ಸುಂಟಿಕೊಪ್ಪ, ಜ. ೨೦: ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಸುಂಟಿಕೊಪ್ಪದಲ್ಲಿ ಬೆಳಿಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ದೇವಾಲಯ ಮತ್ತು ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕರಿಸಿದಲ್ಲದೆ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಮತ್ತೊಂದೆಡೆ ಪಟ್ಟಣದಲ್ಲಿ ಭಾರೀ ಗಾತ್ರದ ರಾಮಚಂದ್ರನ ಫ್ಲೆಕ್ಸ್ಗಳು ರಾರಾಜಿಸುತ್ತಿವೆ.

ಪಟ್ಟಣದಲ್ಲಿರುವ ಅಂಗಡಿ ಮಳಿಗೆಗಳು ಸಹ ವಿದ್ಯುತ್ ದೀಪಗಳಿಂದ ಸಿಂಗಾರಗೊAಡಿರುವುದು ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿದೆ.

ಸೋಮವಾರ ಬೆಳಿಗ್ಗೆ ೭.೩೦ ಕ್ಕೆ ಗ್ರಾಮ ದೇವತೆಗೆ ಮೊದಲ ವಿಶೇಷ ಪೂಜೆ ನಡೆಯಲಿದೆ. ೮ ಗಂಟೆಯಿAದ ಗಣಪತಿ ಹೋಮ, ರಾಮತಾರಕ ಹೋಮ, ದೇವರಿಗೆ ವಿಶೇಷ ಅಲಂಕಾರ ಪೂಜೆ, ಕುಂಕುಮ ಪೂಜೆಯನ್ನು ದೇವಾಲಯದ ಅರ್ಚಕ ದರ್ಶನ್ ಭಟ್ ತಂಡ ನೆರವೇರಿಸಲಿದ್ದಾರೆ. ೧೨.೩೦ ಗಂಟೆಗೆ ರಾಮ, ಸೀತೆ, ಲಕ್ಷö್ಮಣ, ಹನುಮಂತನಿಗೆ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠೆಯ ನೇರ ಪ್ರಸಾರ ಕೂಡ ನಡೆಯಲಿದೆ.