ಮಡಿಕೇರಿ : ತಾ. ೨೨ ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಇರುವ ಹಿನ್ನೆಲೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨.೩೦ ರ ತನಕ ಕೋಳಿ, ಕುರಿ, ಹಂದಿ ಮಾಂಸ ಹಾಗೂ ಹಸಿಮೀನು ಮಾರಾಟ ನಿಷೇಧಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ತಿಳಿಸಿದ್ದಾರೆ. ಅಂದು ಧಾರ್ಮಿಕ ಕಾರ್ಯ ನಡೆಯುವ ಸಮಯದಲ್ಲಿ ಮಾಂಸ-ಮೀನು ಮಾರಾಟ ಮಾಡದೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಬಾಳೆಲೆ : ತಾ. ೨೨ ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರತಿಷ್ಠಾಪನೆ ಪ್ರಯುಕ್ತ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ ೬ ಗಂಟೆಯಿAದ ಅಪರಾಹ್ನ ೨.೩೦ ಗಂಟೆಯವರೆಗೆ ಎಲ್ಲಾ ಕೋಳಿ, ಹಂದಿ, ಕುರಿ ಮಾಂಸ ಮತ್ತು ಹಸಿಮೀನು ಮಾರಾಟವನ್ನು ನಿಷೇಧಿಸಲಾಗಿದೆ. ಎಲ್ಲಾ ವ್ಯಾಪಾರಸ್ಥರು ಸಹಕರಿಸುವಂತೆ ಪಂಚಾಯಿತಿ ಪ್ರಕಟಣೆ ಕೋರಿದೆ.