಮೆಂಟ್‌ನಲ್ಲಿ ಹೆಚ್ಚಿನ ಶಕ್ತಿ ಪಕ್ಷಕ್ಕೆ ಅಗತ್ಯವಿದೆ ಎಂದರು.

ಸಚಿವ ಕೆ. ವೆಂಕಟೇಶ ಪ್ರಾಸ್ತಾವಿ ಕವಾಗಿ ಮಾತನಾಡಿ ಪಿರಿಯಾಪಟ್ಟಣ ದಲ್ಲಿ ಕೆರೆ, ಕಟ್ಟೆಗಳ ಹೂಳೆತ್ತುವ ಕೆಲಸ ಆಗಬೇಕಿದೆ. ಕೆರೆಯನ್ನು ಅಭಿವೃದ್ಧಿ ಗೊಳಿಸುವ ಮೂಲಕ ರೈತರ ಸಂಕಷ್ಟಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದರು. ಇದೇ ಸಂದರ್ಭ ಮುಖ್ಯ ಮಂತ್ರಿಗಳು ತಾಲೂಕಿನ ರೈತಾಪಿ ವರ್ಗಕ್ಕೆ ಕೃಷಿ ಸಲಕರಣೆಗಳನ್ನು ವಿತರಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಸ್. ಬೋಸರಾಜು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ, ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಸೇರಿ ದಂತೆ ಮೈಸೂರು ಜಿಲ್ಲೆಯ ಶಾಸಕರು ಗಳು, ಜನಪ್ರತಿನಿಧಿಗಳು ಹಿರಿಯ ಅಧಿ ಕಾರಿಗಳು ಕಾರ್ಯಕ್ರಮದಲ್ಲಿ ಉಪ ಸ್ಥಿತರಿದ್ದರು. -ಚಂದ್ರಮೋಹನ್