ವೀರಾಜಪೇಟೆ, ಜ. ೨೦: ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಹಾಗೂ ಏಷ್ಯನ್ ಸ್ಪೋರ್ಟ್ ಡಾನ್ಸ್ ಕೌನ್ಸಿಲ್ ವತಿಯಿಂದ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಸ್ಪೋರ್ಟ್ಸ್ ಡಾನ್ಸ್ ಚಾಂಪಿ ಯನ್ಶಿಪ್ನಲ್ಲಿ ಜಿಲ್ಲೆಯ ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ ೫೬ ವಿದ್ಯಾರ್ಥಿಗಳು ಸೋಲೋ, ಡಬಲ್ಸ್ ಹಾಗೂ ಗ್ರೂಪ್ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು ೬೨ ಚಿನ್ನ, ೩೨ ಬೆಳ್ಳಿ, ೬ ಕಂಚು ಸೇರಿ ಒಟ್ಟು ೧೦೦ ಪದಕಗಳನ್ನು ಪಡೆದು ತನ್ನ ಚಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿ ಕೊಂಡಿದ್ದಾರೆ.
ಫೆಬ್ರವರಿ ೭ ರಿಂದ ಜಮ್ಮು ಕಾಶ್ಮೀರದಲ್ಲಿ ನಡೆಯುವ ರಾಷ್ಟç ಮಟ್ಟದ ಚಾಂಪಿಯನ್ಶಿಪ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.