ಮಡಿಕೇರಿ, ಜ. ೨೧: ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಮಂಜಿನ ನಗರಿ ಮಡಿಕೇರಿ ಇಂದು ಸಹಕಾರಿಗಳ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ಮೂಲೆ ಮೂಲೆಗಳಿಂದ ಸಹಕಾರಿ ಕ್ಷೇತ್ರದಲ್ಲಿ ದುಡಿದವರು, ಇಂದಿಗೂ ದುಡಿಯುತ್ತಿರುವರು ಆಗಮಿಸಿ ಕಳೆ ತಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶತಮಾನೋತ್ಸವ ಸವಿನೆನಪಿನಲ್ಲಿ ನಿರ್ಮಿಸಿದ ‘ಉನ್ನತಿ ಭವನ' ಉದ್ಘಾಟನೆ ಅದ್ಧೂರಿಯಾಗಿ ನಡೆದು ನಂತರ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡರು.

ಉನ್ನತಿ ಭವನ ಉದ್ಘಾಟನೆ

ನಗರದ ರಾಜಾಸೀಟ್ ರಸ್ತೆಯಲ್ಲಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಉನ್ನತಿ ಭವನವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.

ಕಾವೇರಿ ಪ್ರತಿಮೆಯನ್ನು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಭದ್ರತಾ ಕೊಠಡಿಯನ್ನು ಸಂಸದ ಪ್ರತಾಪ್ ಸಿಂಹ, ಆಡಳಿತ ಮಂಡಳಿ ಸಭಾಂಗಣವನ್ನು ಮಾಜಿ ಸಚಿವ ಯಂ.ಸಿ. ನಾಣಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್, ಪಂದ್ಯAಡ ಬೆಳ್ಯಪ್ಪ ಸ್ಮರಣಾರ್ಥ ಸಭಾಂಗಣವನ್ನು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ಸಹಸ್ರ ಸಂಖ್ಯೆಯ ಸಹಕಾರಿಗಳು

ಜಿಲ್ಲೆಯ ವಿವಿಧೆಡೆಗಳ ೨೪೯ ಸಹಕಾರ ಸಂಘಗಳ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಸಹಸ್ರ ಸಂಖ್ಯೆಯ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರುಗು ತಂದರು.

ಉನ್ನತಿ ಭವನದ ವೈಭವ ಕಣ್ತುಂಬಿಕೊAಡು, ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಾಜರಾದರು. ಸುಮಾರು ೪ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅತಿಥಿಗಳನ್ನು ಬ್ಯಾಂಕ್ ಆವರಣದಿಂದ ಗಾಂಧಿ ಮೈದಾನ ತನಕ ಚಂಡೆ- ವಾದ್ಯದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬ್ಯಾಂಕ್ ಸಿಬ್ಬಂದಿಗಳು ವೇದಿಕೆಯ ಪ್ರವೇಶ ದ್ವಾರದಿಂದ ವೇದಿಕೆ ತನಕ ನಿಂತು ಆಗಮಿಸುವವರನ್ನು ಸ್ವಾಗತಿಸಿದರು.

ಬೃಹತ್ ಎಲ್.ಇ.ಡಿ. ಪರದೆಗಳು, ೪ ಸಾವಿರ ಆಸನ, ಬಂದ ಎಲ್ಲರಿಗೂ ಕುಡಿಯಲು ನೀರಿನ ಬಾಟಲ್ ನೀಡಲಾಯಿತು. ಮಧ್ಯಾಹ್ನ ಮಾಂಸಹಾರಿಗಳಿಗೆ ಕೊಡವ ಸಮಾಜ, ಸಸ್ಯಾಹಾರಿಗಳಿಗೆ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ರಾಜಕೀಯ ನುಸುಳಬಾರದು

ಗಣ್ಯರ ಅಭಿಮತ

ಸಹಕಾರ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ನುಸು¼ Àಬಾರದು ಎಂಬ ಸಂದೇಶವನ್ನು ಗಾಂಧಿ ಮೈದಾನದಲ್ಲಿ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ನೀಡಿದರು.

ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮಾತನಾಡಿ, ಬ್ಯಾಂಕ್ ಅಭ್ಯುದಯದ ಹಿಂದೆ ಅನೇಕರ ಶ್ರಮವಿದೆ. ಸ್ಥಾಪಕಾಧ್ಯಕ್ಷರನ್ನು ಸ್ಮರಿಸಿ ಪ್ರತಿಮೆ ನಿರ್ಮಿಸಿರುವುದು ಶ್ಲಾಘನೀಯ. ಸಹಕಾರಿ ಸಂಘದ ವ್ಯವಸ್ಥೆಯಲ್ಲಿ ರಾಜಕೀಯ ದೂರವಿರಬೇಕು. ರಾಜಕಾರಣಿಗಳ ಹಸ್ತಕ್ಷೇಪವಿರಬಾರದು. ಕೊಡಗಿನ ಸಹಕಾರಿ ಕ್ಷೇತ್ರ ರಾಜ್ಯ ಮಟ್ಟದಲ್ಲಿ ಮಾನ್ಯತೆ ಗಳಿಸಿದೆ. ರೈತರಿಗೆ, ಠೇವಣಿದಾರರಿಗೆ ಆರ್ಥಿಕ ಭದ್ರತೆ ನೀಡಬೇಕು. ಹಲವು ಸಹಕಾರಿಗಳ ಶ್ರಮದಿಂದ ಬ್ಯಾಂಕ್ ಈ ಮಟ್ಟಕ್ಕೆ ಬೆಳೆÀದಿದೆ. ಇವರನ್ನು ಎಂದಿಗೂ ಮರೆಯಬಾರದು. ಸುಳ್ಳು ಆರೋಪಗಳಿಗೆ ತಲೆಕೆಡಿಸಿಕೊಳ್ಳದೆ ಮುನ್ನಡೆಯಬೇಕು. ಸಹಕಾರಿ ಕ್ಷೇತ್ರ ಪ್ರಜಾಪ್ರಭುತ್ವದ ಮೊದಲ ಮೆಟ್ಟಿಲು. ಇದನ್ನು ರಕ್ಷಿಸುವ ಕೆಲಸ ಆಗಬೇಕು. ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕ ಸೇವೆ ಇರಬೇಕು. ಕೊಡಗಿನ ಸಹಕಾರಿ ಸಂಘಗಳು ಇದರಲ್ಲಿ ಮಾದರಿ ಆಗಿವೆ. ಸಹಕಾರಿ ಕ್ಷೇತ್ರಕ್ಕೆ ಯಂ.ಸಿ. ನಾಣಯ್ಯ ಅವರ ಕೊಡುಗೆ ಮರೆಯುವಂತಿಲ್ಲ. ಸರ್ಕಾರಗಳು ಮಾಡದ ಕೆಲಸ ಸಹಕಾರಿ ಸಂಘಟನೆಗಳಿAದ ಆಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸವಾಲಿನ ನಡುವೆ ನಿತ್ಯ ಕೆಲಸ ಮಾಡಬೇಕಾಗಿದೆ. ಅಧ್ಯಕ್ಷ ಬಾಂಡ್ ಗಣಪತಿ ಅವರು ಅವಿರತ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಮುಂದೆಯೂ ಸದಸ್ಯರ ಆಶೀರ್ವಾದ ಅವರಿಗೆ ದೊರೆಯುತ್ತದೆ ಎಂಬ ವಿಶ್ವಾಸ ಇದೆ. ರಾಷ್ಟಿçÃಕೃತ ಬ್ಯಾಂಕ್‌ಗಳು ಹಣ ವಹಿವಾಟಿಗೆ ಕೆಲಸ ಮಾಡುತ್ತವೆ. ಸಣ್ಣ ಸಣ್ಣ ಸಹಕಾರ ಸಂಘಗಳು ಜನರ ಆರ್ಥಿಕ ಅಭಿವೃದ್ಧಿಯ ಸದಾಶಯದಿಂದ ಕೆಲಸ ಮಾಡುತ್ತಿವೆ. ಅಧ್ಯಕ್ಷರು, ಆಡಳಿತ ಮಂಡಳಿ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸದಸ್ಯರು ಜನರ- ಬ್ಯಾಂಕಿನ ನಡುವೆ ಸೇತುವೆಯಾಗಿ ನಿಂತಿದ್ದಾರೆ. ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ಸ್ಥಳೀಯ ಭಾಷೆ ಬಾರದವರು, ನಕರಾತ್ಮಕವಾಗಿ ಸ್ಪಂದಿಸುವವರು ಹೆಚ್ಚಾದ ಪರಿಣಾಮ ಬ್ಯಾಂಕ್‌ಗೆ ಹೋಗಲು ಹೆದರುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ರಾಷ್ಟಿçÃಕೃತ ಬ್ಯಾಂಕ್‌ಗಳ ಅಸಹಕಾರದ ನಡುವೆ ಜನರ ಆತ್ಮೀಯತೆ ಗಳಿಸಿಕೊಳ್ಳಲು ಸಹಕಾರ ಸಂಘಗಳಿಗೆ ವಿಪುಲ ಅವಕಾಶಗಳಿವೆ ಎಂದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ದೀರ್ಘ ಇತಿಹಾಸ ಹೊಂದಿರುವ ಕೆಡಿಸಿಸಿ ಬ್ಯಾಂಕ್ ಶತಮಾನೋತ್ಸವದ ಆಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಯೋಜಿಸಿದೆ. ಬ್ಯಾಂಕ್ ಇದೇ ರೀತಿ ಪ್ರಗತಿ ಪಥದಲ್ಲಿ ಸಾಗಲಿ. ಆರ್ಥಿಕ ಸಹಾಯಕ್ಕೆ ಸಹಕಾರ ಸಂಘಗಳು ಪೂರಕವಾಗಿದ್ದು, ಇಲ್ಲಿ ರಾಜಕಾರಣ ಇರಬಾರದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರ ಬ್ಯಾಂಕ್‌ನಲ್ಲಿಯೂ ಆಧುನೀಕರಣಕ್ಕೂ ಒತ್ತು ನೀಡಬೇಕು. ರಾಜ್ಯದಲ್ಲಿಯೇ ಮೊದಲ ಸಹಕಾರ ಸಂಘ ಜಿಲ್ಲೆಯ ಶಾಂತಳ್ಳಿಯಲ್ಲಿ ಪ್ರಾರಂಭವಾಗಿರುವುದು ಹೆಗ್ಗಳಿಕೆ. ಸರಕಾರ ಮಟ್ಟದಿಂದಾಗುವ ಸಹಾಯ ಮಾಡಲು ತನ್ನ ಸಹಕಾರ ಸದಾ ಇರಲಿದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ಸಹಕಾರಿ ಕ್ಷೇತ್ರಕ್ಕೆ ಅಪಾರ ಶಕ್ತಿ ಇದೆ. ರಾಜಕೀಯ ಚಿತ್ರಣ ಬದಲಿಸುವ ತಾಕತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ, ಜಾತಿ, ಧರ್ಮ ಪ್ರವೇಶಿಸಬಾರದು. ಸರ್ವ ಪಕ್ಷದ ಆಡಳಿತ ಮಂಡಳಿ ರಚನೆಯಾಗಬೇಕು. ಕೇಂದ್ರ ಸರಕಾರದ ಅಡಿಯಲ್ಲಿ ಸಹಕಾರ ಸಂಘಗಳನ್ನು ತರುವ ಕೆಲಸವಾಗುತ್ತಿದೆ. ಇದು ಸರಿಯಲ್ಲ. ಆಯಾ ರಾಜ್ಯ ಸರಕಾರದ ಅಧೀನದಲ್ಲಿಯೇ ಇರಬೇಕು. ಕೇಂದ್ರದ ಅಧೀನಕ್ಕೆ ಬಂದರೆ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರೂ. ೧೦ ಸಾವಿರ ಠೇವಣಿ, ೪ ಸಾವಿರ ಪಾಲು ಬಂಡವಾಳದೊAದಿಗೆ ಆರಂಭವಾದ ಸಂಘ ಇಂದು ಹೆಮ್ಮರವಾಗಿ ನಿಂತಿದೆ ಎಂದು ಸ್ಮರಿಸಿದರು.

ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಮಾತನಾಡಿ, ಹಿರಿಯ ನಾಗರಿಕರಿಗೆ ‘ಕಾವೇರಿ ಸಿರಿ’ ಯೋಜನೆ ಮೂಲಕ ೮.೫೦% ಬಡ್ಡಿ ಡಿಸಿಸಿ ಬ್ಯಾಂಕ್ ಮೂಲಕ ನೀಡಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿ, ಆರ್ಥಿಕ ಸಬಲತೆಗೆ ಸಣ್ಣ ಪ್ರಮಾಣದ ಸಾಲ ಸೌಲಭ್ಯ ಪೂರಕ ಎಂದು ಪ್ರತಿಪಾದಿಸಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ೨೬ ಅಧ್ಯಕ್ಷರು ಸಹಕಾರ ಬ್ಯಾಂಕ್ ಅನ್ನು ಮುನ್ನಡೆಸಿ ರಾಜ್ಯಕ್ಕೆ ಮಾದರಿ ಸಂಘವಾಗಿ ಮಾಡುವಲ್ಲಿ ಶ್ರಮಿಸಿದ್ದಾರೆ. ದೂರದರ್ಶಿತ್ವ ಚಿಂತನೆ, ‘ಸಹಕಾರವೇ ಸನ್ಮಾರ್ಗ’ ಎಂಬ ಧ್ಯೇಯೋದ್ದೇಶದಿಂದ ಆರಂಭಗೊAಡ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ೨೦೨೧ಕ್ಕೆ ೧೦೦ ವರ್ಷ ಪೂರೈಸುವ ಮೂಲಕ ರೈತರ, ಜನರ ಆರ್ಥಿಕ ಸಹಕಾರಕ್ಕೆ ನಿಂತಿದೆ. ಬ್ಯಾಂಕ್ ಪ್ರಗತಿ ಪಥದಲ್ಲಿದ್ದು, ಬದಲಾವಣೆಗಳನ್ನು ಅಳವಡಿಸಿಕೊಂಡು ಕಾಲಕ್ಕೆ ತಕ್ಕಂತೆ ಬ್ಯಾಂಕ್ ಚಟುವಟಿಕೆ ನಡೆಸಿ ಅಗ್ರಗಣ್ಯ ಬ್ಯಾಂಕ್ ಆಗಿ ಹೊರಹೊಮ್ಮಿದೆ. ಜಿಲ್ಲಾ ಸಹಕಾರ ಬ್ಯಾಂಕ್ ಹಲವು ಬಾರಿ ರಾಜ್ಯ, ರಾಷ್ಟç ಪ್ರಶಸ್ತಿ, ಮಾನ್ಯತೆಗಳನ್ನು ಪಡೆದುಕೊಂಡು ಸಾಧನೆ ಮಾಡಿದೆ. ಎಟಿಎಂ, ಡಿಬಿಟಿ, ಸಾಲ ಯೋಜನೆಗಳನ್ನು ನೀಡಲಾಗಿದೆ. ಡಿಜಿಟಲ್ ಸೇವೆಗಳನ್ನು ಅಳವಡಿಸಿಕೊಂಡು ಆಮೂಲಾಗ್ರ ಬದಲಾವಣೆ ತಂದಿದೆ ಎಂದು ಹೇಳಿದರು.

ಅನಾಮಧೇಯ ಪತ್ರದ ಮೂಲಕ ತೇಜೋವಧೆ ಮಾಡಿ ವೈಯಕ್ತಿಕವಾಗಿ ತನಗೆ ಹಾಗೂ ಸಂಘಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಎಲ್ಲಾ ಸಹಕಾರ ಸಂಘಗಳ ಸದಸ್ಯರ ಸಮ್ಮುಖದಲ್ಲಿ ಚರ್ಚೆಗೆ ತಾನು ಸಿದ್ಧ ಎಂದು ಸವಾಲೆಸೆದ ಬಾಂಡ್ ಗಣಪತಿ, ಇದು ಮುಂದಿನ ಚುನಾವಣೆ ದೃಷ್ಠಿಯಿಂದ ಮಾಡುತ್ತಿರುವ ಕುತಂತ್ರ ಎಂದು ಟೀಕಿಸಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾಕುಶಾಲಪ್ಪ ಮಾತನಾಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಅಪೆಕ್ಸ್ ಬ್ಯಾಂಕ್ ರಾಜ್ಯ ಪ್ರತಿನಿಧಿ ಮಣವಟ್ಟಿರ ಬೆಳ್ಯಪ್ಪ, ಸಹಕಾರ ಸಂಘಗಳ ಹಿರಿಯ ಅಧಿಕಾರಿ ಎಸ್.ಸಿ. ದಿವಾಕರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರುಗಳಾದ ಬಿ.ಕೆ. ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಎಸ್.ಬಿ. ಭರತ್ ಕುಮಾರ್, ಪಟ್ರಪಂಡ ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಹೊಸೂರು ಸತೀಶ್ ಕುಮಾರ್, ಕನ್ನಂಡ ಸಂಪತ್, ಕೋಲತಂಡ ಸುಬ್ರಮಣಿ, ಕಿಮ್ಮುಡಿರ ಜಗದೀಶ್, ಜಲಜಾ ಶೇಖರ್, ಕುಂಞAಗಡ ಅರುಣ್ ಭೀಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

ರಾಮಚಂದ್ರ ಮತ್ತು ತಂಡ ನಾಡಗೀತೆ ಹಾಡಿತು. ಬೋಜಮ್ಮ ಮತ್ತು ತಂಡ ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ್ ಸ್ವಾಗತಿಸಿ, ಮಾದೇಟಿರ ಬೆಳ್ಯಪ್ಪ, ಚೋಕೀರ ಅನಿತಾ ನಿರೂಪಿಸಿ, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ವಂದಿಸಿದರು.