ಕಣಿವೆ, ಜ. ೨೦: ನಡೆದಾಡುತ್ತಿದ್ದ ದೇವರೆಂದೇ ಭಕ್ತರ ಮನದಲ್ಲಿ ಮನೆ ಮಾಡಿದ್ದ ತುಮಕೂರಿನ ಸಿದ್ದಗಂಗಾ ಮಠದ ಶಿವೈಕ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಹೆಸರಿನಲ್ಲಿ ಗುಡ್ಡೆಹೊಸೂರಿನ ರಾಷ್ಟಿçÃಯ ಹೆದ್ದಾರಿಯ ಮುಖ್ಯ ವೃತ್ತವನ್ನು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತವನ್ನಾಗಿ ನಿರ್ಮಾಣ ಮಾಡಲಾಗಿದ್ದು, ತಾ. ೨೧ರಂದು (ಇಂದು) ಲೋಕಾರ್ಪಣೆಗೊಳ್ಳಲಿದೆ.

ಕಳೆದ ೨೦೧೭ರಲ್ಲಿ ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷರಾಗಿದ್ದ ಭಾರತಿ ಅವರು ಶ್ರೀ ಸಿದ್ದಗಂಗಾ ಭಕ್ತ ಮಂಡಳಿಯ ಮನವಿಗೆ ಓಗೊಟ್ಟ ಪಂಚಾಯಿತಿ ಆಡಳಿತ ಮಂಡಳಿಯಲ್ಲಿನ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಶ್ರೀಗಳ ಹೆಸರಲ್ಲಿ ವೃತ್ತಕ್ಕೆ ನಾಮಕರಣ ಮಾಡಲು ನಿರ್ಣಯಿಸಲಾಗಿತ್ತು.

ಅಂದಿನಿAದ ಇಂದಿನತನಕ ವೃತ್ತದಲ್ಲಿ ತಾತ್ಕಾಲಿಕವಾಗಿ ಶ್ರೀಗಳ ಭಾವ ಚಿತ್ರದ ಫ್ಲೆಕ್ಸ್ ಇಡಲಾಗಿತ್ತು. ಇದೀಗ ಗುಡ್ಡೆಹೊಸೂರಿನ ವೀರಶೈವ ಸಮಾಜದ ವತಿಯಿಂದ ವೃತ್ತಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರವನ್ನು ಕೆತ್ತನೆ ಮಾಡಿದ ಕಲ್ಲನ್ನು ನೆಟ್ಟು ಸಿದ್ದಪಡಿಸಲಾಗುತ್ತಿದೆ. ನೂತನ ವೃತ್ತ ತಾ.೨೧ರಂದು (ಇಂದು) ಶ್ರೀಗಳ ಪುಣ್ಯಸ್ಮರಣೆಯ ದಿನದಂದು ಲೋಕಾರ್ಪಣೆಗೊಳ್ಳಲಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್ ಮೂರ್ತಿ ತಿಳಿಸಿದ್ದಾರೆ.