ಮುಳ್ಳೂರು, ಜ. ೨೧: ಸ್ಥಳೀಯ ಗ್ರಾ.ಪಂ.ಯ ಮಕ್ಕಳ ಗ್ರಾಮಸಭೆ ಶುಕ್ರವಾರ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿನಿ ದೀಪಿಕಾ ಅಧ್ಯಕ್ಷತೆಯಲ್ಲಿ ನಡೆಯಿತು. ಮಕ್ಕಳ ಗ್ರಾಮಸಭೆಯಲ್ಲಿ ಶನಿವಾರಸಂತೆಗೆ ಒಳಪಟ್ಟ ವಿವಿಧ ಸರಕಾರಿ ಶಾಲೆಗಳಿಂದ ಮಕ್ಕಳು ಪಾಲ್ಗೊಂಡಿದ್ದರು. ಆದರೆ ೧೦ ಮಂದಿ ಸದಸ್ಯರನ್ನು ಒಳಗೊಂಡಿರುವ ಸದರಿ ಗ್ರಾ.ಪಂ.ಯ ಅಧ್ಯಕ್ಷೆ ಗೀತಾ ಹರೀಶ್, ಸದಸ್ಯ ಎಸ್.ಸಿ.ಶರತ್ಶೇಖರ್ ಮತ್ತು ಕೆ.ಎ.ಆದಿತ್ಯ ಗೌಡ ಇವರುಗಳನ್ನು ಹೊರತುಪಡಿಸಿದಂತೆ ೭ ಮಂದಿ ಸದಸ್ಯರು ಗೈರು ಹಾಜರಾಗಿದ್ದರು.
ಸಭೆಯಲ್ಲಿ ಮಕ್ಕಳಿಂದ ಪ್ರಶ್ನೆಗಳ ಸುರಿಮಳೆ
ಸಭೆಯಲ್ಲಿ ಶನಿವಾರಸಂತೆ ಸರಕಾರಿ ಶಾಲೆಯ ವಿದ್ಯಾರ್ಥಿನಿ ಆಯಿಷಾ ‘ನಮ್ಮ ಶಾಲೆಯಲ್ಲಿ ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆ ಇದ್ದರೂ ಒಂದೇ ಶೌಚಾಲಯ ಇರುವುದ್ದರಿಂದ ನಾವು ಶೌಚಾಲಯಕ್ಕೆ ಹೋಗಲು ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕಾಗುತ್ತದೆ ಹೆಚ್ಚುವರಿ ಶೌಚಾಲಯವನ್ನು ನಿರ್ಮಿಸಿಕೊಡಿ’ ಎಂದು ಮನವಿ ಮಾಡಿದಳು. ಇದಕ್ಕೆ ಉತ್ತರಿಸಿದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ವಹಿಸಿದ ದೀಪಿಕಾ ಈ ಕುರಿತು ನಾನು ಗ್ರಾ.ಪಂ.ಅಧ್ಯಕ್ಷರ ಗಮನಕ್ಕೆ ತರುವ ಮೂಲಕ ಶಿಫಾರಸು ಮಾಡುತ್ತೇನೆ ಎಂದರು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಲ್ಪಿಯಾ ಪ್ರಶ್ನೆ ಮಾಡಿ ನಮ್ಮ ಶಾಲೆ ಸೇರಿದಂತೆ ಪಕ್ಕದಲ್ಲಿ ಉರ್ದು ಶಾಲೆ ಮತ್ತು ಆಸ್ಪತ್ರೆ ಸಹ ಇರುತ್ತದೆ. ಆದರೆ ಇಲ್ಲಿ ಪಟ್ಟಣದ ಕಸವಿಲೇವಾರಿ ಮಾಡುತ್ತಿರುವುದ್ದರಿಂದ ಶಾಲೆ ಸುತ್ತಮುತ್ತ ಪ್ರದೇಶದಲ್ಲಿ ದುರ್ನಾತ ಬೀರುತ್ತಿರುವುದರ ಜೊತೆಯಲ್ಲಿ ನಮಗೆ ತರಗತಿಯಲ್ಲಿ ಪಾಠ ಕೇಳಲು ಸಮಸ್ಯೆಯಾಗುತ್ತಿದೆ; ಇಲ್ಲಿ ಕಸವಿಲೇವಾರಿ ಮಾಡುವುದನ್ನು ತೆರವುಗೊಳಿಸುವಂತೆ ಮನವಿ ಮಾಡಿದಳು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದೀಪಿಕಾ ಇದೊಂದು ಗಂಭೀರ ಸಮಸ್ಯೆಯಾಗಿದ್ದು ಸದರಿ ಗ್ರಾ.ಪಂ.ಯವರು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದಳು.
ತ್ಯಾಗರಾಜ ಕಾಲೋನಿ ಶಾಲೆಯ ವಿದ್ಯಾರ್ಥಿ ನಯನ ರಾತ್ರಿ ಸಮಯದಲ್ಲಿ ನಮ್ಮ ಶಾಲಾ ಆವರಣದೊಳಗೆ ಅಕ್ರಮವಾಗಿ ಪ್ರವೇಶ ಮಾಡುವ ಜನರು ಶಾಲಾ ಕೊಠಡಿ ಕಿಟಿಕಿ ಬಾಗಿಲಿನ ಗಾಜುಗಳನ್ನು ಒಡೆದು ಹಾಕುತ್ತಾರೆ. ಶಾಲಾ ಅವರಣದಲ್ಲಿ ತಂಬಾಕು ಮತ್ತು ವಸ್ತುಗಳನ್ನು ಬಿಸಾಡುತ್ತಾರೆ ಶಾಲಾ ಆವರಣವನ್ನು ಗಲೀಜು ಮಾಡುತ್ತಾರೆ ನಮ್ಮ ಶಾಲೆಗೆ ಸಿ.ಸಿ.ಕ್ಯಾಮರದ ಜೊತೆಗೆ ಭದ್ರತೆಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದಳು. ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಅಮಿತ್ ಪ್ರಶ್ನೆ ಮಾಡಿ-ಸರಕಾರದಿಂದ ಗ್ರಾ.ಪಂ.ಗೆ ಬರುವ ಅನುದಾನದಲ್ಲಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಶೇಕಡಾ ಎಷ್ಟರಷ್ಟು ಮೀಸಲಿದೆ ಇದರ ಬಗ್ಗೆ ಗ್ರಾ.ಪಂ.ಯವರು ಮಾಹಿತಿ ಕೊಡಿ ಎಂದು ಮನವಿ ಮಾಡಿದರು. ನಮ್ಮ ಶಾಲೆಗೆ ಸರಿಯಾದ ತೆಡೆಗೋಡೆ ಇಲ್ಲದಿರುವುದ್ದರಿಂದ ಜಾನುವಾರುಗಳು ಶಾಲಾ ಆವರಣದಲ್ಲಿ ಬೆಳೆದ ಗಿಡ, ಹೂವಿನ ಗಿಡಗಳನ್ನು ನಾಶ ಮಾಡುತ್ತಿವೆ; ಈ ಬಗ್ಗೆ ಶಾಲೆಯಿಂದ ಗ್ರಾ.ಪಂ.ಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಇನ್ನಾದರೂ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಗ್ರಾ.ಪಂ.ಯವರಿಗೆ ವಿದ್ಯಾರ್ಥಿನಿ ಯೊಬ್ಬಳು ಮನವಿ ಮಾಡಿದಳು.
ಗ್ರಾ.ಪಂ.ಅಧ್ಯಕ್ಷೆ ಗೀತ ಹರೀಶ್ ಮಾತನಾಡಿ-ಮಕ್ಕಳ ಮೂಲಭೂತ ಸಮಸ್ಯೆ ಸೇರಿದಂತೆ ಶಾಲೆಯಲ್ಲಿ ಕಲಿಕೆಗೆ ಸಂಬAಧಿಸಿದ ಸಮಸ್ಯೆ, ಸೇವೆ ಸವಲತ್ತುಗಳ ಕೊರತೆ ಮುಂತಾ ದವುಗಳ ಕುಂದು ಕೊರತೆಗೆ ಗ್ರಾ.ಪಂ. ಮಟ್ಟದಲ್ಲಿ ಪರಿಹಾರ ನೀಡ ಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಗ್ರಾಮಸಭೆಯನ್ನು ನಡೆಸಲಾಗುತ್ತದೆ ಎಂದರು.
ಗ್ರಾ.ಪA.ಸದಸ್ಯ ಎಸ್.ಸಿ.ಶರತ್ ಶೇಖರ್, ಆದಿತ್ಯ ಗೌಡ ಮಾತನಾಡಿ ದರು. ಪಿಡಿಓ ಹರೀಶ್ ಮಕ್ಕಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿವಿಧ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ್, ಪುಟ್ಟಸ್ವಾಮಿ, ಶಾಲಾ ವಿದ್ಯಾರ್ಥಿ ಪ್ರಮುಖರು, ಗ್ರಾ.ಪಂ. ಕಾರ್ಯ ದರ್ಶಿ ದೇವರಾಜ್, ಶಾಲೆಯ ಶಿಕ್ಷಕರು ಹಾಜರಿದ್ದರು. -ಭಾಸ್ಕರ್ ಮುಳ್ಳೂರು