ಪೊನ್ನಂಪೇಟೆ, ಜ. ೨೦: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ವೀರಾಜ ಪೇಟೆ ತಾಲೂಕು ಮೈದಾನದಲ್ಲಿ ನಡೆಯು ತ್ತಿರುವ ೧೫ನೇ ವರ್ಷದ ಜಿಲ್ಲಾ ಮಟ್ಟದ ಜಮಾಅತ್ ವಾರು ಹೊನಲು ಬೆಳಕಿನ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾವಳಿ ಯಲ್ಲಿ ೫ ತಂಡಗಳು ಮುನ್ನಡೆ ಸಾಧಿಸಿದೆ.

ಗುಹ್ಯ, ಕೊಟ್ಟಮುಡಿ, ಎಮ್ಮೆಮಾಡು ‘ಬಿ’, ಕೊಂಡAಗೇರಿ ‘ಬಿ’ ಮತ್ತು ಕಲ್ಲು ಬಾಣೆ ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿವೆ. ಮೊದಲ ಪಂದ್ಯದಲ್ಲಿ ಗುಹ್ಯ ತಂಡವು ಕೊಂಡA ಗೇರಿ ‘ಎ’ ತಂಡವನ್ನು ೨-೧ ಸೆಟ್ಟು ಗಳಿಂದ ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಕೊಟ್ಟಮುಡಿ ತಂಡವು ಕುಶಾಲನಗರ ತಂಡವನ್ನು ನೇರ ೨ ಸೆಟ್ಟುಗಳಿಂದ ಮಣಿಸಿತು. ೩ನೇ ಪಂದ್ಯ ದಲ್ಲಿ ಎಮ್ಮೆಮಾಡು ‘ಬಿ’ ತಂಡವು ಕೊಳಕೇರಿ ತಂಡವನ್ನು ನೇರ ೨ ಸೆಟ್ಟು ಗಳಿಂದ ಪರಾಭವಗೊಳಿಸಿದರೆ, ೪ನೇ ಪಂದ್ಯದಲ್ಲಿ ಕೊಂಡAಗೇರಿ 'ಬಿ' ತಂಡವು ಕಂಡAಗಾಲದ ಮಂದಮಾಡ ತಂಡವನ್ನು ೨-೧ ಸೆಟ್ಟುಗಳಿಂದ ಸೋಲಿ ಸಿತು. ಕೊನೆಯ ಪಂದ್ಯದಲ್ಲಿ ಕಲ್ಲುಬಾಣೆ ತಂಡವು ಕಡಂಗ ‘ಬಿ’ ತಂಡವನ್ನು ನೇರ ೨ ಸೆಟ್ಟುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.