*ಗೋಣಿಕೊಪ್ಪ, ಜ. ೨೧: ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಶಾಖೆಯ ವಿವೇಕಾ ಗ್ರಾಮೀಣ ಜೀವನಾಧಾರ ಕೇಂದ್ರದ ಸಹಯೋಗದೊಂದಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾಯಿತು.

೩೫ಕ್ಕೂ ಹೆಚ್ಚು ಫಲಾನುಭವಿಗಳು ತರಬೇತಿಯಲ್ಲಿ ಭಾಗವಹಿಸಿ ಕುರಿ, ಮೇಕೆ ಸಾಕಾಣಿಕೆ ಬಗ್ಗೆ ತಿಳಿದುಕೊಂಡರು.

ಕುಟ್ಟ ಗ್ರಾ.ಪಂ. ಉಪಾಧ್ಯಕ್ಷೆ ತೀತಿರ ಎಂ. ತೀರ್ಥ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೊನ್ನಂಪೇಟೆ ತಾಲೂಕು ಮುಖ್ಯ ಪಶುವೈದ್ಯಾಧೀಕಾರಿ ಎ.ಎಸ್. ಶಾಂತೇಶ್ ತಳಿಗಳು, ನಿರ್ವಹಣಾ ಕ್ರಮಗಳು, ಕೊಟ್ಟಿಗೆಗಳ ಬಗ್ಗೆ ಮಾಹಿತಿ ನೀಡಿದರು.

ಯೂತ್ ಮೂವ್‌ಮೆಂಟ್‌ನ ಸಿಬ್ಬಂದಿಗಳಾದ ರಾಜು, ಚಂದ್ರೇಶ್, ಪ್ರೀತಿ, ಅನೀಲ್, ವೆಂಕಟೇಶ್, ದಿಲೀಪ್ ಇದ್ದರು.