ನವದೆಹಲಿ, ಜ. ೨೦ : ನೂತನ ಭದ್ರತಾ ತಂತ್ರಜ್ಞಾನವುಳ್ಳ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಅನ್ನು (ಊSಖP) ಎಲ್ಲ ವಾಹನಗಳಿಗೆ ಅಳವಡಿಸಲು ಈ ಹಿಂದೆ ಇದ್ದ ಕೊನೆಯ ದಿನಾಂಕವನ್ನು ಇತ್ತೀಚೆಗಿನ ಆದೇಶದಲ್ಲಿ ವಿಸ್ತರಿಸಿರುವ ರಾಜ್ಯ ಸರಕಾರದ ಸಾರಿಗೆ ಇಲಾಖೆ ಫೆ.೧೭ ರೊಳಗಾಗಿ ಈ ನಂಬರ್ ಪ್ಲೇಟ್ಅನ್ನು ಅಳವಡಿಸುವಂತೆ ಸೂಚಿಸಿದೆ. ೨೦೧೯ರ ಬಳಿಕ ಖರೀದಿ ಮಾಡಲಾದ ವಾಹನಗಳಲ್ಲಿ ನೂತನ ತಂತ್ರಜ್ಞಾನವುಳ್ಳ ಹೆಚ್ಚಿನ ಭದ್ರತೆ ಹೊಂದಿರುವ ಹೆಚ್.ಎಸ್.ಆರ್.ಪಿ ಅನ್ನು ಅಳವಡಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚಿತವಾಗಿ ಖರೀದಿ ಮಾಡಲಾದ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ. ಈ ಹಿಂದೆ ವಿವಿಧ ವಿನ್ಯಾಸ ಶೈಲಿಗಳ ಹಾಗೂ ಅಕ್ಷರ-ಸಂಖ್ಯಾ ಶೈಲಿಗಳುಳ್ಳ ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಅವಕಾಶವಿತ್ತು. ಈ ಕಾರಣದಿಂದಾಗಿ ಕೆಲವೊಂದು ನಂಬರ್ ಪ್ಲೇಟ್ಗಳಲ್ಲಿ ಸಂಖ್ಯೆ ಹಾಗೂ ಅಕ್ಷರಗಳು ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ. ಇದನ್ನು ತಡೆಗಟ್ಟಲು ‘Iಓಆ’ ಮಾದರಿಯ ಒಂದೇ ಸಂಖ್ಯಾ-ಅಕ್ಷರ ಶೈಲಿವುಳ್ಳ ನಂಬರ್ ಪ್ಲೇಟ್ಗಳನ್ನು ಮಾತ್ರ ಬಳಸುವಂತೆ ಸರಕಾರ ಸೂಚಿಸಿತ್ತಾದರೂ ಇದೀಗ ಕಳೆದ ವರ್ಷ ಹೊರಡಿಸಿದ ಆದೇಶದ ಪ್ರಕಾರ ಈ ‘Iಓಆ’ ನಂಬರ್ಪ್ಲೇಟ್ಗಳು ಕೂಡ ಇನ್ನು ಮುಂದೆ ಅನಧಿಕೃತವಾಗಲಿವೆ. ಇದರ ಬದಲಾಗಿ ‘ಊSಖP’ ಅಂದರೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬಳಕೆ ಕಡ್ಡಾಯವಾಗಲಿದೆ. ಫೆ.೧೭ ರೊಳಗೆ ಎಲ್ಲಾ ವಾಹನಗಳು ಈ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ರೂ.೫೦೦ ರಿಂದ ೧,೦೦೦ ದವರೆಗೆ ದಂಡ ವಿಧಿಸಲಾಗುತ್ತದೆ ಎಂದು ರಾಜ್ಯ ಸಾರಿಗೆ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
ಆನ್ಲೈನ್ ನೋಂದಣಿ
ಕರ್ನಾಟಕ ಸರಕಾರದ ಅಧಿಕೃತ ವೆಬ್ಸೈಟ್ ‘ಣಡಿಚಿಟಿsಠಿoಡಿಣ.ಞಚಿಡಿಟಿಚಿಣಚಿಞಚಿ.gov.iಟಿ’ಗೆ ತೆರಳಿ ಊSಖP ಆಯ್ಕೆಯನ್ನು ಒತ್ತಿದರೆ ವಾಹನ ನೋಂದಣಿ ಕಾರ್ಡ್ನಲ್ಲಿನ ವಿvರ ನೀಡಿದಲ್ಲಿ ಹತ್ತಿರದ ವಾಹನ ಸಂಸ್ಥೆಯ ಅಧಿಕೃತ ವಾಹನ ಮಾರಾಟಗಾರರ ವಿವರವನ್ನು ನೀಡುತ್ತದೆ. ಅನುಕೂಲಕರ ಮಾರಾಟಗಾರರನ್ನು ಆಯ್ಕೆ ಮಾಡಿ ದಿನಾಂಕ ಹಾಗೂ ಸಮಯ ನಿಗದಿಪಡಿಸಿ ನಿಗದಿತ ಮೊತ್ತವನ್ನು ಆನ್ಲೈನ್ ಮೂಲಕವೇ ಪಾವತಿಸಿದಲ್ಲಿ ಆ ದಿನದಂದು ಸಾರಿಗೆ ಇಲಾಖೆ ಆನ್ಲೈನ್ ತಂತ್ರಾAಶದಲ್ಲಿ ನೋಂದಣಿಯಾದ ನಂಬರ್ ಪ್ಲೇಟ್ಅನ್ನು ಅವರಿಂದಲೇ ವಾಹನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ.
ತಾ.೩೧ ರೊಳಗೆ ಫಾಸ್ಟ್ಟ್ಯಾಗ್ ಕೆ.ವೈ.ಸಿ ಕಡ್ಡಾಯ
ಎನ್.ಎಚ್.ಎ.ಐ ಭಾರತೀಯ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಇತ್ತೀಚೆಗಿನ ಪ್ರಕಟಣೆಯ ಪ್ರಕಾರ ದೇಶದಾದ್ಯಂತ ಬಳಕೆಯಲ್ಲಿರುವ ಟೋಲ್ಬೂತ್ಗಳಲ್ಲಿ ಸ್ವಯಂ ಟೋಲ್ ಪಾವತಿ ತಂತ್ರಜ್ಞಾನ ಫಾಸ್ಟ್ಟ್ಯಾಗ್ನ ಖಾತೆಯ ಕೆ.ವೈ.ಸಿ (ಏಟಿoತಿ ಙouಡಿ ಅusಣomeಡಿ) ಕಡ್ಡಾಯವಾಗಿ ಮಾಡಿಸಬೇಕಿದೆ. ಒಂದು ವಾಹನಕ್ಕೆ ಒಂದೇ ಫಾಸ್ಟ್ಟ್ಯಾಗ್ ಬಳಕೆಯಾಗುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ. ಒಂದು ವಾಹನಕ್ಕೆ ಹಲವು ಫಾಸ್ಟ್ಟ್ಯಾಗ್ಗಳನ್ನು ಬಳಸುವುದು ಹಾಗೂ ಹಲವು ವಾಹನಗಳಿಗೆ ಒಂದೇ ಫಾಸ್ಟ್ಟ್ಯಾಗ್ಗಳನ್ನು ಬಳಸುವುದನ್ನು
(ಮೊದಲ ಪುಟದಿಂದ) ತಡೆಗಟ್ಟುವ ಉದ್ದೇಶದಿಂದ ‘ಒಂದು ವಾಹನ ಒಂದು ಫಾಸ್ಟ್ಟ್ಯಾಗ್’ ನೀತಿಯಡಿ ಹೊಸ ಆದೇಶ ಜಾರಿಗೆ ತರಲಾಗಿದೆ. ಇದುವರೆಗೆ ಭಾರತದಲ್ಲಿ ೭ ಕೋಟಿ ಫಾಸ್ಟ್ಟ್ಯಾಗ್ಗಳು ವಿತರಣೆಯಾಗಿದ್ದು, ೪ ಕೋಟಿ ಮಾತ್ರ ಸಕ್ರಿಯವಾಗಿದ್ದು, ೧.೨ ಕೋಟಿ ಫಾಸ್ಟ್ಟ್ಯಾಗ್ಗಳು ನಕಲುಗಳಾಗಿವೆ ಎಂದು ತಿಳಿಸಿರುವ ಎನ್.ಎಚ್.ಎ.ಐ, ಆರ್.ಬಿ.ಐ ನಿಯಮಗಳ ಪ್ರಕಾರ ಭದ್ರತಾ ದೃಷ್ಟಿಯಿಂದ ಬ್ಯಾಂಕುಗಳಿAದ ಪಡೆದಿರುವ ಹಾಗೂ ಸಂಬAಧಿಸಿದ ಬ್ಯಾಂಕುಗಳ ಖಾತೆಗೆ ಹೊಂದಿಕೊAಡಿರುವ ಫಾಸ್ಟ್ಟ್ಯಾಗ್ಗಳನ್ನು ಕೆ.ವೈ.ಸಿ ಮಾಡಿಸಿ ಒಂದು ಫಾಸ್ಟ್ಟ್ಯಾಗ್ ಅನ್ನು ಒಂದೇ ವಾಹನಕ್ಕೆ ಬಳಸುವಂತೆ ಆದೇಶಿಸಲಾಗಿದೆ.
ಕೆ.ವೈ.ಸಿ ಮಾಡಿಸದಿದ್ದಲ್ಲಿ ತಾ.೩೧ ರಿಂದ ಫಾಸ್ಟ್ಟ್ಯಾಗ್ ನಿಷ್ಕಿçಯ
‘ಜಿಚಿsಣಚಿg.ihmಛಿಟ.ಛಿom’ ಅಧಿಕೃತ ವೆಬ್ಸೈಟ್ ಮೂಲಕ ಸಾರ್ವಜನಿಕರು ಕೆ.ವೈ.ಸಿ ಮಾಡಿಸುವುದು ಅಗತ್ಯವಿದೆ. ಈ ವೆಬ್ಸೈಟ್ನಲ್ಲಿ ಲಾಗಿನ್ ಆಯ್ಕೆಯನ್ನು ಒತ್ತಿ ಫಾಸ್ಟ್ಟ್ಯಾಗ್ನೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ನೀಡುವ ಅಗತ್ಯವಿದೆ. ಒ.ಟಿ.ಪಿ ಮೂಲಕ ಸ್ವಯಂ ಪರಿಶೀಲನೆ ಬಳಿಕ ಖಾತೆಗೆ ಲಾಗಿನ್ ಆಗಲಿದೆ. ಇಲ್ಲಿ ‘ಒಥಿ Pಡಿoಜಿiಟe’ ಆಯ್ಕೆಯನ್ನು ಒತ್ತಿದರೆ ಕೆ.ವೈ.ಸಿ ಆಗಿದೆಯೋ, ಇಲ್ಲವೋ ಎಂಬುದಾಗಿ ಸಂದೇಶ ಪ್ರದರ್ಶನಗೊಳ್ಳಲಿದೆ. ಆಗದೆ ಇದ್ದಲ್ಲಿ ಕೆ.ವೈ.ಸಿ ಮಾಡಿಸಿ ಎಂಬ ಆಯ್ಕೆ ಪ್ರದರ್ಶನಗೊಳ್ಳಲಿದೆ. ಅಲ್ಲಿನ ಸೂಚನೆಗಳನ್ನು ಪಾಲಿಸಿದಲ್ಲಿ ಕೆ.ವೈ.ಸಿ ಪ್ರಕ್ರಿಯೆ ಪೂರ್ಣಗೊಂಡು ೭ ದಿನಗಳ ಬಳಿಕ ಅಧಿಕೃತವಾಗಿ ಫಾಸ್ಟ್ಟ್ಯಾಗ್ ಅಪ್ಡೇಟ್ ಆಗಲಿದೆ.
ತಾ.೩೧ ರ ಬಳಿಕವೂ ಈ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಫಾಸ್ಟ್ಟ್ಯಾಗ್ನಲ್ಲಿ ಹಣವಿದ್ದರೂ ಖಾತೆ ನಿಷ್ಕಿçಯವಾಗಲಿರುವುದಾಗಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.