ಪ್ರಭು ಶ್ರೀ ರಾಮ ಮತ್ತು ಶ್ರೀಮದ್ ರಾಮಾಯಣ ಯಾರಿಗೂ ಹೊಸತಲ್ಲ ಇದು ಒಂದು ಸಾಗರ. ೨೪,೦೦೦ ಶ್ಲೋಕಗಳನ್ನು ಒಳಗೊಂಡಿರುವ ಈ ಸಾಗರದಲ್ಲಿ ಹಲವಾರು ಮುತ್ತು ರತ್ನಗಳಿವೆ. ಇದರಲ್ಲಿರುವ ಕೆಲವು ರತ್ನಗಳ ಬಗ್ಗೆ ತಿಳಿಯೋಣವೇ?

ನಮ್ಮ ದೇಶದಲ್ಲಿ ಅಷ್ಟೇ ಅಲ್ಲ ಪ್ರಪಂಚದ ಹಲವಾರು ರಾಷ್ಟç ಸಂಸ್ಕೃತಿಯ ಭಾಗವಾಗಿದೆ ರಾಮಾಯಣ. ಇಂಡೋನೇಷಿಯಾ ಒಂದು ಇಸ್ಲಾಮಿಕ್ ರಾಷ್ಟ್ರವಾದರೂ ಅದರ ಕಲೆ ನೃತ್ಯ ರೂಪಕಗಳು ಸಂಗೀತ ಮೊದಲಾದವುಗಳು ರಾಮನನ್ನು ಒಳಗೊಂಡಿದೆ ಇಲ್ಲಿ ನಡೆಯುವಂತಹ ರಾಮಕಥಾ ತುಂಬಾ ಹೆಸರುವಾಸಿಯಾದಂತದ್ದು ಅದೇ ರೀತಿ ಶ್ರೀಲಂಕಾ ಮಲೇಶಿಯಾ ವಿಯೆಟ್ನಾಂ ಮೊದಲಾದ ದೇಶಗಳಲ್ಲೂ ಕೂಡ ರಾಮಾಯಣ ಪ್ರಚಲಿತದಲ್ಲಿದೆ.

ಭರತ ಖಂಡದಲ್ಲಿ ಹಲವಾರು ಆಚಾರ್ಯರು ರಾಮಾಯಣವನ್ನು ರಚಿಸಿದ್ದಾರೆ ಕನ್ನಡದ ಪಂಪ ರನ್ನ ಕುವೆಂಪು ತಮಿಳಿನ ಕಂಬ ರಾಮಾಯಣ ಮಲಯಾಳದಲ್ಲಿ ಎಳುತಶನ್ ರಾಮಾಯಣ ಹಾಗೂ ಆಧ್ಯಾತ್ಮ ರಾಮಾಯಣ ತುಳಸಿದಾಸರ ರಾಮಚರಿತ ಮಾನಸ ಹೀಗೆ ಹಲವಾರು ಆಚಾರ್ಯರು ರಾಮಾಯಣವನ್ನು ಬರೆದಿದ್ದಾರೆ. ಆದರೆ ಮೂಲ ರಾಮಾಯಣವನ್ನು ರಚಿಸಿದವರು ವಾಲ್ಮೀಕಿ ಮಹರ್ಷಿಗಳು ಹಾಗೂ ಇದು ಭಾರತದ ಆದಿ ಕಾವ್ಯ ಹಾಗೂ ವಾಲ್ಮೀಕಿ ಮಹರ್ಷಿಗಳನ್ನು ಆದಿಕವಿ ಎಂದೇ ಕರೆಯುತ್ತೇವೆ.

ಶ್ರೀ ರಾಮಾಯಣದಲ್ಲಿ ಭಗವಾನ್ ಶ್ರೀ ರಾಮನನ್ನು ಎರಡು ರೀತಿಯಲ್ಲಿ ನೋಡಬಹುದು, ಮೊದಲನೇ ರೀತಿ ಶ್ರೀರಾಮ ಪ್ರಭು ಸಾಕ್ಷಾತ್ ಭಗವಂತನ ಅವತಾರ ಎಂದು ನೋಡುವುದು, ಆಧ್ಯಾತ್ಮ ರಾಮಾಯಣದಲ್ಲಿ ಶ್ರೀರಾಮ ನನ್ನು ಪೂರ್ಣಾವತಾರ ಎಂದುಹೇಳುತ್ತೇವೆ. ಅವತಾರವನ್ನು ನೋಡುವು ದಾದರೆ ಪ್ರಭು ಶ್ರೀರಾಮಚಂದ್ರನದು ಪೂರ್ಣ ಅವತಾರ. ಮತ್ಸö್ಯಕೂರ್ಮ, ವರಹ ಈ ಅವತಾರಗಳು ಇದ್ದದ್ದು ಕೆಲವೇ ನಿಮಿಷಗಳು ಕೆಲವೇ ಕಾಲಗಳು.

ಎರಡನೇ ರೀತಿಯಲ್ಲಿ ಶ್ರೀ ರಾಮನನ್ನು ನೋಡುವುದಾದರೆ ರಾಮನನ್ನು ಮರ್ಯಾದ ಪುರುಷೋತ್ತಮ ಎಂದು ನೋಡುತ್ತೇವೆ. ವಾಲ್ಮೀಕಿ ರಾಮಾಯಣದಲ್ಲಿ ಭಗವಾನ್ ರಾಮಚಂದ್ರರು ಮರ್ಯಾದ ಪುರುಷೋತ್ತಮನು.

ದೃಢ ವೃತಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿದ್ದರು. ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋದರು. ವನವಾಸದಲ್ಲಿರುವಾಗ ಸ್ವತಃ ಮಾತೆ ಕೈಕೇಯಿ ಹೋಗಿ ರಾಮನನ್ನು ಬಾ ಮಗನೇ ಎಂದು ಕರೆದರೂ ಬರಲಿಲ್ಲ. ಭರತ ಕರೆದರೂ ಬರಲಿಲ್ಲ. ರಾಜ್ಯ ನೀಡುತ್ತೇನೆ ಎಂದರೂ ಬರಲಿಲ್ಲ ಸ್ವತಃ ಗುರುಗಳಾದ ವಸಿಷ್ಠ ಮಹರ್ಷಿಗಳು ಕರೆದರೂ ಬರಲಿಲ್ಲ. ನಮಗೂ ರಾಮನಂತ ಸತ್ಯ ವಾಕ್ಯ ಹಾಗೂ ದೃಢಚಿತ್ತ ಬರಲಿ ಎಂದು ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಯ ಈ ಸಮಯದಲ್ಲಿ ಪ್ರಾರ್ಥಿಸೋಣ ಚಂಚಲ ಚಿತ್ತರಾಗದೆ ನಮ್ಮ ಗುರಿಯತ್ತ ಸಾಗೋಣ.

ಆತ್ಮವಾನ್: ಭಗವಾನ್ ಶ್ರೀ ರಾಮನರು ಆತ್ಮ ಸಾಕ್ಷಾತ್ಕಾರ ಹೊಂದಿದAತವರು.

ವಿದ್ವಾನ : ಪ್ರಭು ಶ್ರೀ ರಾಮಚಂದ್ರರು ವೇದಗಳು ಉಪನಿಷತ್ತುಗಳು ಎಲ್ಲವನ್ನು ಬಲ್ಲವರು ಆದರೂ ವಿದ್ಯಾ ವಿನಯ ಸಂಪನ್ನರಾಗಿ ಇದ್ದರು.

ಸರ್ವ ಭೂತೇಷು ಕೋ ಹಿತ : ಎಲ್ಲರಲ್ಲೂ ಹಿತವನ್ನು ಬಯಸುವುದು ಪ್ರಭು ಶ್ರೀರಾಮಚಂದ್ರನ ಸಹಜ ಗುಣ ಅಂದರೆ ಮಮಾತ್ಮಾ ಸರ್ವ ಭೂತಾತ್ಮ ಎಂಬ ಭಾವ ಅಂದರೆ ಹನುಮಾನರಲ್ಲಿ ವಿಶೇಷ ಪ್ರೀತಿ. ಅದೇ ರೀತಿ ಸುಗ್ರೀವ, ಸುಧಾಮ ಜಟಾಯು, ಪಕ್ಷಿಯಾದ ಜಟಾಯು ಕೂಡ ಶ್ರೀರಾಮ ಪ್ರಭುವಿಗೆ ಗೆಳೆಯನೇ ಹಾಗೆ ನಿಶಾಧರಾಜನಾದ ಗುಹ ಕೂಡ. ಬೇಟೆಗಾರ ಗುಹನೆಲ್ಲಿ ? ಅಯೋದ್ಯಾಧಿಪತಿರಾಜ ರಾಮನೆಲ್ಲಿ ? ರಾವಣನ ಅಂತ್ಯ ಸಂಸ್ಕಾರವನ್ನು ಗೌರವಪೂರ್ವಕವಾಗಿ ನಿರ್ವಹಿಸಿದ ರಾಮ ನಿಜಕ್ಕೂ ಆದರ್ಶಪ್ರಾಯ.

ವಾಲ್ಮೀಕಿ ಮಹರ್ಷಿಯು ಶ್ರೀ ರಾಮನನ್ನು ಮರ್ಯಾದ ಪುರುಷೋತ್ತಮ ರಾಮನೆಂದು ಕರೆಯುತ್ತಾರೆ ನಮಗೂ ನಮ್ಮ ಜೀವನದಲ್ಲಿ ಪ್ರಭು ಶ್ರೀ ರಾಮನ ಈ ಎಲ್ಲ ಗುಣಗಳನ್ನು ಅಳವಡಿಸಿಕೊಳ್ಳಲಾಗದಿದ್ದರೂ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಯ ಈ ಸುಸಂದರ್ಭದಲ್ಲಿ ಕೆಲವು ಗುಣಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳವ ಪ್ರಯತ್ನ ಹಾಗೂ ಸಂಕಲ್ಪ ಮಾಡೋಣ.

-ಅನಿತಾ ಸುಧಾಕರ್,

ಮಡಿಕೇರಿ.