ಮಡಿಕೇರಿ, ಜ. ೨೨: ಬಿರುನಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ೧೧೩ನೇ ಶಾಲಾ ವಾರ್ಷಿಕೋತ್ಸವವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಪ್ರಮುಖರಾದ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು ನೆರವೇರಿಸಿ ಕೊಟ್ಟರು.
ಮಧ್ಯಾಹ್ನದ ಊಟದ ವ್ಯವಸ್ಥೆ ಯನ್ನು ಕರ್ತಮಾಡ ಮಲ್ಲಿಗೆ ಹಾಗೂ ಕುಟುಂಬದವರು ತಮ್ಮ ಪತಿ ದಿ. ಕರ್ತಮಾಡ ಗಿಣಿ ಭೀಮಯ್ಯ ಅವರ ಜ್ಞಾಪಕಾರ್ಥವಾಗಿ ನೀಡಿದರು. ಬೆಳಿಗ್ಗೆ ೧೦.೩೦ ರಿಂದ ೧ ಗಂಟೆಯವರೆಗೆ ಕ್ರೀಡಾಕೂಟಗಳು ನಡೆದವು.
ಅಪರಾಹ್ನ ೨ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ಯನ್ನು ಅಣ್ಣಳಮಾಡ ಮೋನೆ ಚಿಣ್ಣಪ್ಪ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿದಾನಿಗಳಾದ ಮರೆನಾಡು ಪುತ್ತು ಭಗವತಿ ದೇವಾಲಯದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು, ಎಸ್.ಡಿ.ಎಂ.ಸಿ. ಸದಸ್ಯರು, ನೆರೆಹೊರೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿ ವೃಂದ, ಸಿಆರ್ಪಿ ಅನಿತಾಕುಮಾರಿ, ಊರಿ ನವರು ಪಾಲ್ಗೊಂಡು ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.
ಮುಖ್ಯ ಶಿಕ್ಷಕಿ ಸರಸ್ವತಿ ಬಿ.ಬಿ. ಸ್ವಾಗತಿಸಿ, ವರದಿ ವಾಚಿಸಿದರು. ಶ್ವೇತ ಪೂಜಾ ಅವರು ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿ ಕೊಟ್ಟರು. ಅಮಿತ ಪಿ.ಬಿ. ವಂದಿಸಿ ದರು. ಅನಿಸ್ ಫಾತಿಮಾ ಅವರು ಕಾರ್ಯಕ್ರಮ ನಿರೂಪಿಸಿದರು.