ಕುಶಾಲನಗರ, ಜ. ೧೮: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ದೇಶದಾದ್ಯಂತ ಆರಂಭಗೊAಡ ಸರಕು ಸಾಗಾಣಿಕೆ ವಾಹನಗಳ ಅನಿರ್ದಿಷ್ಟ ಅವಧಿ ಮುಷ್ಕರ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಲಾರಿಗಳು ಮತ್ತು ಸರಕು ಸಾಗಾಣಿಕೆ ವಾಹನಗಳು ಸಂಪೂರ್ಣ ಸಂಚಾರ ಸ್ಥಗಿತಗೊಳಿಸಿದ್ದವು.
ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ, ಮಿನಿ ಲಾರಿ ಮಾಲೀಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮತ್ತು ಮಾಲೀಕರ ಸಂಘದ ನೇತೃತ್ವದಲ್ಲಿ ಮುಷ್ಕರ ನಡೆಯಿತು.
ಕುಶಾಲನಗರ ಮೂಲಕ ಹಾದು ಹೋಗುತ್ತಿದ್ದ ಎಲ್ಲ ಸರಕು ಸಾಗಾಣಿಕೆ ವಾಹನಗಳನ್ನು ಸ್ಥಗಿತಗೊಳಿಸಿ ಪಟ್ಟಣದ ಜಾತ್ರಾ ಮೈದಾನದಲ್ಲಿ ನಿಲ್ಲಿಸಲಾಗಿತ್ತು.
ಸ್ಥಳೀಯ ಸಂಘಟನೆಗಳ ಪ್ರಮುಖರು ಮುಷ್ಕರದಲ್ಲಿ ಪಾಲ್ಗೊಂಡ ಸರಕು ಸಾಗಾಣಿಕೆ ವಾಹನಗಳ ಚಾಲಕರು ಮತ್ತು ಮಾಲೀಕರು, ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟ ಉಪಚಾರ ಮಾಡಿದರು.
ಮುಷ್ಕರದ ಬಗ್ಗೆ ಮಾಹಿತಿ ನೀಡಿದ ಸಂಘಟನೆಗಳ ಪ್ರಮುಖರು ಮುಷ್ಕರಕ್ಕೆ ಬೆಂಬಲ ನೀಡುವಂತೆ ಕೋರಿದರು. ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರದ ಬಹುತೇಕ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಸರಕು ಸಾಗಾಟ ಸಂಪೂರ್ಣ ಬಂದ್ ಆಗಿತ್ತು.
ಈ ಸಂದರ್ಭ ಸಂಘಟನೆಗಳ ಪ್ರಮುಖರಾದ ಡಿ.ಕೆ. ಗಣೇಶ್, ಜಿ.ಎ. ಲೋಕೇಶ್, ದೊಡ್ಡಣ್ಣ, ಜಯಣ್ಣ, ರಫೀಕ್, ಸಂದೀಪ್ ಮತ್ತಿತರರು ಇದ್ದರು.
ಲಾರಿ ಮಾಲೀಕರಿಂದ ಮುಷ್ಕರ
ಕೂಡಿಗೆ, ಜ. ೧೮: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಲಾರಿ ಮಾಲೀಕರ ಸಂಘದ ವತಿಯಿಂದ ಅನಿರ್ದಿಷ್ಠಾವಧಿ ಕಾಲ ಮುಷ್ಕರ ವನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ೧೦ ವರ್ಷ ಜೈಲು, ೭ ಲಕ್ಷ ದಂಡ ಮಸೂದೆಯ ವಿರುದ್ಧ ಲಾರಿ ಮಾಲೀಕರು ಕೂಡ್ಲೂರು ಕೈಗಾರಿಕಾ ಕೇಂದ್ರದ ಹಾಸನ ಹೆದ್ದಾರಿಗೆ ಹೊಂದಿಕೊAಡಿರುವ ಮುಂಭಾಗದ ರಸ್ತೆಯ ಮುಂಭಾಗದಲ್ಲಿ ನೂರಾರು ಲಾರಿ ಮಾಲೀಕರು ಈ ಮಸೂದೆಯನ್ನು ರದ್ದುಗೊಳಿಸು ವಂತೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೆ.ಭೋಗಪ್ಪ, ಕಾರ್ಯದರ್ಶಿ ಹನುಮರಾಜ್, ಶ್ರೀ ದೊಡ್ಡಮ್ಮ ತಾಯಿ ಕಾಫಿ ಹಸ್ಕ್ ಅಸೋಸಿಯೇಷನ್ನ ಅಧ್ಯಕ್ಷ ಕೆ.ಬಿ. ರಾಘವೇಂದ್ರ, ಉಪಾಧ್ಯಕ್ಷ ಡಿ.ಕೆ. ಗಣೇಶ್, ಕಾರ್ಯದರ್ಶಿ ಹೆಚ್.ಕೆ. ರಾಘವೇಂದ್ರ, ಲಾರಿ ಮಾಲೀಕರು, ಚಾಲಕರಾದ ಧರ್ಮ, ಕುಮಾರ್, ಕರಿಯಣ್ಣ, ಮಂಜುನಾಥ, ರವಿ, ಯುವರಾಜ್, ರಂಗಸ್ವಾಮಿ, ಕೂಡ್ಲೂರು ಮಂಜುನಾಥ, ಸೇರಿದಂತೆ ಇನ್ನಿತರರು ಹಾಜರಿದ್ದರು.