ಬೆಂಗಳೂರು: ರಾಮ ಮಂದಿರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು.

ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ದೇವಾ ಲಯವನ್ನು ನಿರ್ಮಿಸಿದ್ದು, ಇಂದು ಸಕುಟುಂಬ ಸಮೇತರಾಗಿ ಮುಖ್ಯ ಮಂತ್ರಿ ಸೀತಾರಾಮ ಲಕ್ಷö್ಮಣ ದೇವಾಲಯ ಹಾಗೂ ೩೩ ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡರು. ದೇವಾಲಯ ಉದ್ಘಾಟನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗಾಂಧೀಜಿ ಪ್ರಾಣ ಬಿಡುವಾಗಲೂ ಹೇ ರಾಮ್ ಎಂದು ಪ್ರಾಣ ಬಿಟ್ಟರು. ನಾವು ಗಾಂಧಿಜಿಯವರ ರಾಮನನ್ನು ಪೂಜಿಸುತ್ತೇವೆ. ಬಿಜೆಪಿಯ ರಾಮನನ್ನು ಪೂಜಿಸಲ್ಲ. ನಾವೆಲ್ಲ ರಾಮನ ಭಕ್ತರೆ, ಆದರೆ, ಬಿಜೆಪಿಯವರು ಹೇಳುವಂತೆ ಅಲ್ಲ. ಅಯೋಧ್ಯೆಗೆ ಹೋಗುತ್ತೇವೆ ಎಂದು ಹೇಳಿದರು. ಈ ದೇವಾಲಯ ರಾಜಕಾರಣಕ್ಕೊಸ್ಕರ ಮಾಡಿಲ್ಲ, ರಾಜ್ಯದಲ್ಲಿ ಬಹಳಷ್ಟು ರಾಮನ ದೇವಾಲಯ ಇದೆ. ನಾನು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ನಾನೂ ಅಯೋಧ್ಯೆಗೇ ಹೋಗುತ್ತೇನೆ. ಆದರೆ, ಎಲ್ಲಾ ಕಡೆ ರಾಮನ ಮೂರ್ತಿ ಒಂದೇ ಅಲ್ವಾ? ಅಯೋಧ್ಯೆಯಲ್ಲಿ ಪೂಜೆ ಮಾಡಿದರು ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರು ಒಂದೆ ಎಂದು ತಿಳಿಸಿದರು. ಅಯೋಧ್ಯೆಯ ದೇಗುಲದಲ್ಲಿ ಶ್ರೀರಾಮನ ಏಕೈಕ ವಿಗ್ರಹವನ್ನು ಸ್ಥಾಪಿಸುವ ಮೂಲಕ ಬಿಜೆಪಿಯು ರಾಮನನ್ನು ಲಕ್ಷö್ಮಣ, ಸೀತೆ ಮತ್ತು ಆಂಜನೇಯರಿAದ ಬೇರ್ಪಡಿಸಿದೆ ಎಂದು ಸಿದ್ದರಾಮಯ್ಯ ದೂರಿದರು. ಲಕ್ಷö್ಮಣ, ಸೀತೆ, ಆಂಜನೇಯ ಇಲ್ಲದೇ ರಾಮ ಪೂರ್ಣವಾಗಲು ಸಾಧ್ಯವಿಲ್ಲ, ಬಿಜೆಪಿರಾಮನನ್ನು ಬೇರ್ಪಡಿಸುತ್ತಿದೆ. ಇದು ಸರಿಯಲ್ಲ ಎಂದರು.

ಸAಸದ ಪ್ರತಾಪ್ ಸಿಂಹಗೆ ಘೇರಾವ್

ಸಂಸದ ಪ್ರತಾಪ್ ಸಿಂಹ ಅವರಿಗೆ ದಲಿತ ಸಮುದಾಯದ ರಾಮಭಕ್ತರು ಘೇರಾವ್ ಹಾಕಿರುವ ಘಟನೆ ಸೋಮವಾರ ಮೈಸೂರಿನಲ್ಲಿ ನಡೆದಿದೆ. ರಾಮಲಲ್ಲಾ ವಿಗ್ರಹ ಕೆತ್ತನೆಗೆ ಕಲ್ಲು ತೆಗೆದ ಸ್ಥಳದಲ್ಲಿ ಹಾರೋಹಳ್ಳಿ ಮತ್ತು ಗುಜ್ಜೇಗೌಡನಪುರ ಗ್ರಾಮಸ್ಥರು ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ವಿರೋಧಿ ಘೋಷಣೆ ಕೂಗಿ ಘೇರಾವ್ ಹಾಕಲಾಯಿತು.

ಇದರಿಂದ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಥಳದಲ್ಲಿಯೇ ಇದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ರಾಮಲಲ್ಲಾ ಮೂರ್ತಿಗೆ ಕಲ್ಲು ಕೊಟ್ಟ ದಲಿತ ರೈತನಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ ಎಂಬುದು ಇವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ವಿವಾದಿತ ಜಾಗದಲ್ಲಿ ರಾಮನ ಫೋಟೋಗೆ

ಪೂಜೆ: ಐವರು ಪೊಲೀಸ್ ವಶಕ್ಕೆ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆದಿದ್ದು ಅದೇ ಸಮಯದಲ್ಲಿ ಹಾವೇರಿಯ ವಿವಾದಿತ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿದ್ದು ಈ ಸಂಬAಧ ಐವರನ್ನು ಬಂಧಿಸಲಾಗಿದೆ. ಹಾವೇರಿಯ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ವಿವಾದಿತ ಜಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಲಾಗಿದ್ದು ಈ ಸಂಬAಧ ಗಂಗಾಧರ್ ಶೆಟ್ಟರ್, ಸೋಮಶೇಖರ್ ಗೌರಿಮಠ, ಈರಣ್ಣ ಬಳೇಗಾರ, ಮೋಹನ್ ಮೀರಜಕರ್ ಸೇರಿ ಐವರನ್ನು ಬಂಕಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಹಾವೇರಿ ಎಸ್.ಪಿ ಅಂಶುಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಳಿಕ ಶ್ರೀರಾಮನ ಭಾವಚಿತ್ರವನ್ನು ತೆಗೆಸಿದ್ದಾರೆ. ಹಿಂದೂಗಳು ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗದಲ್ಲಿ ಸುಮಾರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತಿತ್ತು. ಆದರೆ ಈ ಜಾಗ ನಮ್ಮದು ಎಂದು ಮುಸ್ಲಿಂ ಸಮುದಾಯದವರು ತಕರಾರು ತೆಗೆದಿದ್ದರು. ಹಾಗಾಗಿ ಬಂಕಾಪುರ ಬಸ್ ನಿಲ್ದಾಣದ ಸಮೀಪ ಇರುವ ಜಾಗ ವಿವಾದಿತ ಜಾಗವಾಗಿದೆ. ಸದ್ಯ ಈ ಕುರಿತಾಗಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; ಇಬ್ಬರ ಸಾವು, ಎಂಟು ಮಂದಿ ಅಸ್ವಸ್ಥ!

ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಪ್ರಸನ್ನ ಪ್ರಿ-ಪ್ರೊಸೆಸಿಂಗ್ ಲಿಮಿಟೆಡ್ ಕಂಪನಿಯಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಳೆದ ರಾತ್ರಿ ೯ ಗಂಟೆ ಸುಮಾರಿಗೆ ವಿಷಾನಿಲ ಸೋರಿಕೆಯಾಗಿದ್ದು ಹುಮನಾಬಾದ್ ತಾಲೂಕಿನ ವಡ್ಡನಕೇರಾ ಗ್ರಾಮದ ಮೊಹಮ್ಮದ್ ಶಾಬಾದ್ (೨೧) ಮತ್ತು ಮಧ್ಯಪ್ರದೇಶದ ಇಂದ್ರಜೀತ್ (೨೫) ಮೃತಪಟ್ಟಿದ್ದಾರೆ. ಶ್ರೀ ಪ್ರಸನ್ನ ಪ್ರಿ-ಪ್ರೊಸೆಸಿಂಗ್ ಲಿಮಿಟೆಡ್ ಕಂಪನಿಯಲ್ಲಿ ಕೈಗಾರಿಕಾ ರಾಸಾಯನಿಕ ತ್ಯಾಜ್ಯವನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತದೆ. ಕಳೆದ ರಾತ್ರಿ ಯುವಕರು ಕಾರ್ಖಾನೆ ಪ್ರದೇಶದ ಗೋಡೌನ್ನಲ್ಲಿ ಕೈಗಾರಿಕೆಗಳಿಂದ ಸಂಗ್ರಹಿಸಲಾದ ರಾಸಾಯನಿಕ ತ್ಯಾಜ್ಯವನ್ನು ಟ್ಯಾಂಕರ್ಗಳಿಗೆ ಲೋಡ್ ಮತ್ತು ಅನ್ಲೋಡ್ ಮಾಡುತ್ತಿದ್ದರು. ಈ ವೇಳೆ ವಿಷಾನಿಲ ಸೋರಿಕೆಯಾಗಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ತಿಳಿಸಿದ್ದಾರೆ.

ಅಯೋಧ್ಯೆ ಪರ ವಾಹನ ರ‍್ಯಾಲಿ

ಮೇಲೆ ದಾಳಿ; ೧೩ ಮಂದಿ ಬಂಧನ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಮುನ್ನಾದಿನ ಮುಂಬೈಗೆ ಹೊಂದಿಕೊAಡಿರುವ ಮೀರಾ ಭಾಯಂದರ್ ಪ್ರದೇಶದಲ್ಲಿ ವಾಹನ ರ‍್ಯಾಲಿ ನಡೆಸುತ್ತಿದ್ದ ಜನರ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ೧೩ ಜನರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟç ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೋಮವಾರ ಹೇಳಿದ್ದಾರೆ.

ಭಾನುವಾರ ರಾತ್ರಿ ೧೦.೩೦ ರ ಸುಮಾರಿಗೆ ನಯಾ ನಗರ ಪ್ರದೇಶದಲ್ಲಿ ವಾಹನ ರ‍್ಯಾಲಿ ನಡೆಸುತ್ತಿದ್ದ ವೇಳೆ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಮೂರು ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ೧೦ ರಿಂದ ೧೨ ಜನ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಿದ್ದರು.

ಆದರೆ, ಕೆಲವರು ಪಟಾಕಿ ಸಿಡಿಸಿದಾಗ ಜನರ ಗುಂಪೊAದು ಮನೆಯಿಂದ ಹೊರಬಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ದೊಣ್ಣೆಗಳಿಂದ ಥಳಿಸಿದ್ದು, ವಾಹನಗಳ ಮೇಲೂ ದಾಳಿ ನಡೆಸಿದ್ದಾರೆ.

ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ದಾಳಿಕೋರರನ್ನು ಚದುರಿಸಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.