ಸೋಮವಾರಪೇಟೆ, ಜ. ೧೮: ಪಟ್ಟಣದ ಮಡಿಕೇರಿ ರಸ್ತೆಯಲ್ಲಿ ಕಕ್ಕೆಹೊಳೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಹೊಸಸೇತುವೆ ಕಾಮಗಾರಿಗಾಗಿ ಮಣ್ಣು ತೆಗೆಯುತ್ತಿರುವುದರಿಂದ ಅಶ್ವಾರೂಢ ಶ್ರೀ ಬಸವೇಶ್ವರರ ಪ್ರತಿಮೆಗೆ ಆತಂಕ ಎದುರಾಗಿದೆ.

ಸೇತುವೆ ಕಾಮಗಾರಿಗಾಗಿ ಯಂತ್ರಗಳಿAದ ಮಣ್ಣನ್ನು ತೆಗೆಯಲಾಗುತ್ತಿದ್ದು, ಇದಕ್ಕೆ ಒತ್ತಿಕೊಂಡAತೆ ಇರುವ ಬಸವೇಶ್ವರ ಪ್ರತಿಮೆಯು ಕುಸಿಯುವ ಆತಂಕ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ೨೪ ವರ್ಷಗಳ ಹಿಂದೆ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ಸಮೀಪ ನಿರ್ಮಿಸಲಾಗಿರುವ ಅಶ್ವಾರೂಢ ಬಸವೇಶ್ವರ ಪ್ರತಿಮೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ ಎಂದು ವೀರಶೈವ ಸಮಾಜದ ಮುಖಂಡರು ಅಭಿಪ್ರಾಯಿಸಿದ್ದಾರೆ.