ಮಡಿಕೇರಿ, ಜ. ೧೮: ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ, ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಮೊರೆ ಹೋಗುವಂತಾಗಿದೆ.

ಕುಶಾಲನಗರ ತಾಲೂಕಿನ ಕೂಡಿಗೆ, ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಾಗಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರೊಬ್ಬರು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಆಗಮಿಸು ತ್ತಿದ್ದಾರೆ. ಬಾಕಿ ಉಳಿದ ಐದು ದಿನ ವೈದ್ಯರಿಲ್ಲದೆ ಚೆಟ್ಟಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡುವಂತಾಗಿದೆ. ಎರಡು ವರ್ಷಗಳ ಕಾಲ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದ ಎಂ.ಬಿ.ಬಿ.ಎಸ್. ವೈದ್ಯರೊಬ್ಬರು ತಮ್ಮ ಸ್ವಗ್ರಾಮ ಚಾಮರಾಜನಗರದ ಕೊಳ್ಳೆಗಾಲಕ್ಕೆ ವರ್ಗಾವಣೆ ಪಡೆದು ತೆರಳಿದ್ದಾರೆ. ಡಿಸೆಂಬರ್ ತಿಂಗಳ ೨೨ ರಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ, ದಾದಿಯರೇ ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.

ಬಡವರಿಗೆ ಆಸರೆಯಾಗಿದ್ದ ಆಸ್ಪತ್ರೆ:

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಡವರಿಗೆ ಆಸರೆಯಾಗಿತ್ತು.

ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆ ಇದೀಗ ವೈದ್ಯರಿಲ್ಲದೆ, ಬಡ ರೋಗಿಗಳು ಖಾಸಗಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ. ಸಿದ್ದಾಪುರ, ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ, ವಾಲ್ನೂರು-ತ್ಯಾಗತ್ತೂರು, ಕೂಡ್ಲೂರು ಚೆಟ್ಟಳ್ಳಿ, ಕಂಡಕರೆ, ಪೊನ್ನತ್ಮೊಟ್ಟೆ, ಭೂತನಕಾಡು, ಮತ್ತಿಕಾಡು, ಚೆಟ್ಟಳ್ಳಿ, ಈರಳವಳೆಮುಡಿ ಗ್ರಾಮದ ಜನರ ಆಸರೆಯಾಗಿತ್ತು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ. ಈ ಎಲ್ಲಾ ಸ್ಥಳಗಳಿಂದ ಚಿಕಿತ್ಸೆಗಾಗಿ ರೋಗಿಗಳು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದರು. ಇದೀಗ ವೈದ್ಯರಿಲ್ಲದೆ ಬಡ ರೋಗಿಗಳು, ಸಿದ್ದಾಪುರ, ಮಡಿಕೇರಿ ನಗರದ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.

ಐದು ವರ್ಷಗಳಲ್ಲಿ ನಾಲ್ವರು ವೈದ್ಯರು ವರ್ಗಾವಣೆ!

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ವರ್ಷಗಳಲ್ಲಿ ನಾಲ್ವರು ವೈದ್ಯರು ವರ್ಗಾವಣೆ ಪಡೆದು ತೆರಳಿದ್ದಾರೆ. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೬ ವರ್ಷಕ್ಕೂ ಅಧಿಕ ಕಾಲ ಅತ್ಯುತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಗಿರೀಶ್ ಅವರ ವರ್ಗಾವಣೆ ನಂತರ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ. ಗಿರೀಶ್ ಅವರ ವರ್ಗಾವಣೆಯ ನಂತರ ನೇಮಕಗೊಂಡ ವೈದ್ಯರು ಕೇವಲ ಒಂದೇ ವರ್ಷದಲ್ಲಿ ವರ್ಗಾವಣೆ ಯನ್ನು ಪಡೆದಿದ್ದರು. ನಂತರ ಸರ್ಕಾರ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದರು. ಆದರೆ ಆಯುಷ್ ವೈದ್ಯರು ನೇಮಕಗೊಂಡ ಬಳಿಕ, ವೈದ್ಯರ ವಿರುದ್ಧ ಹಲವು ದೂರುಗಳು ಕೇಳಿಬರುತ್ತಿದ್ದವು. ಆಯುಷ್ ವೈದ್ಯರು ಹೆರಿಗೆ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿತ್ತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಬೇಕೆಂಬ ಒತ್ತಾಯಕ್ಕೆ ಮಣಿದು ಸರ್ಕಾರ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಿದ್ದರು. ಕಳೆದ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವೈದ್ಯರು ಇದೀಗ ಕಳೆದು ತಿಂಗಳು ವರ್ಗಾವಣೆ ಪಡೆದು ತೆರಳಿದ್ದಾರೆ. ವೈದ್ಯರು ನೇಮಕಗೊಂಡ ಬಳಿಕ, ವೈದ್ಯರ ವಿರುದ್ಧ ಹಲವು ದೂರುಗಳು ಕೇಳಿಬರುತ್ತಿದ್ದವು. ಆಯುಷ್ ವೈದ್ಯರು ಹೆರಿಗೆ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿತ್ತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಬೇಕೆಂಬ ಒತ್ತಾಯಕ್ಕೆ ಮಣಿದು ಸರ್ಕಾರ ಎಂ.ಬಿ.ಬಿ.ಎಸ್. ವೈದ್ಯರನ್ನು ನೇಮಕ ಮಾಡಿದ್ದರು. ಕಳೆದ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವೈದ್ಯರು ಇದೀಗ ಕಳೆದು ತಿಂಗಳು ವರ್ಗಾವಣೆ ಪಡೆದು ತೆರಳಿದ್ದಾರೆ. ಮಾತ್ರೆಗಳನ್ನು ಪಡೆದು ಹೋಗುತ್ತಿದ್ದಾರೆ. ತುರ್ತು ಸಂದರ್ಭ ಹಾಗೂ ಹೆರಿಗೆ ಪ್ರಕರಣಗಳಿಗೆ ಚೆಟ್ಟಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಮಡಿಕೇರಿ ಜಿಲ್ಲಾ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ. ಆದಷ್ಟು ಬೇಗ ಆರೋಗ್ಯ ಇಲಾಖೆ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಿ ರೋಗಿಗಳ ಚಿಕಿತ್ಸೆಗೆ ನೆರವಾಗಬೇಕಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ