ಶನಿವಾರಸಂತೆ, ಜ. ೧೯: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಟಿ.ಎಸ್.ರವಿ ಎನ್.ಸಿ.ಸಿ. ಲೆಫ್ಟಿನೆಂಟ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಪ್ರಸ್ತುತ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಂಜಿನಿಯರಿAಗ್ ಕಾಲೇಜಿನಲ್ಲಿ ಎನ್.ಸಿ.ಸಿ. ಕೇರ್ ಟೇಕರ್ ಸಿಟಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಅವರನ್ನು ೧೩ನೇ ಕರ್ನಾಟಕ ಬೆಟಾಲಿಯನ್ ಕಮಾಂಡರ್ ಕಚೇರಿಯ ಮುಖಾಂತರ ಅಧಿಕೃತವಾಗಿ ಲೆಫ್ಟಿನೆಂಟ್ ಆಗಿ ಘೋಷಿಸಿ ಆದೇಶ ಹೊರಡಿಸಲಾಗಿದೆ.

ಪ್ರಸ್ತುತ ರವಿ ಅವರು ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಯುವರಾಜ ಕಾಲೇಜಿನ ಕ್ರೀಡಾ ಕಾರ್ಯದರ್ಶಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ರಾಷ್ಟçಮಟ್ಟದ ಕ್ರೀಡಾಪಟು, ಚಿನ್ನದ ಪದಕ ವಿಜೇತೆ ಕಮಲಮ್ಮ-ಸುರೇಶ್ ದಂಪತಿಯ ಪುತ್ರ ಟಿ.ಎಸ್.ರವಿ ಅವರು ಸಹ ಅಂತರರಾಷ್ಟಿçÃಯ ಕ್ರೀಡಾಪಟು ಕೂಡ ಆಗಿದ್ದಾರೆ.