ಕುಶಾಲನಗರ, ಜ. ೨೧: ಬೈಕಿಗೆ ಕಾರು ಡಿಕ್ಕಿಯಾದ ಹಿನ್ನೆಲೆಯಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕುಶಾಲನಗರ ಸಮೀಪ ಗಂಧದಕೋಟೆ ಬಳಿ ಹೆದ್ದಾರಿಯಲ್ಲಿ ನಡೆದಿದೆ.
ಸುಂಟಿಕೊಪ್ಪ ಸಮೀಪದ ಪನ್ಯ ತೋಟದ ರೈಟರ್ ನಟರಾಜ್ (೫೨) ಮೃತಪಟ್ಟ ವ್ಯಕ್ತಿ.
ಕುಶಾಲನಗರದಿಂದ ಸುಂಠಿಕೊಪ್ಪ ಕಡೆಗೆ ಬೈಕ್ ನಲ್ಲಿ (ಏಂ೧೨ಖ೦೩೮೧) ತೆರಳುತ್ತಿದ್ದ ಸಂದರ್ಭ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು (ಏಂ೦೫Aಊ೭೯೨೯) ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡ ಬೈಕ್ ಸವಾರನನ್ನು ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನಂತರ ಮಡಿಕೇರಿಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ನಟರಾಜ ಮೃತಪಟ್ಟಿದ್ದಾರೆ ಎಂದು ಕುಶಾಲನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬAಧಿಸಿದAತೆ ಕಾರು ಚಾಲಕನನ್ನು ವಶಕ್ಕೆ ಪಡೆದು ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಚಂದ್ರಪ್ಪ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ.