ಗೋಣಿಕೊಪ್ಪಲು, ಜ.೨೦: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ೯ನೇ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮದ ‘ಯುವ ಝೇಂಕಾರ’ ಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು. ಕಳೆದ ಮೂರು ದಿನಗಳಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಯುವಜನೋತ್ಸವ ಸಂಭ್ರಮ ಮನೆಮಾಡಿತ್ತು.
೫ ವರ್ಷಗಳಿಗೊಮ್ಮೆ ನಡೆಯುವ ಈ ವಿನೂತನ ಕಾರ್ಯಕ್ರಮದಲ್ಲಿ ರಾಜ್ಯದ ೬ ಮಹಾವಿದ್ಯಾಲಯಗಳ ಐನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಸಂಸ್ಕೃತಿ ಬಿಂಬಿಸುವ ಉಡುಪುಗಳನ್ನು ಧರಿಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು. ೬ ಮಹಾವಿದ್ಯಾಲಯಗಳಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯವು ೨೦೨೪ರ ಯುವ ಜನೋತ್ಸವದ ಯುವ ಝೇಂಕಾರದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೂಡಿಗೆರೆಯ ತೋಟಗಾರಿಕಾ ಮಹಾವಿದ್ಯಾಲಯ ತಂಡವು ದ್ವಿತೀಯ ಸ್ಥಾನ ಪಡೆಯಿತು. ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕ
(ಮೊದಲ ಪುಟದಿಂದ) ಹಾಗೂ ಪ್ರಶಸ್ತಿ ಪತ್ರಗಳನ್ನು ಗಣ್ಯರು ವಿತರಿಸಿದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಸಹಯೋಗದಲ್ಲಿ ೩ ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಲಘುಸಂಗೀತ, ದೇಶಭಕ್ತಿಗೀತೆ, ಜಾನಪದ ಸಮೂಹ ಗಾಯನ, ಸ್ಥಳದಲ್ಲಿಯೇ ಚಿತ್ರ ಬಿಡಿಸುವಿಕೆ, ವ್ಯಂಗ್ಯಚಿತ್ರ ರಚನೆ, ಏಕಾಂತ ನಾಟಕ ಸೇರಿದಂತೆ ಎಲುಕ್ಯೂಷನ್, ಆಶುಭಾಷಣ ಸ್ಪರ್ಧೆ, ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಭಿತ್ತಿ ಚಿತ್ರದ ರಚನೆ, ಲಘು ಪ್ರಹಸನ, ಜಾನಪದ ಸಮೂಹ ನೃತ್ಯ, ರಂಗೋಲಿ ಸ್ಪರ್ಧೆ, ಮಣ್ಣಿನಾಕೃತಿ ರಚನೆ, ತುಣುಕು ಚಿತ್ರ ರಚನೆ ಹಾಗೂ ಮೂಕ ಪಾತ್ರಾಭಿನಯಗಳು ವಿದ್ಯಾರ್ಥಿಗಳಿಂದ ಮೂಡಿಬಂದವು.
ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ, ಕೃಷಿ ಕಾಲೇಜು ನವಿಲೆ ಶಿವಮೊಗ್ಗ, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಕೃಷಿ ಕಾಲೇಜು ಇರುವಕ್ಕಿ, ಸ್ನಾತಕೊತ್ತರ ಮಹಾವಿದ್ಯಾಲಯ ಶಿವಮೊಗ್ಗ ಹಾಗೂ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರರು ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಡಾ.ಹೆಚ್. ರವಿಕುಮಾರ್ ಮಾತನಾಡಿ, ದೇಶದ ಭವಿಷ್ಯ ಯುವಜನರ ಮೇಲಿದೆ ಅಲ್ಲದೆ ಕರ್ತವ್ಯ, ಜವಾಬ್ದಾರಿಯೂ ತಮ್ಮ ಮೇಲಿದೆ. ಜಾಗತಿಕ ತಾಪಮಾನ ಅತಿವೇಗವಾಗಿ ಸಾಗುತ್ತಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಯುವ ಸಮು ದಾಯದ ಮೇಲಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಮಹಾವಿದ್ಯಾಲಯಗಳು ವಿದ್ಯಾರ್ಥಿ ಗಳಿಗೆ ಬೇಕಾದ ಉತ್ತಮ ಅವಕಾಶ ಗಳು, ವೇದಿಕೆಗಳನ್ನು ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೂ ತಮ್ಮ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸುತ್ತಿದೆ. ಈ ನಿಟ್ಟಿನಲ್ಲಿ ಲಭಿಸಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೀನವದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್, ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವೈದ್ಯರು ಹಾಗೂ ಆಶಾಕಾರ್ಯಕರ್ತರು ಮಾಡಿರುವ ಸೇವೆ ಎಂದಿಗೂ ಮರೆಯುವಂತಿಲ್ಲ. ಮುಂದೆ ಇಂತಹವರನ್ನು ಮಹಾ ವಿದ್ಯಾಲಯಗಳು ಗುರುತಿಸುವ ಕೆಲಸ ಮಾಡಬೇಕು.
ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಮಹಾವಿದ್ಯಾಲಯಗಳು ನೀಡುತ್ತಿವೆ. ಮೊಬೈಲ್ನಿಂದ ದೂರವಿರಬೇಕು. ಟಿವಿಯಲ್ಲಿ ಕ್ರಿಕೆಟ್ ನೋಡುವ ಬದಲು ಮೈದಾನದಲ್ಲಿ ಆಟ ಆಡಬೇಕು. ಇದರಿಂದ ಆರೋಗ್ಯಕ್ಕೆ ಅನುಕೂಲ ವಾಗಲಿದೆ. ಕೊಡಗಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಉತ್ತಮ ರೀತಿಯಲ್ಲಿ ಯುವಜನೋತ್ಸವ ಆಚರಿಸುವ ಮೂಲಕ ಉಳಿದ ಮಹಾವಿದ್ಯಾಲಯಗಳಿಗೆ ಮಾದರಿ ಯಾಗಿದೆ. ಮಹಾ ವಿದ್ಯಾಲಯಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯ ಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ. ದೇವಗಿರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೩ ದಿನಗಳ ಕಾರ್ಯ ಕ್ರಮಗಳ ಯಶಸ್ವಿಗೆ ಉಪನ್ಯಾಸಕರು, ವಿದ್ಯಾರ್ಥಿಗಳು ಶ್ರಮ ವಹಿಸಿದ್ದಾರೆ. ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಪರಸ್ಪರ ಬೆರೆಯುವಂತಹ ವೇದಿಕೆ ನಿರ್ಮಾಣ ಮಾಡಿಕೊಡಲಾಗಿದೆ. ಸೋಲು, ಗೆಲುವಿನ ಮೆಟ್ಟಿಲು ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇದರಿಂದ ಮುಂದಿನ ಗೆಲುವು ತಮ್ಮದಾಗಲಿದೆ ಎಂದರು.
ವೇದಿಕೆಯಲ್ಲಿ ವಿವಿಧ ಅರಣ್ಯ ಮಹಾವಿದ್ಯಾಲಯಗಳ ಡೀನ್ಗಳು, ಮುಖ್ಯಸ್ಥರಾದ ಡಾ.ಗಣೇಶ್ ಪ್ರಸಾದ್ ಡಾ.ಕೆ.ಎ. ಈಶ್ವರ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಅರಣ್ಯ ಮಹಾವಿದ್ಯಾಲಯದ ಅರಣ್ಯ, ಕೃಷಿಶಾಸ್ತç ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ಸ್ವಾಗತಿಸಿ, ಸಮಾರೋಪ ವರದಿಯನ್ನು ಡೀನ್ ಡಾ.ಎನ್. ಶಿವಶಂಕರ್ ವಾಚಿಸಿದರು. ಪ್ರಿಯಕಿವಡಸಣ್ಣವರ ಹಾಗೂ ನಿಂಗರಾಜ್ ನಿರೂಪಿಸಿ, ಅನನ್ಯ, ವಿದ್ಯಾಜಗದೀಶ್ ತಂಡ ಪ್ರಾರ್ಥಿಸಿ, ನಾಡ ಗೀತೆ ಹಾಡಿದರು. ಡಾ. ಜಡೇಗೌಡ ವಂದಿಸಿದರು.