ಕಣಿವೆ, ಜ. ೨೧: ಇಲ್ಲಿನ ರಾಷ್ಟಿçÃಯ ಹೆದ್ದಾರಿಯ ಗುಡ್ಡೆಹೊ ಸೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವನ್ನು ಲೋಕಾರ್ಪಣೆಗೊಳಿಸಲಾಯಿತು.
ಶ್ರೀಗಳ ಐದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನವೀಕರಿಸಿದ ವೃತ್ತದಲ್ಲಿ ಶ್ರೀಗಳ ಮುಖವನ್ನು ತಿದ್ದಿದ ಕಲಾಕೃತಿಯನ್ನು ಅಲಂಕರಿಸಿ ಪೂಜಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಿದ್ದಗಂಗಾ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್. ಮೂರ್ತಿ, ೨೦೧೭ ರಲ್ಲಿ ಶ್ರೀಗಳು ದೈವಾಧೀನರಾದ ಕೆಲ ದಿನಗಳಲ್ಲಿ ಶ್ರೀಗಳ ಹೆಸರನ್ನು ಕುಶಾಲನಗರ ಭಾಗದಲ್ಲಿ ಚಿರಸ್ಥಾಯಿಯಾಗಿಸಬೇಕೆಂಬ ಹಂಬಲದಿAದ ಸ್ಥಳೀಯ ಗ್ರಾಮ ಪಂಚಾಯಿತಿಯ ಆಗಿನ ಆಡಳಿತ ಮಂಡಳಿ ಸಹಕರಿಸಿದ್ದರಿಂದ ಇಂದು ಶ್ರೀಗಳ ವೃತ್ತವಾಗಲು ಸಾಧ್ಯವಾಗಿದೆ ಎಂದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ವಿ. ಶಿವಪ್ಪ, ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರು ಇದ್ದರು. ಮಧ್ಯಾಹ್ನದ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮದ ಬಳಿಕ ಸಾರ್ವ ಜನಿಕವಾಗಿ ದಾಸೋಹ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.