ಸೋಮವಾರಪೇಟೆ, ಜ.೨೦ : ನಿಶ್ಚಯ, ಪ್ರಯತ್ನ ಹಾಗೂ ಸಂಯಮ ವಿದ್ದರೆ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅಭಿಪ್ರಾಯಿಸಿದರು.
ಇಲ್ಲಿನ ಇಂದಿರಾಗಾAಧಿ ಅಭಿ ಮಾನಿಗಳ ಸಂಘದ ವತಿಯಿಂದ ಸ್ಥಳೀಯ ಸಾಕಮ್ಮನ ಬಂಗಲೆ ಮುಂಭಾ ಗದ ಮೈದಾನದಲ್ಲಿ ಆಯೋಜಿಸ ಲಾಗಿದ್ದ ೩೭ನೇ ವರ್ಷದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳು ದೈಹಿಕ ಹಾಗೂ ಮಾನ ಸಿಕ ಆರೋಗ್ಯಕ್ಕೆ ಪೂರಕವಾಗಿವೆ. ಕ್ರೀಡೆಗಳಿಂದಲೂ ಉತ್ತಮ ಭವಿಷ್ಯ ಕಂಡು ಕೊಳ್ಳಲು ಸಾಧ್ಯ. ಸೋಲು- ಗೆಲುವು ಕ್ರೀಡೆಯಲ್ಲಿ ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಕ್ರೀಡಾಪಟುಗಳಿಗೆ ಇರಬೇಕು ಎಂದರು.
ಇAದಿರಾಗಾAಧಿ ಅಭಿಮಾನಿಗಳ ಸಂಘಗಳು ಸಾವಿರಾರು ಹುಟ್ಟಿದ್ದರೂ ಬೆರಳೆಣಿಕೆಯಷ್ಟು ಸಂಘಗಳು ಮಾತ್ರ ಕಾರ್ಯನಿರತವಾಗಿವೆ. ಇವುಗಳಲ್ಲಿ ಸೋಮವಾರಪೇಟೆಯ ಸಂಘವೂ ಒಂದು. ನಿರಂತರವಾಗಿ ೩೭ವರ್ಷಗಳ ಕಾಲ ಮಾಜಿ ಪ್ರಧಾನಿಗಳ ನೆನಪಿಗಾಗಿ ಕಬಡ್ಡಿ ಪಂದ್ಯಾಟ ಆಯೋಜಿಸಿ ಕೊಂಡು ಬರುತ್ತಿರುವುದು ಶ್ಲಾಘನೀಯ. ಇಂದಿರಾಗಾAಧಿ ಅವರು ಧೀಮಂತ ನಾಯಕರಾಗಿದ್ದರು. ದೇಶದ ಅಭಿವೃ ದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಮಾಜಿ ಸೈನಿಕ ಚಂದ್ರಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಮುಖಂಡ ಡಿ.ಎಸ್.ನಿರ್ವಾಣಪ್ಪ, ಕಾಟ್ನಮನೆ ಗಿರೀಶ್, ಜಮೀರ್ ಅಹಮ್ಮದ್, ನಿವೃತ್ತ ಡಿ.ಗ್ರೂಪ್ ನೌಕರ ಹೆಚ್.ಸಿ. ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.