ಚೆಟ್ಟಳ್ಳಿ, ಜ. ೧೯: ಪ್ರಾಥಮಿಕ ಕೃಷಿ ಸಹಕಾರ ಸಂಘದ ಈರಳೆ ಘಟಕದಲ್ಲಿ ಪ್ರಷ್ಠಾಪಿಸಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಒಂದು ವರ್ಷ ತುಂಬಿದ ಹಿನ್ನೆಲೆ ಮಕರ ಸಂಕ್ರಾAತಿಯAದು ವಾರ್ಷಿಕ ಪೂಜೆಯನ್ನು ನೆರವೇರಿಸಲಾಯಿತು.

ಪೂರ್ವಾಹ್ನ ಚೆಟ್ಟಳ್ಳಿ ಸಹಕಾರ ಸಂಘದ ಶ್ರೀ ನರೇಂದ್ರ ಮೋದಿ ಭವನದಲ್ಲಿರುವ ವಿಘ್ನೇಶ್ವರ, ವೀರಾಂಜನೇಯ, ಮಹಾವಿಷ್ಣುವಿಗೆ, ಮುಖ್ಯ ಕಚೇರಿಯಲ್ಲಿರುವ ಪಶುಪತಿನಾಥ ಹಾಗೂ ಕಾವೇರಿಮಾತೆಗೆ ಪೂಜೆ ಸಲ್ಲಿಸಲಾಯಿತು.

ನಂತರದಲ್ಲಿ ಈರಳೆ ಶಾಖೆಯಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ವಿಶೇಷ ಅಲಂಕಾರದೊAದಿಗೆ ಪೂಜೆ ಸಲ್ಲಿಸಿ ಮಕ್ಕಳು ಹಾಗೂ ಸಾರ್ವಜನಿಕರಿಂದ ಆರತಿ ಬೆಳಗಲಾಯಿತು. ಮಹಾಮಂಗಳಾರತಿಯ ನಂತರ ಪಾಯಸ ಹಾಗೂ ಪ್ರಸಾದ ವಿನಿಯೋಗ ನೆರವೇರಿತು.

ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹಾಗೂ ಸದಸ್ಯರು ಹಾಜರಿದ್ದರು.