ಮಡಿಕೇರಿ, ಜ. ೨೧: ಕೊಡಗು ಅರೆಭಾಷೆ-ಗೌಡ ಸಮಾಜ ಮತ್ತು ಒಕ್ಕಲಿಗ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತ್ತೀಚಿಗೆ ಬೆಂಗಳೂರಿನ ಕೊಡಗು-ಗೌಡಸಮಾಜದಲ್ಲಿ ಸಭೆ ಸೇರಿ ಸಿಎನ್‌ಸಿ ಸಂಘಟನೆಯ ಎನ್.ಯು. ನಾಚಪ್ಪ ಮುಂದಾಳುತನದ ಕೊಡವ ಲ್ಯಾಂಡ್ ವಿಷಯದ ಬಗ್ಗೆ ಚರ್ಚೆ ನಡೆಸಿ ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅಖಿಲ ಕೊಡವ ಸಮಾಜದ ಕೇಂದ್ರ ಸಮಿತಿಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಚರ್ಚೆಗೆ ಗ್ರಾಸವಾಯಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ ಮಾತನಾಡಿ 'ಕೊಡವ ಲ್ಯಾಂಡ್' ನ ಕಾನೂನಾತ್ಮಕ ಮತ್ತು ಸಂವಿಧಾನಬದ್ಧ ಹೋರಾಟ ಹೈಕೋರ್ಟ್ ಅಂಗಳದಲ್ಲಿ ಇರುವ ಕಾರಣ ಅದರ ಬಗ್ಗೆ ಪ್ರಚಾರ, ಚರ್ಚೆ ಅನವಶ್ಯಕ ಎಂದು ತಿಳಿಸಿ, ಕೊಡಗು ಅರೆಭಾಷೆ-ಗೌಡ ಸಮಾಜದ ಹಾಗೂ ಸಮುದಾಯದ ಕೆಲವು ವ್ಯಕ್ತಿಗಳು ಕೊಡಗಿನಲ್ಲಿ ಇತರ ಸಮುದಾಯಗಳ ನಡುವೆ ಕಂದಕ ತೋಡುವ ಕೆಲಸದಲ್ಲಿ ಮಗ್ನರಾಗಿರುವುದು ವಿಷಾದಕರ ಎಂದರು.

ಸAವಿಧಾನದ ಪರಿಮಿತಿಯಲ್ಲಿ ಒಂದು ಸಮುದಾಯದವರು ಸಲ್ಲಿಸುವ ಬೇಡಿಕೆಯನ್ನು ಮತ್ತೊಂದು ಸಮುದಾಯ ವಿರೋಧಿಸುವ ನೀತಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಅಭಿಪ್ರಾಯಪಟ್ಟು ಕೊಡಗು ಅರೆಭಾಷೆ-ಗೌಡ ಸಮಾಜದ ಸಮುದಾಯದ ಕೆಲವು ವ್ಯಕ್ತಿಗಳು ವ್ಯಕ್ತ ಪಡಿಸುವ ವಿರೋಧಿ ಧೋರಣೆಗಳು ಸಂಕುಚಿತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹೊಸ ನೆಂಟಸ್ಥನದ ಪರದೆಯಡಿಯಲ್ಲಿ ಕೊಡಗು ಅರೆಭಾಷೆ-ಗೌಡ ಸಮಾಜಗಳ ಪಧಾದಿಕಾರಿಗಳು ಒಕ್ಕಲಿಗರ ಸಂಘವನ್ನು ಮತ್ತು ಕೊಡವ ಭಾಷಿಕ ಜನಾಂಗದ ಕೆಲವು ಮುಗ್ಧರನ್ನು ಈ ವಿಷಯದಲ್ಲಿ ತಪ್ಪು ಮಾಹಿತಿ ನೀಡಿ ಪ್ರಚಾರಕ್ಕೆ ಬಳಸಿಕೊಳುವುದು, ಹಾಸ್ಯಾಸ್ಪದವೆಂದ ಅವರು, ಕೊಡಗು ‘ಸಿ’ ರಾಜ್ಯವಾಗಿದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ಯಾವದೇ ಜನಾಂಗಗಳ ನಡುವೆ ಯಾವದೇ ರೀತಿಯ ಕಂದಕ ಇರಲಿಲ್ಲವೆಂಬ ಅಂಶವನ್ನು ನೆನಪಿಸುತ್ತಾ “ವಸುದೈವ ಕುಟುಂಬಕA” ಎನ್ನುವ ವೇದವಾಕ್ಯ ಜನಜನಿತವಾಗಿತ್ತು ಎನ್ನುವುದನ್ನು ಸ್ಮರಿಸಿದರು.

ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಬಾಡೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್, ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ, ಖಜಾಂಚಿ ಮಂಡೇಪAಡ ಸುಗುಣ ಮುತ್ತಣ್ಣ, ಕಾನೂನು ಸಲಹೆಗಾರ ಬಲ್ಯಮಾಡ ಮಧು ಮಾದಪ್ಪ ಮತ್ತು ಕೇಂದ್ರ ಸಮಿತಿಯ ಸದಸ್ಯರಾದ ಅಮ್ಮಣಿಚಂಡ ರಾಜಾ ನಂಜಪ್ಪ, ಬಾಚರಣಿಯಂಡ ಅಪ್ಪಣ್ಣ, ಮಾಳೇಟಿರ ರತ್ನ ಮಾದಯ್ಯ, ಅಜ್ಜಿಕುಟ್ಟೀರ ದೇವಯ್ಯ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಮಾಳೇಟಿರ ಶ್ರೀನಿವಾಸ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ , ತೇಲಪಂಡ ಪ್ರಮೋದ್ ಸೋಮಯ್ಯ, ಪಟ್ಟಾಂಡ ಉಮೇಶ್, ಕಾರೆರ ವಾಸು ಜೋಯಪ್ಪ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟಿರ ಪ್ರವೀಣ್ ಉತ್ತಪ್ಪ ಕಾಣತಂಡ ವಿವೇಕ್, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಕೊಣಿಯಂಡ ಬೋಜಮ್ಮ ಉತ್ತಪ್ಪ, ಮಳವಂಡ ಮುತ್ತಮ್ಮ, ಮಂಡೇಪAಡ ಗೀತಾ ಮಂದಣ್ಣ, ಮಂಡೇಪAಡ ತ್ಯಾಗಿ, ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮತ್ತು ಕೊಡವ ಸಮಾಜದ ಇತರರು ಉಪಸ್ಥಿತರಿದ್ದರು.