ಕೂಡಿಗೆ, ಜ.೨೦: ಅಯೋಧ್ಯೆಯಲ್ಲಿ ತಾ. ೨೨ ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಕೂಡಿಗೆ, ಕೂಡುಮಂಗಳೂರು ಹನುಮ ಸೇನಾ ಸಮಿತಿ ವತಿಯಿಂದ ರಾಮಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ೫೦೦ ಕ್ಕೂ ಹೆಚ್ಚು ಮಹಿಳೆಯರಿಂದ ಶ್ರೀ ರಾಮನ ವಿಗ್ರಹಕ್ಕೆ ಆರತಿ ಮಾಡಲು ಸಿದ್ಧತೆ ನಡೆಯುತ್ತಿದೆ.

ಕೂಡಿಗೆ ಶ್ರೀ ಬಸವೇಶ್ವರ, ದಂಡಿನಮ್ಮ ದೇವಾಲಯ ಸಮಿತಿ ವತಿಯಿಂದ ವಿಶೇಷ ಹೋಮ ಹವನ ಪೂಜಾ ಕೈಂಕರ್ಯಗಳು ನಡೆಯಲಿದೆ. ಗುಮ್ಮನಕೊಲ್ಲಿ ಗ್ರಾಮಸ್ಥರು, ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ. ಪ್ರಸಾದ ವಿನಿಯೋಗ, ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಗುಮ್ಮನಕೊಲ್ಲಿ, ಮುಳ್ಳುಸೋಗೆ ಸೇರಿದಂತೆ ಹಾಸನ ಹೆದ್ದಾರಿ ಕೇಸರಿ ಧ್ವಜದಿಂದ ಶೃಂಗಾರಗೊAಡಿದೆ.

ಕಣಿವೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ಧಲಿಂಗಪುರ ಯಡವನಾಡು, ಹುದುಗೂರು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲು ಸಿದ್ಧತೆ ನಡೆಯುತ್ತಿದೆ.

ಧಾರ್ಮಿಕ ಕಾರ್ಯಕ್ರಮ

ಸಿದ್ದಾಪುರ, ಜ. ೨೦: ಅಯೋಧ್ಯೆಯಲ್ಲಿ ತಾ. ೨೨ ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಸಿದ್ದಾಪುರ ಪಟ್ಟಣವನ್ನು ಕೇಸರಿ ಬಣ್ಣದ ತೋರಣಗಳಿಂದ ಸಿಂಗರಿಸಲಾಗಿದೆ. ರಾಮನ ಬೃಹತ್ ಗಾತ್ರದ ಕಟೌಟ್‌ಗಳನ್ನು ಅಳವಡಿಸಲಾಗಿದೆ. ಸಿದ್ದಾಪುರದ ಶ್ರೀ ಅಗಸ್ತೆö್ಯÃಶ್ವರ ದೇವಾಲಯದಲ್ಲಿ ಸಂಜೆ ವಿವಿಧ ಪೂಜಾ ಕೈಂಕರ್ಯಗಳು, ರಾಮಜಪ, ಕಾವೇರಿ ನದಿಯಲ್ಲಿ ಆರತಿ ಬೆಳಗುವುದು ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಗುಹ್ಯ ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಸಿದ್ದಾಪುರ ಸುತ್ತಮುತ್ತಲಿನ ಬಾಡಗ - ಬಾಣಂಗಾಲ ಗ್ರಾಮದ ದೇವಾಲಯಗಳಲ್ಲಿ ಕೂಡ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪೂಜಾ ಕೈಂಕರ್ಯಗಳನ್ನು ಏರ್ಪಡಿಸಲಾಗಿದೆ.

ಪೂಜಾ ಕಾರ್ಯಕ್ರಮ

ಮಡಿಕೇರಿ, ಜ. ೨೦: ಅಯೋಧ್ಯೆಯಲ್ಲಿ ತಾ. ೨೨ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಡಿಕೇರಿಯ ಸುದರ್ಶನ ಬಡಾವಣೆಯ ಶ್ರೀ ಮುನೀಶ್ವರ ದೇವಾಲಯದಲ್ಲಿ ಬೆಳಿಗ್ಗೆ ೯ ಗಂಟೆಯಿAದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಿಗ್ಗೆ ೧೧ ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೪ ಗಂಟೆ ನಂತರ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿದ್ದು ರಾತ್ರಿ ೭ ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ. ೭.೧೫ ಗಂಟೆಗೆ ಸುದರ್ಶನ್ ಬಡಾವಣೆಯ ಕರ ಸೇವಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ೭.೩೦ ಗಂಟೆಗೆ ಬಡಾವಣೆಯ ಪುಟಾಣಿ ಮಕ್ಕಳಿಗೆ ಛದ್ಮವೇಷ, ಭಕ್ತಿಗೀತೆಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ರಾತ್ರಿ ೮.೧೫ ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ.