ಮಡಿಕೇರಿ, ಜ. ೨೦: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತಾ.೧೪ ರಿಂದ ತಾ.೧೮ ರವರೆಗೆ ನಡೆದ ‘ಆಲ್ ಇಂಡಿಯಾ ಇಂಟರ್ ಸರ್ಕಲ್ ಹಾಕಿ ಚಾಂಪಿಯನ್‌ಶಿಪ್’ನಲ್ಲಿ ಎಸ್.ಬಿ.ಐ. ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

ಟೂರ್ನಿಯಲ್ಲಿ ಒಟ್ಟು ೧೪ ತಂಡಗಳು ಭಾಗವಹಿಸಿದ್ದವು. ವಿಶೇಷವೇನೆಂದರೆ ಬೆಂಗಳೂರು ತಂಡದಲ್ಲಿ ೯ ಮಂದಿ ಮೂಲತಃ ಕೊಡಗಿನ ಆಟಗಾರರು ಪಾಲ್ಗೊಂಡಿದ್ದರು. ಕೊಡಗಿನವರಾದ ಚೆಪ್ಪುಡಿರ ಪೂಣಚ್ಚ, ಕೂತಂಡ ಸಂತೋಷ್, ಗಣೇಶ್ ಬಿ.ಎಂ. ಸೋಮವಾರಪೇಟೆ, ಕುಲ್ಲಚಂಡ ಪ್ರಕಾಶ್, ನಂದ ಟಿ.ಎನ್. ಕುಶಾಲನಗರ, ಮಂಡೇಪAಡ ಕೃಪಾನ್, ನೆಲ್ಲಮಕ್ಕಡ ಸುಬ್ರಮಣಿ, ಚೋಳಂಡ ಅಚ್ಚಪ್ಪ, ಪೋರೆರ ಮಂಜುನಾಥ್ ತಂಡದಲ್ಲಿ ಭಾಗವಹಿಸಿದ್ದರು.